ETV Bharat / sitara

ಸ್ಯಾಂಡಲ್​​​​ವುಡ್​ ಮತ್ತು ಟಾಲಿವುಡ್​​ನಲ್ಲಿ ಒಟ್ಟಿಗೆ ಎಂಟ್ರಿ ನೀಡಲು ಜನಾರ್ದನ ರೆಡ್ಡಿ ಪುತ್ರ ರೆಡಿ.. - ಸ್ಯಾಂಡಲ್​​​​ವುಡ್​ ಎಂಟ್ರಿ ನೀಡಲು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ರೆಡಿ

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾಜಿ ಗಣಿ ದಣಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯದಲ್ಲೇ ಕಿರೀಟಿ ರೆಡ್ಡಿ ಫೋಟೋಶೂಟ್ ಮಾಡಿಸಿ, ಅದ್ಧೂರಿಯಾಗಿ ಲಾಂಚ್ ಮಾಡಲು ನಿರ್ದೇಶಕ ರಾಧಕೃಷ್ಣ ಮತ್ತು ತಂಡ ಸಜ್ಜಾಗಿದೆ.

ಸ್ಯಾಂಡಲ್​​​​ವುಡ್​ ಮತ್ತು ಟಾಲಿವುಡ್​​ನಲ್ಲಿ ಒಟ್ಟಿಗೆ ಎಂಟ್ರಿ ನೀಡಲು ಜನಾರ್ದನ ರೆಡ್ಡಿ ಪುತ್ರ ರೆಡಿ

author img

By

Published : Jan 4, 2022, 7:17 PM IST

ಸ್ಟಾರ್ ನಟರು ಹಾಗು ರಾಜಕಾರಣಿ ಮಕ್ಕಳು ಸಿನಿಮಾ ರಂಗಕ್ಕೆ ಬರೋದು ಹೊಸತೇನಲ್ಲ. ಈಗಾಗಲೇ ಹೆಚ್​​. ಡಿ. ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ, ಚೆಲುವರಾಯ ಸ್ವಾಮಿ ಮಗ ಸಚಿನ್, ಜಮೀರ್​ ಅಹಮದ್​​ ಪುತ್ರ ಝೈದ್ ಖಾನ್ ಸೇರಿದಂತೆ ಸಾಕಷ್ಟು ರಾಜಕಾರಣಿಗಳ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಕಿರೀಟಿ ರೆಡ್ಡಿ
ಕಿರೀಟಿ ರೆಡ್ಡಿ

ಹೌದು, ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಬರ್ತಾರೆ ಎಂಬ ಮಾತುಗಳು, ಕೆಲವು ವರ್ಷಗಳ ಹಿಂದೆ ಕೇಳಿ ಬಂದಿದ್ದವು. ಜನಾರ್ದನ ರೆಡ್ಡಿ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ, ಕಿರೀಟಿ ರೆಡ್ಡಿ ಎಲ್ಲರೂ ಮೆಚ್ಚುವಂತೆ ಡ್ಯಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡ, ಮಗ ಕಿರೀಟಿ ರೆಡ್ಡಿ ಡ್ಯಾನ್ಸ್ ಕಲೆ ನೋಡಿ ಬೆರಾಗಾಗಿದ್ದರು. ಆ ಸಮಯದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸಿನಿಮಾಗೆ ಬರ್ತಾರೆ ಅಂತಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಅಂತೆಯೇ ಜನಾರ್ದನ ರೆಡ್ಡಿ ಮಗನ ಸಿನಿಮಾ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. ಹಾಗಾದ್ರೆ ಮಾಚಿ ಸಚಿವ ಜನಾರ್ದನ ರೆಡ್ಡಿ ಮಗನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಯಾರು? ಯಾರು ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಿರೀಟಿ ರೆಡ್ಡಿ
ಕಿರೀಟಿ ರೆಡ್ಡಿ

ಪಿಆರ್‌ಕೆ ಬ್ಯಾನರ್‌ನಲ್ಲಿ, ಮಾಯಾಬಜಾರ್‌ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರು, ಕಿರೀಟಿ ರೆಡ್ಡಿಯನ್ನ ಲಾಂಚ್ ಮಾಡುವ ಹೊಣೆ ಹೊತ್ತಿದ್ದಾರೆ. ಈ ಬಗ್ಗೆ 'ಈಟಿವಿ ಭಾರತ' ಜೊತೆ ಮಾತನಾಡಿದ ರಾಧಕೃಷ್ಣ, ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವುದು ನಿಜ ಅಂತಾ ಒಪ್ಪಿಕೊಂಡಿದ್ದಾರೆ.

ರಾಧಕೃಷ್ಣ ಹೇಳುವ ಪ್ರಕಾರ ಈಗಾಗಲೇ ಕಿರೀಟಿ ರೆಡ್ಡಿ ಆ್ಯಕ್ಟಿಂಗ್ ಕ್ಲಾಸ್, ಡ್ಯಾನ್ಸ್ ಅಭ್ಯಾಸವನ್ನ ಮಾಡುತ್ತಿದ್ದಾರಂತೆ. ಚಿಕ್ಕ ವಯಸ್ಸಿನಲ್ಲೇ ಕಿರೀಟಿ ರೆಡ್ಡಿ ಸಿನಿಮಾ ನಟನಾಗುವ ಕನಸು ಕಂಡಿದ್ದರಂತೆ. ಕಿರೀಟಿ ರೆಡ್ಡಿಗೆ ಈ ಸಿನಿಮಾ ವ್ಯಾಮೋಹ ಬೆಳೆಯೋದಿಕ್ಕೆ ಕಾರಣ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜಾಕಿ ಸಿನಿಮಾವಂತೆ. ಜಾಕಿ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ಪುನೀತ್ ರಾಜ್‌ಕುಮಾರ್ ಅವರೊಟ್ಟಿಗೆ ಸಿನಿಮಾ ನೋಡುವ ಅವಕಾಶ ಕಿರೀಟಿಗೆ ಸಿಕ್ಕಿತ್ತಂತೆ.

ಪುನೀತ್ ಕೂಡ ಆಗ ಕಿರೀಟಿಗೆ ಸಿನಿಮಾ ಬಗ್ಗೆ ಸಾಕಷ್ಟು ಸಲಹೆ ಸೂಚನೆಗಳನ್ನ ಕೊಟ್ಟಿದ್ದರಂತೆ. ಇದರ ಜೊತೆಗೆ ಜನಾರ್ದನ ರೆಡ್ಡಿಯವರೂ ಕೂಡ, ಕನ್ನಡ ಚಿತ್ರರಂಗ ಹಾಗು ಸಾಕಷ್ಟು ಸಿನಿಮಾ ಸ್ಟಾರ್​ಗಳ ಜೊತೆ ಒಳ್ಳೆ ಒಡನಾಟ ಹೊಂದಿದ್ದಾರೆ. ಹೀಗಾಗಿ ಮಗನಿಗೆ ಸಿನಿಮಾ ಹೀರೋ ಆಗೋಕೆ ಬೇಕಾಗುವ ಎಲ್ಲಾ ತರಬೇತಿಗಳನ್ನ ಕೊಡಿಸಿ, ಚಿತ್ರರಂಗಕ್ಕೆ ಪರಿಚಯಿಸಲು ರೆಡಿಯಾಗಿದ್ದಾರೆ. ಕಿರೀಟಿ ರೆಡ್ಡಿ ಕೂಡ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ನಟನೆಗೆ ಸಂಬಂಧಿಸಿದ ತರಬೇತಿಯನ್ನು ಪಡೆದಿದ್ದಾರಂತೆ.

ಆ್ಯಕ್ಷನ್ ಮಾಡೋದಿಕ್ಕೆ ಮಾರ್ಷಲ್ ಆರ್ಟ್ಸ್ ಕಲೆಯನ್ನ ಕಿರೀಟಿ ರೆಡ್ಡಿ ಅಭ್ಯಾಸ ಮಾಡಿದ್ದಾರಂತೆ. ಸದ್ಯ ಕಿರೀಟಿ ರೆಡ್ಡಿ ಪ್ರತಿದಿನ ಜಿಮ್‌ ನಲ್ಲಿ ವರ್ಕ್ ಔಟ್, ಜೊತೆಗೆ ಡ್ಯಾನ್ಸ್‌ ಕ್ಲಾಸ್ ಅಂತಾ ನಟನೆಗೆ ಬೇಕಾಗುವ ಸಿದ್ಧತೆಗಳನ್ನ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಈಗ, ಲೆಜೆಂಡ್, ಯುದ್ಧಂ ಶರಣಂ ಹೀಗೆ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸಾಯಿ ಕೊರ್ರಪಾಟಿ ಅವರು ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಕಿರೀಟಿ ರೆಡ್ಡಿ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯದಲ್ಲೇ ಕಿರೀಟಿ ರೆಡ್ಡಿ ಫೋಟೋಶೂಟ್ ಮಾಡಿಸಿ, ಅದ್ಧೂರಿಯಾಗಿ ಲಾಂಚ್ ಮಾಡುಲು ನಿರ್ದೇಶಕ ರಾಧಕೃಷ್ಣ ಮತ್ತು ತಂಡ ಸಜ್ಜಾಗಿದೆ. ಸದ್ಯದಲ್ಲೇ ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಸಿನಿಮಾದ ಮತ್ತಷ್ಟು ಹೊಸ ಅಪ್ಡೇಟ್ಸ್ ಕೊಡ್ತಿನಿ ಅಂತಾ ನಿರ್ದೇಶಕ ರಾಧಕೃಷ್ಣ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.