ETV Bharat / sitara

ಗಾಳಿಪಟ-2 ಚಿತ್ರದ ಮೊದಲ ಮೋಷನ್ ಪಿಕ್ಚರ್ ಬಿಡುಗಡೆ

author img

By

Published : Jul 2, 2021, 3:32 PM IST

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೊದಲ ಮೋಷನ್ ಪಿಕ್ಚರ್ ಬಿಡುಗಡೆ ಮಾಡುವ ಮೂಲಕ ನಿರ್ಮಾಪಕ ಎಂ.ರಮೇಶ್ ರೆಡ್ಡಿ ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಬರ್ತ್‌ಡೇ ಉಡುಗೊರೆ ನೀಡಿದ್ದಾರೆ.

golden star ganesh
ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್​ ಸ್ಟಾರ್​ ಗಣೇಶ್​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ - 2 ಚಿತ್ರದ ಮೊದಲ ಮೋಷನ್ ಪಿಕ್ಚರ್ ಅನ್ನು ಇಂದೇ ಬಿಡುಗಡೆ ಮಾಡುವ ಮೂಲಕ, ನಿರ್ಮಾಪಕ ಎಂ. ರಮೇಶ್ ರೆಡ್ಡಿ ಅವರು ಗಣೇಶ್​ ಹುಟ್ಟುಹಬ್ಬದ ಉಡುಗೊರೆ ಕೊಟ್ಟರು.

  • " class="align-text-top noRightClick twitterSection" data="">

ಈಗಾಗಲೇ ಗಣೇಶ್ ನಟನೆಯ ಬಹುನಿರೀಕ್ಷೆಯ ಸಖತ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಜತೆಗೆ ತ್ರಿಬಲ್ ರೈಡಿಂಗ್ ಸಿನಿಮಾದ ಹೊಸ ಪೋಸ್ಟರ್ ಅನ್ನು ಚಿತ್ರತಂಡ ಅನಾವರಣಗೊಳಿಸಿದೆ. ಇಂದು ಗಾಳಿಪಟ-2 ಚಿತ್ರದ ಮೊದಲ ಮೋಷನ್ ಪಿಕ್ಚರ್ ಬಿಡುಗಡೆಯಾಗಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಗಾಳಿಪಟವನ್ನಿಡಿದು ಜಲಪಾತದ ಬಳಿ ನಟ ಗಣೇಶ್​ ಕುಳಿತಿರುವ ದೃಶ್ಯವು ಸಿನಿಮಾ ಹೇಗಿರಬಹುದೆಂಬ ಕುತೂಹಲಕ್ಕೆ ಕಾರಣವಾಗಿದೆ.

first motion picture of galipata 2 film released
ಗಾಳಿಪಟ 2 ಚಿತ್ರದ ಮೊದಲ ಮೋಷನ್ ಪಿಕ್ಚರ್ ಬಿಡುಗಡೆ

ಇನ್ನು ನಿರ್ದೇಶಕ ಪ್ರಶಾಂತ್ ರಾಜ್ ಝೂಮ್​​ ಬಳಿಕ ಗಣೇಶ್ ಜತೆ ಮತ್ತೊಂದು ಸಿನಿಮಾ ಅನೌನ್ಸ್​​ ಮಾಡಿದ್ದು, ಇದರ ಪ್ರೊಡಕ್ಷನ್ಸ್ 07 ಹೆಸರಲ್ಲಿ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ಹೀಗೆ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬಕ್ಕೆ ಸಖತ್, ತ್ರಿಬಲ್ ರೈಡಿಂಗ್ ಮತ್ತು ಗಾಳಿಪಟ-2 ಚಿತ್ರತಂಡದಿಂದ ಉಡುಗೊರೆ ಸಿಕ್ಕಂತಾಗಿದೆ.

ಗಾಳಿಪಟ-1 ಚಿತ್ರವು ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶಿದ ಯಶಸ್ವಿ ಚಿತ್ರಗಳಲ್ಲೊಂದು. ಚಿತ್ರವು ನಿರ್ಮಾಣ ಹಂತದಲ್ಲೇ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿತ್ತು. ಬಿಡುಗಡೆಯಾದ ನಂತರ ಚಿತ್ರ ಭಾರೀ ಯಶಸ್ಸು ಕಂಡಿತ್ತು. ಇದೀಗ ಗಾಳಿಪಟ-2 ಚಿತ್ರದಲ್ಲಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ನಟಿಸಿದ್ದು, ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.