ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ಏಪ್ರಿಲ್ 15ರಂದು ರಿಲೀಸ್ ಆಗುತ್ತಿದೆ. ಈಗಗಲೇ ಸಿನಿಮಾದ ಬಗ್ಗೆ ಕ್ರೇಜ್ ಹೆಚ್ಚಾಗಿದ್ದು, ಎಲ್ಲಾ ಕಡೆ ಹವಾ ಸೃಷ್ಟಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಕರ್ನಾಟಕದ ಹನುಮಂತ ಎಂಬ ಅಭಿಮಾನಿ ಕೈ ಮೇಲೆ ಸಲಗ ಸಿನಿಮಾದ ಟೈಟಲ್ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ. ಈತನಿಗೆ ದುನಿಯಾ ವಿಜಯ್ ವಿಡಿಯೋ ಕಾಲ್ ಮಾಡಿ ಮಾತನಾಡಿಸಿದ್ದಾರೆ.
ಈ ಹನುಮಂತ ಗೋವಾದ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ದುನಿಯಾ ವಿಜಯ್ ಅವರ ಅಪ್ಪಟ ಅಭಿಮಾನಿಯಂತೆ. ಅಲ್ಲದೆ ವಿಜಯ್ರಿಂದ ಸ್ಫೂರ್ತಿ ಪಡೆದು ತಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನಂತೆ. ಈ ಅಭಿಮಾನಕ್ಕೆ ದುನಿಯಾ ವಿಜಯ್ ಫಿದಾ ಆಗಿ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ.
ನೆಚ್ಚಿನ ನಟನ ಜೊತೆ ಮಾತನಾಡುವಾಗ ಹನುವಂತು ಕಣ್ಣೀರು ಹಾಕಿ ಅಭಿಮಾನ ತೋರಿದ್ದಾನೆ. ಅಲ್ಲದೆ ಹನುಮಂತು ಅಭಿಮಾನಕ್ಕೆ ಕೃತಜ್ಞತೆ ತಿಳಿಸಿರುವ ದುನಿಯಾ ವಿಜಯ್, ನಿಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊ ಎಂದು ಹೇಳಿದ್ದಾರೆ.