ETV Bharat / sitara

ಕನ್ನಡದ ಮೊದಲ ಪ್ಯಾರಾ ನಾರ್ಮಲ್ ಸಿನಿಮಾ ‘ಕಮರೊಟ್ಟು ಚೆಕ್ ಪೋಸ್ಟ್’ - undefined

ಪ್ಯಾರಾ ನಾರ್ಮಲ್ ಚಟುವಟಿಕೆ ಬಗ್ಗೆ ಹಲವಾರು ವರ್ಷ ಅಧ್ಯಯನ ಮಾಡಿರುವ ನಿಶಾ ವರ್ಮಾ, ಇಂಡಿಯನ್ ಪ್ಯಾರಾ ನಾರ್ಮಲ್ ಸೊಸೈಟಿ ಸದಸ್ಯೆ. ಕಮರೊಟ್ಟು ಚೆಕ್​ ಪೋಸ್ಟ್​ ಚಿತ್ರದಲ್ಲಿಯ ಸೈಕೋ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಕಮರೊಟ್ಟು ಚೆಕ್ ಪೋಸ್ಟ್
author img

By

Published : May 20, 2019, 9:33 AM IST

ಕನ್ನಡದಲ್ಲಿ ಅನೇಕ ಪ್ರಯೋಗಾತ್ಮಕ ಸಿನಿಮಾಗಳು ತೆರೆ ಕಂಡಿವೆ. ಅದರಲ್ಲೂ '6-5=2' ಸಿನಿಮಾ ತರುವಾತ ದೆವ್ವದ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗಿವೆ. ಇದೀಗ ಈ ಸಾಲಿಗೆ ಚೆಕ್ ಪೋಸ್ಟ್ ಹೊಸ ಸೇರ್ಪಡೆ. ಆದರೆ, ಈ ಸಿನಿಮಾದಲ್ಲಿ ಘೋಸ್ಟ್ ಚಟುವಟಿಕೆ ಅಗೋಚರವಾಗಿ ನಡೆಯುವಂತಹ ವಿಚಾರಗಳನ್ನಿಟ್ಟುಕೊಂಡಿದೆ. ಅದನ್ನು ಪ್ಯಾರಾ ನಾರ್ಮಲ್ ಎನ್ನುತ್ತಾರೆ.

ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಬಗೆಗಿನ ಚರ್ಚೆ, ಅವುಗಳಿಂದಾಗುವ ಅನುಭವ ಇಂದು ನಿನ್ನೆಯದಲ್ಲ. ಭೂತ ಅಥವಾ ಋಣಾತ್ಮಕ ಅಂಶ ಕಣ್ಣಿಗೆ ಗೋಚರಿಸದೆ, ಬೇರೆಯದೇ ವಿಧಾನದಿಂದ ತನ್ನ ಇರುವಿಕೆಯನ್ನು ಸೂಚಿಸುವುದೇ ಪ್ಯಾರಾ ನಾರ್ಮಲ್. ಇದನ್ನೇ ಕಮರೊಟ್ಟು ಚೆಕ್​ ಪೋಸ್ಟ್​​ನಲ್ಲಿ ಸೇರಿಸಿಕೊಳ್ಳಲಾಗಿದೆ. ಇದಕ್ಕೆ ವಿಶೇಷ ತರಬೇತಿ ಪಡೆದಿರುವ ನಿಶಾ ವರ್ಮಾ ಅವರನ್ನು ಈ ಸಿನಿಮಾಕ್ಕೆ ತಂದಿದ್ದಾರೆ ನಿರ್ದೇಶಕ ಎ. ಪರಮೇಶ್ ಹಾಗೂ ನಿರ್ಮಾಪಕ ಚೇತನ್ ರಾಜ್.

ಈ ಪ್ಯಾರಾ ನಾರ್ಮಲ್ ಚಟುವಟಿಕೆ ಕಣ್ಣಿಗೆ ಕಾಣುವುದಿಲ್ಲ. ಈ ಬಗ್ಗೆ ಹಲವಾರು ವರ್ಷ ಅಧ್ಯಯನ ಮಾಡಿರುವ ನಿಶಾ ವರ್ಮಾ, ಇಂಡಿಯನ್ ಪ್ಯಾರಾ ನಾರ್ಮಲ್ ಸೊಸೈಟಿ ಸದಸ್ಯೆ. ಕಮರೊಟ್ಟು ಚೆಕ್​ ಪೋಸ್ಟ್​ ಚಿತ್ರದಲ್ಲಿಯ ಸೈಕೋ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಮಹಿಳಾ ಪ್ಯಾರಾ ನಾರ್ಮಲ್ ಸರ್ಟಿಫಿಕೇಟ್ ಪಡೆದಿರುವ ವ್ಯಕ್ತಿಯನ್ನು ಭಾರತೀಯ ಚಿತ್ರರಂಗದಲ್ಲಿ ಪರಿಚಯ ಮಾಡಿಸಿದ ಕೀರ್ತಿ ಸಹ ಈ ಕನ್ನಡ ಚಿತ್ರಕ್ಕೆ ಸಲ್ಲುತ್ತದೆ.

Kamarottu  Checkpost
ನಿಶಾ ವರ್ಮ

ಅಷ್ಟೇ ಅಲ್ಲದೆ ನಿರ್ದೇಶಕ ಪರಮೇಶ್, ವಿಶ್ವದ ಪ್ರಥಮ ಅನಿಮೇಟೆಡ್ ಕೆಮಾಲಿಯನ್ ಪ್ರಾಣಿಯನ್ನು ಒಂದು ಪಾತ್ರವಾಗಿ ಬಳಸಿಕೊಂಡಿದ್ದಾರೆ. ವಿಶ್ವದ ಪ್ರಥಮ ಕ್ಯಾಂಡಿಡ್ ಕ್ಯಾಮರಾ ರೀತಿಯಲ್ಲಿ ತುಳುನಾಡಿನ ಭೂತಾರಧನೆಯ ಆಚರಣೆಯನ್ನು ಒಂದು ಹಾಡಿನಲ್ಲಿ ಚಿತ್ರೀಕರಿಸಲಾಗಿದೆ. ಈ ತುಳು ಗೀತೆಯನ್ನು ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ ಕನ್ನಡ ಚಿತ್ರದಲ್ಲಿ ಹಾಡಿದ್ದಾರೆ.

‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರದ ವಿಶೇಷಗಳ ಸಾಲಿಗೆ ಮತ್ತೊಂದು ಸೇರ್ಪಡೆ ಅಂದರೆ ಇದು ಸಂಗೀತ ನಿರ್ದೇಶಕ ಎ.ಟಿ. ರವೀಶ್​​ ಅವರ 25 ನೇ ಸಿನಿಮಾ. ಇವರು ಎರಡು ಹಾಡುಗಳಿಗೆ ರಾಗ ಸಂಯೋಜನೆ ಹಾಗೂ ಚಿತ್ರದ ಬಹು ಮುಖ್ಯ ಅಂಶ ರೀರೆಕಾರ್ಡಿಂಗ್ ಸಹ ಮಾಡಿದ್ದಾರೆ.

ಥ್ರಿಲ್ಲರ್ ಕಥಾ ವಸ್ತು ಹೊದಿರುವ ‘ಕಮರೊಟ್ಟು ಚೆಕ್ ಪೋಸ್ಟ್’ ತಾರಾಗಣದಲ್ಲಿ ಸನತ್ ಕುಮಾರ್, ಉತ್ಪಾಲ್, ಸ್ವಾತಿ ಕೊಂಡೆ, ಅಹಲ್ಯಾ ಸುರೇಶ್, ನಿಶಾ ವರ್ಮ, ಬೇಬಿ ಸಮೀಹ, ಗಡ್ಡಪ್ಪ ಇದ್ದಾರೆ.

ಕನ್ನಡದಲ್ಲಿ ಮೊದಲ ಪ್ಯಾರ ನಾರ್ಮಲ್ ಸಿನಿಮಾ ಕಮರೊಟ್ಟು ಚೆಕ್ ಪೋಸ್ಟ್

ಕನ್ನಡದಲ್ಲಿ ಅನೇಕ ಪ್ರಯೋಗಾತ್ಮಕ ಸಿನಿಮಗಳು ತೆರೆಯ ಮೇಲೆ ಅಪ್ಪಳಿಸಿದೆ. 6-5=2 ಸಿನಿಮಾ ಇಂದ ದೆವ್ವದ ಸಿನಿಮಾಗಳ ಸಂಖ್ಯೆ ಜಾಸ್ತಿಯೇ ಆಗಿದೆ. ಆದರೆ ಈ ಕಮರೊಟ್ಟು ಚೆಕ್ ಪೋಸ್ಟ್ ಘೋಸ್ಟ್ ಚಟುವಟಿಕೆ ಅಗೋಚರವಾಗಿ ನಡೆಯುವಂತಹ ವಿಚಾರಗಳನ್ನು ಇಟ್ಟುಕೊಂಡಿದೆ. ಅದನ್ನು ಪ್ಯಾರಾ ನಾರ್ಮಲ್ ಅನ್ನುತ್ತಾರೆ. ಅದಕ್ಕೆ ವಿಶೇಷ ತರಬೇತಿ ಪಡೆದಿರುವ ನಿಶ ವರ್ಮಾ ಅವರನ್ನು ಈ ಸಿನಿಮಾಕ್ಕೆ ತಂದಿದ್ದಾರೆ ನಿರ್ದೇಶಕ ಎ. ಪರಮೇಶ್ (ಈ ಹಿಂದೆ ಮಾಮು ಟಿ ಅಂಗಡಿ ನಿರ್ದೇಶನ ಮಾಡಿದವರು) ಹಾಗೂ ನಿರ್ಮಾಪಕ ಚೇತನ್ ರಾಜ್.

ಈ ಪ್ಯಾರಾ ನಾರ್ಮಲ್ ಚಟುವಟಿಕೆ ಕಣ್ಣಿಗೆ ಕಾಣುವುದಿಲ್ಲ. ಆದರೆ ಹಲವಾರು ವರ್ಷ ಅಧ್ಯಯನ ಮಾಡಿರುವ ನಿಶ ವರ್ಮಾ ಇಂಡಿಯನ್ ಪ್ಯಾರ ನಾರ್ಮಲ್ ಸೊಸೈಟಿ ಸದಸ್ಯೆ ಸೈಕಿಕ್ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡು ಮೊದಲ ಮಹಿಳಾ ಪ್ಯಾರ ನಾರ್ಮಲ್ ಸರ್ಟಿಫಿಕೇಟ್ ಪಡೆದಿರುವ ವ್ಯಕ್ತಿಯನ್ನು ಭಾರತೀಯ ಚಿತ್ರ ರಂಗದಲ್ಲಿ ಪರಿಚಯ ಮಾಡಿಸಿದ ಕೀರ್ತಿ ಸಹ ಈ ಕನ್ನಡ ಚಿತ್ರಕ್ಕೆ ಸಲ್ಲುತ್ತದೆ.

ಅಷ್ಟೇ ಅಲ್ಲದೆ ನಿರ್ದೇಶಕ ಪರಮೇಶ್ ವಿಶ್ವದ ಪ್ರಥಮ ಅನಿಮೇಟೆಡ್ ಕೆಮಾಲಿಯನ್ ಪ್ರಾಣಿಯನ್ನು ಒಂದು ಪಾತ್ರವಾಗಿ ಬಳಸಿಕೊಂಡಿದ್ದಾರೆ. ವಿಶ್ವದ ಪ್ರಥಮ ಕ್ಯಾಂಡಿಡ್ ಕ್ಯಾಮರಾ ರೀತಿಯಲ್ಲಿ ತುಳುನಾಡಿನ ಭೂತಾರಧನೆಯ ಆಚರಣೆಯನ್ನು ಹಾಡಿನ ಮೂಲಕ ಚಿತ್ರೀಕರಿಸಲಾಗಿದೆ. ತುಳು ಹಾಡು ಕನ್ನಡ ಚಿತ್ರದಲ್ಲಿ ಹಾಡಿರುವವರು ನಟ ಹಾಗೂ ನಿರ್ದೇಶಕ ನವೀನ್ ಕೃಷ್ಣ.

ಕಾಮಾರೊಟ್ಟು ಚೆಕ್ ಪೋಸ್ಟ್ ವಿಶೇಷಗಳ ಸಾಲಿಗೆ ಮತ್ತೊಂದು ಸೇರ್ಪಡೆ ಅಂದರೆ ಇದು ಸಂಗೀತ ನಿರ್ದೇಶಕ ಎ ಟಿ ರವಿಶ್ ಅವರ 25 ನೇ ಸಂಗೀತ ನಿರ್ದೇಶನದ ಸಿನಿಮಾ. ಎರಡು ಹಾಡುಗಳಿಗೆ ರಾಗ ಸಂಯೋಜನೆ ಹಾಗೂ ಚಿತ್ರದ ಬಹು ಮುಖ್ಯ ಅಂಶ ರಿರೆಕಾರ್ಡಿಂಗ್ ಸಹ ಎ ಟಿ ರವಿಶ್ ಮಾಡಿದ್ದಾರೆ.

ಥ್ರಿಲ್ಲರ್ ಕಥಾ ವಸ್ತು ಹೊದಿರುವ ಕಾಮಾರೊಟ್ಟು ಚೆಕ್ ಪೋಸ್ಟ್ ತಾರಾಗಣದಲ್ಲಿ ಸನತ್ ಕುಮಾರ್, ಉತ್ಪಾಲ್, ಸ್ವಾತಿ ಕೊಂಡೆ, ಅಹಲ್ಯ ಸುರೇಶ್, ನಿಶ ವರ್ಮ, ಬೇಬಿ ಸಮೀಹ, ಗಡ್ಡಪ್ಪ ಇದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.