ಕೊರೊನಾ ವೈರೆಸ್ ಭೀತಿ ಇರುವುದರಿಂದ ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದಿನ ವರ್ಷ ಫೆಬ್ರವರಿ 28ಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಈ ರೀತಿ ನಾಲ್ಕು ತಿಂಗಳುಗಳ ಕಾಲ ಆಸ್ಕರ್ ಕಾರ್ಯಕ್ರಮವನ್ನು ಮುಂದೂಡಿರುವುದು 93 ವರ್ಷಗಳಲ್ಲಿ ಇದೇ ಮೊದಲ ಬಾರಿ.
ಆದ್ರೆ ಕೆಲವು ವರದಿಗಳ ಪ್ರಕಾರ, ಆಸ್ಕರ್ ಆಯೋಜಕರು ಈ ಕಾರ್ಯಕ್ರಮವನ್ನು ಇದೇ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಸುವಂತೆ ಕೇಳಿಕೊಂಡಿದ್ದಾರೆ. ಆದ್ರೆ ಈ ಕಾರ್ಯಕ್ರಮವು ಮುಂದಿನ ವರ್ಷ ಫೆಬ್ರವರಿ 28ಕ್ಕೆ ಮುಂದೂಡಲಾಗಿದೆ.
ಈ ಕಾರ್ಯಕ್ರಮ ಪ್ರತಿ ವರ್ಷ ಬೇಸಿಗೆ ನಂತರ ನಡೆಯುತ್ತಿದ್ದು, ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ನವೆಂಬರ್ ಮತ್ತು ಡಿಸೆಂಬರ್ನಲ್ಲಿ ನಾಮಿನೇಷನ್ಗೆ ಕಳುಹಿಸುತ್ತಿದ್ದರು. ಈ ಸಿನಿಮಾಗಳಿಗೆ ಅಕಾಡೆಮಿಯ ಸದಸ್ಯರು ಡಿಸೆಂಬರ್ನಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಿದ್ದರು.
ಈ ವರ್ಷ ಕೋವಿಡ್ 19 ಇರೋದ್ರಿಂದ ಕೆಲವು ಸಿನಿಮಾಗಳು ಇನ್ನೂ ಕೂಡ ಶೂಟಿಂಗ್ ಹಂತದಲ್ಲಿವೆ. ಇನ್ನು ಕೆಲವು ಸಿಮಿಮಾಗಳು ಶೂಟಿಂಗ್ ಮುಗಿಸಿ ರಿಲೀಸ್ಗೆ ರೆಡಿಯಾಗಿವೆ. ಅಂತಹ ಸಿನಿಮಾಗಲ್ಲಿ ಜೇಮ್ಸ್ ಬಾಂಡ್, ನೋ ಟೈಮ್ ಟು ಡೈ, ಟಾಪ್ ಗನ್, ಮುಲಾನ್ ಮುಂತಾದವು.
ಇದೇ ಕಾರಣದಿಂದ ಆಸ್ಕರ್ ಆಯೋಜಕರು ಈಗಿರುವ ಸಿನಿಮಾಗಳು ರಿಲೀಸ್ ಆದ ಮೇಲೆ, ಅಂದ್ರೆ ಕೆಲವು ತಿಂಗಳ ನಂತರ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಮಾತುಕತೆ ನಡೆಸಿದ್ದಾರೆ.