ETV Bharat / sitara

ಭಾರೀ ಮೊತ್ತಕ್ಕೆ ಮಾರಾಟವಾಯ್ತು 'ಏಕ್ ಲವ್ ಯಾ' ಆಡಿಯೋ ಹಕ್ಕು

author img

By

Published : Jan 31, 2020, 2:19 PM IST

'ಏಕ್ ಲವ್ ಯಾ' ಚಿತ್ರದ ಆಡಿಯೋ ರೈಟ್ಸ್ ಒಳ್ಳೆ ಬೆಲೆಗೆ ಮಾರಾಟ ಆಗಿದೆ ಎನ್ನಲಾಗಿದೆ. ಪ್ರೇಮ್ ತಮ್ಮ ಚಿತ್ರದ ಆಡಿಯೋಗೆ 1.8 ಕೋಟಿ ರೂಪಾಯಿ ಕೇಳಿದ್ದರಂತೆ. ಆದರೆ A2 ಮ್ಯೂಸಿಕ್ ಸಂಸ್ಥೆ 81 ಲಕ್ಷ ರೂಪಾಯಿ ಕೊಟ್ಟು ಆಡಿಯೋ ಖರೀದಿಸಿದೆ‌‌. ಇದಕ್ಕೂ ಮುನ್ನ ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ, ಜೋಗಯ್ಯ, ಪ್ರೀತಿ ಏಕೆ ಭೂಮಿ ಮೇಲಿದೆ ಸಿನಿಮಾದ ಆಡಿಯೋವನ್ನು ಅಶ್ವಿನಿ ಆಡಿಯೋ ಸಂಸ್ಥೆ ಖರೀದಿಸಿತ್ತು.

Ek love ya
'ಏಕ್ ಲವ್ ಯಾ'

'ದಿ ವಿಲನ್' ಸಿನಿಮಾ ನಂತರ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ ಸಿನಿಮಾ ಏಕ್ ಲವ್ ಯಾ. ರಕ್ಷಿತ ಪ್ರೇಮ್ ಸಹೋದರ ಅಭಿಷೇಕ್ ರಾವ್ , ರಾಣಾ ಎಂದು ಹೆಸರು ಬದಲಾಯಿಸಿಕೊಂಡು, 'ಏಕ್ ಲವ್ ಯಾ' ಸಿನಿಮಾ ಹೀರೋ ಆಗಿ ಸ್ಯಾಂಡಲ್​​ವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಪೋಸ್ಟರ್ ಹಾಗೂ ಹಾಡುಗಳಿಂದ ಸುದ್ದಿಯಾಗಿರುವ 'ಏಕ್ ಲವ್ ಯಾ' ಸಿನಿಮಾ ಅಡ್ಡದಿಂದ ಮತ್ತೊಂದು ನ್ಯೂಸ್ ಹೊರ ಬಿದ್ದಿದೆ.

Ek love ya
ಭಾರೀ ಮೊತ್ತಕ್ಕೆ 'ಏಕ್ ಲವ್ ಯಾ' ಆಡಿಯೋ ಮಾರಾಟ

'ಏಕ್ ಲವ್ ಯಾ' ಚಿತ್ರದ ಆಡಿಯೋ ರೈಟ್ಸ್ ಒಳ್ಳೆ ಬೆಲೆಗೆ ಮಾರಾಟ ಆಗಿದೆ ಎನ್ನಲಾಗಿದೆ. ಪ್ರೇಮ್ ತಮ್ಮ ಚಿತ್ರದ ಆಡಿಯೋಗೆ 1.8 ಕೋಟಿ ರೂಪಾಯಿ ಕೇಳಿದ್ದರಂತೆ. ಆದರೆ A2 ಮ್ಯೂಸಿಕ್ ಸಂಸ್ಥೆ 81 ಲಕ್ಷ ರೂಪಾಯಿ ಕೊಟ್ಟು ಆಡಿಯೋ ಖರೀದಿಸಿದೆ‌‌. ಇದಕ್ಕೂ ಮುನ್ನ ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ, ಜೋಗಯ್ಯ, ಪ್ರೀತಿ ಏಕೆ ಭೂಮಿ ಮೇಲಿದೆ ಸಿನಿಮಾದ ಆಡಿಯೋವನ್ನು ಅಶ್ವಿನಿ ಆಡಿಯೋ ಸಂಸ್ಥೆ ಖರೀದಿಸಿತ್ತು. ಈಗ ಅದೇ ಆಡಿಯೋ ಸಂಸ್ಥೆ A2 ಅಂತಾ ಹೆಸರು ಬದಲಿಸಿಕೊಂಡಿದೆ.ಇಷ್ಟು ಮೊತ್ತಕ್ಕೆ ಆಡಿಯೋ ಸೇಲ್ ಆಗಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಯುವ ನಟ ರಾಣಾ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಕೊಡಗಿನ ಕುವರಿ ಯುವ ನಟಿ ರೀಷ್ಮಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿ ಪ್ರೇಮ್ ಪತ್ನಿ ರಕ್ಷಿತ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಫೆಬ್ರವರಿ 8 ಕ್ಕೆ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಫೆಬ್ರವರಿ 14 ವ್ಯಾಲೆಂಟೈನ್ ಡೇಯಂದು ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ ಎನ್ನಲಾಗಿದೆ.

Ek love ya
ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ'

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.