ETV Bharat / sitara

ಕೋವಿಡ್​​ ಸಂಕಷ್ಟ ಕಾಲಕ್ಕೆ ರಿಯಲ್​ ಹಿರೋಗಳಾದ ಸಿನಿ ತಾರೆಯರು: ಇವರೇ ಆ 'ಆಪತ್ಬಾಂಧವರು' - ಸೋನು ಸೂದ್ ಚಾರಿಟಬಲ್ ಟ್ರಸ್ಟ್

ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಹೀಗೆ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಕೊರೊನಾ ಆರಂಭದಿಂದಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ಹಲವಾರು ನಟ ನಟಿಯರು ರಿಯಲ್ ಹೀರೋಗಳಾಗಿದ್ದಾರೆ.

film-actors-and-actress-are-helping-poor-people-who-are-suffering-from-covid
ಕೋವಿಡ್​ ಸಂಕಷ್ಟಕ್ಕೆ ಕೈ ಜೋಡಿಸಿದ ಸಿನಿ ತಾರೆಯರು
author img

By

Published : May 8, 2021, 7:14 PM IST

Updated : May 8, 2021, 7:52 PM IST

ದೇಶದೆಲ್ಲೆಡೆ, ಕೊರೊನಾದ ಎರಡನೇ ಅಲೆ ಭೀತಿ ಹುಟ್ಟಿಸಿದ್ದು, ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ ತಾರೆಯರು ಜನರ ಕಷ್ಟಕ್ಕೆ ಮಿಡಿದಿದ್ದು, ಸಹಾಯ ಹಸ್ತ ಚಾಚಿದ್ದಾರೆ.

ಹೌದು, ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆತಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಹೀಗೆ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯ ಚಿಕಿತ್ಸೆ ಸಿಗದೇ ರೋಗಿಗಳು ಪರದಾಡುತ್ತಿದ್ದಾರೆ. ಕೊರೊನಾ ಆರಂಭದಿಂದಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ಮೊಟ್ಟ ಮೊದಲ ನಟ ಸೋನು ಸೂದ್.

film-actors-and-actress-are-helping-poor-people-who-are-suffering-from-covid
ನಟ ಸೋನು ಸೂದ್

ಬೆಂಗಳೂರು ಪೊಲೀಸರಿಗೆ ಆಮ್ಲಜನಕ ಸಾಂದ್ರಕ ಯಂತ್ರ ನೀಡಿದ ಸೋನು ಸೂದ್​​: ದೇಶದ ಹಲವು ರಾಜ್ಯಗಳಲ್ಲಿ ತಮ್ಮ ಕೈಲಾದ ಸಹಾಯ ಮಾಡ್ತಾ ಬಂದಿರುವ ಸೋನು ಸೂದ್, ಬೆಂಗಳೂರು ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಬಳಕೆಗೆಂದು ಆಮ್ಲಜನಕ ಸಾಂದ್ರಕ ಯಂತ್ರವನ್ನು ಸೂದ್ ನೀಡಿದ್ರು. ಸೋನು ನೀಡಿರುವ ಕಾನ್ಸನ್‌ಟ್ರೇಟರ್​ಗಳನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಸ್ವೀಕರಿಸಿದ್ದಾರೆ. ಸೋನು ಸೂದ್ ಚಾರಿಟಬಲ್ ಟ್ರಸ್ಟ್‌ನ ಹಶ್ಮತ್ ಎಂಬುವರು ಕಮಲ್ ಪಂಥ್ ಅವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಯಂತ್ರವನ್ನು ತಲುಪಿಸಿದರು.

ಆಪತ್ಬಾಂಧವ 'ಸೋನು ಸೂದ್ ಚಾರಿಟಬಲ್ ಟ್ರಸ್ಟ್': ಇದರ ಜೊತೆಗೆ ಬೆಂಗಳೂರಿನ ಯಲಹಂಕದ ನ್ಯೂ ಟೌನ್​ನಲ್ಲಿರುವ ಅರ್ಕ ಹಾಸ್ಪಿಟಲ್​ನಲ್ಲಿ, 15 ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರಿಗೆ ಆಮ್ಲಜನಕದ ಅವಶ್ಯಕತೆ ಇತ್ತು. ಆಗ ಯಲಹಂಕ ನ್ಯೂ ಟೌನ್ ಪೊಲೀಸ್ ಸ್ಟೇಷನ್‌ನ ಇನ್ಸ್ ಪೆಕ್ಟರ್ ಸತ್ಯನಾರಾಯಣ್ ನಟ ಸೋನು ಸೂದ್ ಚಾರಿಟಬಲ್ ಟ್ರಸ್ಟ್ ಸದಸ್ಯರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಕೂಡಲೇ ಸದಸ್ಯರು ತಡರಾತ್ರಿ 01.30 ಕ್ಕೆ ಬೈಕ್ ಹಾಗೂ ಕಾರುಗಳಲ್ಲಿ 11 ಆಕ್ಸಿಜನ್ ಸಿಲಿಂಡರ್ ಒದಗಿಸುವ ಮೂಲಕ ಆಸ್ಪತ್ರೆಯಲ್ಲಿರುವ ರೋಗಿಗಳ ಜೀವ ಉಳಿಸಲು ನೆರವಾಗಿದ್ರು.

ಆ್ಯಕ್ಷನ್​ ಕಿಂಗ್​​ ದಂಪತಿ

100 ಆಮ್ಮಜನಕ ಸಾಂದ್ರಕಗಳನ್ನು ನೀಡಿದ ಆ್ಯಕ್ಷನ್​ ಕಿಂಗ್​​ ದಂಪತಿ: ಇನ್ನು ಸೋನ್ ಸೂದ್ ಬಳಿಕ ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಕಷ್ಟದಲ್ಲಿರುವ ಸೋಂಕಿತರಿಗೆ ಸಹಾಯ ಮಾಡಿದ್ದಾರೆ. ಪತ್ನಿ ಟ್ವಿಂಕಲ್ ಖನ್ನಾ ಜೊತೆಗೂಡಿ100 ಆಮ್ಲಜನಕ ಸಾಂದ್ರಕಗಳನ್ನು ನೆರವು ನೀಡಿದ್ದಾರೆ.

ನಟ ಸುನೀಲ್​ ಶೆಟ್ಟಿ

ಮನೆ ಮನೆಗೆ ಆಕ್ಸಿಜನ್​ ಸಾಂದ್ರಕ ಯಂತ್ರ ನೀಡಿದ ನಟ ಸುನೀಲ್​ ಶೆಟ್ಟಿ: ಅಲ್ಲದೇ ಬಾಲಿವುಡ್ ನಟ ಹಾಗೂ ನಮ್ಮ ಕನ್ನಡದವರಾದ ಸುನಿಲ್ ಶೆಟ್ಟಿ ಕೂಡ ಕೊರೊನಾ ಕಷ್ಟದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಕೆವಿಎನ್ ಫೌಂಡೇಶನ್‌ ಸಹಯೋಗದೊಂದಿಗೆ ಸುನಿಲ್ ಶೆಟ್ಟಿ, ಕಷ್ಟದಲ್ಲಿರುವ ಮನೆಗಳಿಗೆ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ನೀಡುತ್ತಿದ್ದಾರೆ. ಅತ್ಯಂತ ಹೆಚ್ಚು ಅವಶ್ಯಕತೆ ಇರುವ ಬೆಂಗಳೂರು ಹಾಗೂ ಮುಂಬೈಗಳಲ್ಲಿ ಈ ಯಂತ್ರಗಳನ್ನು ಸುನೀಲ್ ಶೆಟ್ಟಿ ವಿತರಿಸಿದ್ದಾರೆ.

ನಟ ಸಲ್ಮಾನ್​ ಖಾನ್

ಕೋವಿಡ್​ ವಾರಿಯರ್ಸ್​​ ಬೆನ್ನಿಗೆ ನಿಂತ ಸಲ್ಮಾನ್​ ಖಾನ್​​​: ಇನ್ನು ಕಳೆದ ವರ್ಷ ಕಷ್ಟದಲ್ಲಿದ್ದ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಲ್ಮಾನ್ ಖಾನ್​​ ಮಾನವೀಯತೆ ಮೆರೆದಿದ್ದರು. ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ವತಿಯಿಂದ ಸಹಾಯಕಾರ್ಯ ಮಾಡುತ್ತಿದ್ದಾರೆ. ಮುಂಬೈ ನಗರದಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಪೊಲೀಸರು, ಬಿಎಂಸಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ನೆರವಿಗೆ ಸಲ್ಮಾನ್ ಖಾನ್ ನಿಂತಿದ್ರು, ಅಷ್ಟೇ ಅಲ್ಲಾ ಖುದ್ದು ಸಲ್ಮಾನ್ ಖಾನ್ ಆಹಾರ ಟ್ರಕ್‌ಗಳನ್ನು ಕಳುಹಿಸಿ ಕೊಡುವ ಕೆಲಸ ಮಾಡಿದರು.

ನಟ ಸುದೀಪ್​

300 ಆಕ್ಸಿಜನ್​​​ ಸಿಲಿಂಡರ್​ ನೀಡಿದ ಕಿಚ್ಚ ಸುದೀಪ್​​​​: ಬಾಲಿವುಡ್ ಅಲ್ಲದೇ ಸ್ಯಾಂಡಲ್ ವುಡ್ ನಲ್ಲಿ ಕೆಲ ಸೆಲೆಬ್ರಿಟಿಗಳು ತಮ್ಮ ಕೈಲಾಸ ಸಹಾಯ ಮಾಡ್ತಾ ಇದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಕೂಡ ಕೊರೊನಾ ಕಷ್ಟದಲ್ಲಿರುವ ಜನರ ಸಹಾಯಕ್ಕೆ ಬಂದಿದ್ದಾರೆ. ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊರೊನಾ ರೋಗಿಗಳಿಗೆ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಕೊಡುವ ಕೆಲಸವನ್ನ ಮಾಡಿದರು.ಇದು ಅಭಿಮಾನಿಗಳಿಗೆ ಮೆಚ್ಚುಗೆ ಪಾತ್ರವಾಗಿತ್ತು.

ನಟಿ ರಾಗಿಣಿ ದ್ವಿವೇದಿ

ಕೊರೊನಾ​​​​ ವಾರಿಯರ್ಸ್​​​ ಜೊತೆ ಕೈ ಜೋಡಿಸಿ ನಟಿ ರಾಗಿಣಿ ದ್ವಿವೇದಿ: ಕಳೆದ ವರ್ಷ ಕೊರೊನಾ ಹೆಚ್ಚಾದಾಗ, ಸ್ಯಾಂಡಲ್ ವುಡ್​ ಬೋಲ್ಡ್ ನಟಿ ರಾಗಿಣಿ ದ್ವಿವೇದಿ, ಪೌರ ಕಾರ್ಮಿಕರಿಗೆ, ಪೊಲೀಸರಿಗೆ, ವೈದ್ಯರಿಗೆ ಊಟ ವ್ಯವಸ್ಥೆಯನ್ನ ಮಾಡುವ ಮೂಲಕ ಕೋವಿಡ್​ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದರು. ಡ್ರಗ್ಸ್ ಪ್ರಕರಣದಿಂದ ಸ್ವಲ್ಪ ನೊಂದಿದ್ದ ರಾಗಿಣಿ, ಈ ಬಾರಿಯೂ ರಸ್ತೆಗಿಳಿದು, ಕೋವಿಡ್‌ ವಾರಿಯರ್‌ಗಳಿಗೆ ಸಹಾಯ ಮಾಡುತ್ತಿದ್ದಾರೆ. ಸ್ಮಶಾನದ ಸಿಬ್ಬಂದಿಗೆ ಫುಡ್‌ ಕಿಟ್‌, ಪೊಲೀಸರು ಮತ್ತು ಸ್ವಯಂಸೇವಕರಿಗೆ, ರೈಲುಗಳಲ್ಲಿ ಪ್ರಯಾಣ ಮಾಡುತ್ತಿರುವವರಿಗೆ ಆಹಾರದ ಪೊಟ್ಟಣಗಳನ್ನು ತಮ್ಮ ಸ್ವಯಂ ಸೇವಾ ಸಂಸ್ಥೆ ಮೂಲಕ ವಿತರಣೆ ಮಾಡುತ್ತಿದ್ದಾರೆ.

ನಟ ಭುವನ್​ ಪೊನ್ನಣ್

ಹೆಲ್ಪ್​ಲೈನ್​ ಆರಂಭಿಸಿದ ಭುವನ್​ ಪೊನ್ನಣ್ಣ: ಇನ್ನು ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಕಾರ್ಮಿಕರ ಹಸಿವನ್ನ ಭುವನ್‌ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ನೀಗಿಸುವ ಕೆಲಸ ಮಾಡಿದರು.ಈಗ ಮತ್ತೆ ಕೊರೊನಾ ಸಂಕಷ್ಟದಲ್ಲಿ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚಾ ಈ ಬಾರಿ ಕೋವಿಡ್‌ ಹೆಲ್ಪ್‌ 24/7 ಎಂಬ ಟ್ರಸ್ಟ್‌ ಆರಂಭಿಸಿ ಆ ಮೂಲಕ ಸೋಂಕಿತರ ಸಹಾಯಕ್ಕೆ ನಿಂತಿದ್ದಾರೆ.

ನಟಿ ಸಂಜನಾ ಗರ್ಲಾನಿ

ಹಸಿದ ಹೊಟ್ಟೆ ತುಂಬಿಸುತ್ತಿರುವ ಸಂಜನಾ: ಇತ್ತ ನಟಿ ಸಂಜನಾ ಗರ್ಲಾನಿ ಕೂಡ, ಕೊರೊನಾ ಎರಡನೇ ಅಲೆಯಲ್ಲಿ, ಕಷ್ಟ ಪಡುತ್ತಿರುವ ಕಾರ್ಮಿಕರ ಹೊಟ್ಟೆ ತುಂಬಿಸುವ ಕೆಲಸ ಮಾಡುದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಹೆಚ್ಚು ಸುದ್ದಿಯಾದ ಸಂಜನಾ ಈ ಕೊರೊನಾ ಸಮಯಲ್ಲಿ ಸಂಜನಾ ಫೌಂಡೇಷನ್ ವತಿಯಿಂದ ಹೊಟ್ಟೆ ಹಸಿದವರಿಗೆ ಊಟ ನೀಡುತ್ತಿದ್ದಾರೆ.

ಒಟ್ಟಾರೆ ಕೊರೊನಾ ಎರಡನೇ ಅಲೆಯಲ್ಲಿ ಕಷ್ಟ ಪಡುತ್ತಿರುವ ಜನರ ಕಷ್ಟಕ್ಕೆ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ತಾರೆಯರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ರಿಯಲ್ ಹೀರೋಗಳು ಅಂತಾ ಕರೆಯಿಸಿಕೊಂಡಿದ್ದಾರೆ.

Last Updated : May 8, 2021, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.