ETV Bharat / sitara

ಅಭಿಮಾನಿ ದೇವರ ದೇವಾಲಯವಾದ ಡಾ.ರಾಜ್​​​ಕುಮಾರ್ ಸ್ಮಾರಕ - ಅಭಿಮಾನಿಗಳ ಹಾಟ್​​ ಸ್ಪಾಟ್​ ಆಯ್ತು ಅಣ್ಣಾವ್ರ ಸಮಾಧಿ

ಅಣ್ಣಾವ್ರ ಸಮಾಧಿಯನ್ನು ಬೆಲೆ ಬಾಳುವ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿ ವಿಶಾಲವಾದ ಉದ್ಯಾನ, ರಂಗಮಂದಿರ ಇದೆ. ಸಮಾಧಿ ಬಳಿ ತೆರಳುವ ಮುನ್ನ, ಕಂಚಿನಿಂದ ಕೂಡಿರುವ ಡಾ. ರಾಜ್​​​​​​​​​​​​​​​​​​​​​​​​​​​​​​​​​ಕುಮಾರ್ ಪುತ್ಥಳಿ ಎಲ್ಲರನ್ನು ಸೆಳೆಯುತ್ತದೆ.

Dr. Raj Kumar Memorial
ಡಾ. ರಾಜ್​​​ಕುಮಾರ್ ಸ್ಮಾರಕ
author img

By

Published : Dec 13, 2019, 8:01 PM IST

ತಮ್ಮ ಅಮೋಘ ಅಭಿನಯದ ಮೂಲಕ ಜನಮಾನಸದಲ್ಲಿ ಇಂದಿಗೂ, ಎಂದೆಂದಿಗೂ ಉಳಿದಿರುವ ನಟಸಾರ್ವಭೌಮ ಡಾ. ರಾಜ್​​​​​ಕುಮಾರ್ ನಮ್ಮನ್ನೆಲ್ಲಾ ಅಗಲಿ 14 ವರ್ಷಗಳು ತುಂಬಿವೆ. ರಂಗಭೂಮಿ ಹಿನ್ನೆಲೆಯಿಂದ ಬಂದು ಸಿನಿಮಾರಂಗಲ್ಲಿ ಧ್ರುವತಾರೆಯಾಗಿ ಉಳಿದಿದ್ದಾರೆ ನಮ್ಮ ನಿಮ್ಮೆಲ್ಲರ ನಟಸಾರ್ವಭೌಮ.

ಡಾ. ರಾಜ್​​​ಕುಮಾರ್ ಸಮಾಧಿ ಈಗ ಪ್ರವಾಸಿ ತಾಣ

ಈ ದೇವತಾ ಮನುಷ್ಯನ ನಟನೆ, ಸರಳತೆ , ಸಿನಿಮಾ ಸೇವೆ ಗುರುತಿಸಿ, ಅಂದಿನ ರಾಜ್ಯ ಸರ್ಕಾರ ಕಂಠೀರವ ಸ್ಟುಡಿಯೋದಲ್ಲಿ ಅಣ್ಣಾವ್ರ ಸಮಾಧಿಯನ್ನು ಸ್ಥಾಪಿಸಿತು. ಸುಮಾರು ಎರಡೂವರೆ ಎಕರೆಯಲ್ಲಿ ನಿರ್ಮಾಣವಾಗಿರುವ ಈ ಸಮಾಧಿ ಸ್ಥಳ ಇದೀಗ ದೇವಾಲಯವಾಗಿದೆ. ಅಣ್ಣಾವ್ರ ಸಮಾಧಿಯನ್ನು ಬೆಲೆ ಬಾಳುವ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಲ್ಲಿ ವಿಶಾಲವಾದ ಉದ್ಯಾನ, ರಂಗಮಂದಿರ ಇದೆ. ಸಮಾಧಿ ಬಳಿ ತೆರಳುವ ಮುನ್ನ, ಕಂಚಿನಿಂದ ಕೂಡಿರುವ ಡಾ. ರಾಜ್​​​​​​​​​​​​​​​​​​​​​​​​​​ಕುಮಾರ್ ಪುತ್ಥಳಿ ಎಲ್ಲರನ್ನು ಸೆಳೆಯುತ್ತದೆ. ಈ ಸ್ಥಳ ಈಗ ಅಭಿಮಾನಿಗಳ ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ಟೂರಿಸ್ಟ್ ಸ್ಪಾಟ್ ಆಗಿದೆ.

ಪ್ರತಿದಿನ ಒಂದು ಸಾವಿರ ಜನರು ಅಣ್ಣಾವ್ರ ಸಮಾಧಿ ಬಳಿ ಬಂದುಹೋಗುತ್ತಾರೆ. ಈ ಸಂಖ್ಯೆ ವಾರದ ಕೊನೆಯ ದಿನಗಳಲ್ಲಿ ಇನ್ನೂ ಹೆಚ್ಚುತ್ತದೆ. ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆವರೆಗೂ ಇಲ್ಲಿಗೆ ಭೇಟಿ ನೀಡುವ ಅವಕಾಶವಿದೆ. ಅಣ್ಣಾವ್ರ ಸಮಾಧಿ ನೈಸ್ ರಸ್ತೆಯ ಪಕ್ಕದಲ್ಲೇ ಇದೆ. ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಕೂಡಾ ಹತ್ತಿರವಿದ್ದು ಇಲ್ಲಿಂದ ಸುಮಾರು 9 ಕಿ.ಮೀ ದೂರವಿದೆ. ಏರ್​​ಪೋರ್ಟಿನಿಂದ ಸುಮಾರು 37 ಕಿ.ಮೀ ಇದ್ದು ಒಂದು ಗಂಟೆ ಜರ್ನಿ ಆಗುತ್ತದೆ. ಈ ಸ್ಮಾರಕ ನೋಡಲು ಯಾವುದೇ ಶುಲ್ಕ ಇಲ್ಲ. ಅಣ್ಣಾವ್ರ ಸ್ಮಾರಕ ಅಭಿಮಾನಿಗಳು ಹಾಗೂ ಪ್ರವಾಸಿಗರ ಹಾಟ್ ಫೇವರೆಟ್ ಸ್ಥಳವಾಗಿರುವುದಂತೂ ನಿಜ.

Intro:Body:ಅಭಿಮಾನಿ ದೇವರುಗಳ ದೇವಾಲಯವಾದ ಡಾ ರಾಜ್ ಕುಮಾರ್ ಸ್ಮಾರಕ!!!

ಕನ್ನಡ ಚಿತ್ರರಂಗ ಅಂದಾಕ್ಷಣ ಥಟ್ಟನೇ ನೆನಪಾಗೋ ಏಕೈಕ ನಟ ಡಾ ರಾಜ್ ಕುಮಾರ್..ಸರಳತೆ, ಅಮೋಘ ಅಭಿನಯದಿಂದ ಐದು ದಶಕಗಳನ್ನ ಕನ್ನಡ ಚಿತ್ರರಂಗವನ್ನ ಆಳಿದ ಡಾ ರಾಜ್ ಕುಮಾರ್ ಇಂದು ನಮ್ಮೊಂದಿಗೆ ಇಲ್ಲ.. ರಂಗಭೂಮಿಯಿಂದ ಬಂದು, ಕನ್ನಡ ಚಿತ್ರರಂಗದಲ್ಲಿ ಧ್ರುವತಾರೆಯಾಗಿ ಮಿಂಚಿ ಮೆರೆಯಾದ ಮಾಣಿಕ್ಯ. ನಟ, ಗಾಯಕ, ಖಳ ನಾಯಕ, ಕುರುಡ, ರೈತ, ಮುಗ್ಧ ಹೀಗೆ ಹಲವಾರು ಪಾತ್ರಗಳಲ್ಲಿ ಅಭಿನಯಿಸಿ ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ದೇವಸ್ಥಾನ ಮಾಡಿಕೊಂಡ ಏಕೈಕ ನಟ..ಈ ಮಹಾನ್ ನಟ ಏಪ್ರಿಲ್ 12,2006 ಮಧ್ಯಾಹ್ನ 1.45ಕ್ಕೆ ಸದಾಶಿವನಗರದ ನಿವಾಸದಲ್ಲಿ ಕೊನೆಯುಸಿರೆಳೆದರು..ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ನಟಸಾರ್ವಭೌಮ ಅಗಲಿಕೆಯಿಂದ ಒಂದು ಸುವರ್ಣ ಯುಗ ಅಂತ್ಯವಾಗಿತ್ತು..ಈ ದೇವತಾ ಮನುಷ್ಯ ನಟನೆ, ಸರಳತೆ , ಸಿನಿಮಾ ಸೇವೆ ಗುರುತಿಸಿ, ಅಂದಿನ ರಾಜ್ಯ ಸರ್ಕಾರ ತಮ್ಮ, ಅಧೀನದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ ಎಂಬ ಧ್ರುವತಾರೆಗೆ ಸಮಾಧಿ ಮಾಡಲು ಜಾಗ ನೀಡಲಾಗಿತ್ತು..ಈಗ ಡಾ ರಾಜ್ ಕುಮಾರ್ ಕೋಟ್ಯಾಂತರ ಅಭಿಮಾನಿಗಳ ದೇವಸ್ಥಾನವಾಗಿದೆ.. ಎರಡುವರೆ ಎಕರೆಯಲ್ಲಿ ನಿರ್ಮಾಣವಾಗಿರೋ ಡಾ ರಾಜ್ ಕುಮಾರ್ ಸಮಾಧಿಯನ್ನ, ಬೆಲೆ ಬಾಳುವ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ..ವಿಶಾಲವಾದ ಉದ್ಯಾನ, ರಂಗ ಮಂದಿರ, ರಾಜ್ ಸಮಾಧಿಗೆ ತೆರೆಳುವ ಮುನ್ನ, ಕಂಚಿನಿಂದ ಕೂಡಿರುವ ಡ ರಾಜ್ ಕುಮಾರ್ ಪುತ್ಥಳಿ ಅಭಿಮಾನಿಗಳ ಹಾಗು ಪ್ರವಾಸಿಗರ ಅಚ್ಚುಮೆಚ್ಚಿನ ಟೂರಿಸ್ಟ್ ಸ್ಪಾಟ್ ಆಗಿದೆ..ಡಾ ರಾಜ್ ಕುಮಾರ್ ನಮ್ಮನೆಲ್ಲ ಅಗಲಿ 14ವರ್ಷ ಆದ್ರು, ರಾಜ್ ಸಮಾಧಿಗೆ ಪ್ರತಿದಿನ ಒಂದು ಸಾವಿರ ಜನ ಬಂದು ಅಣ್ಣಾವ್ರ ಸಮಾಧಿಗೆ ಬರ್ತಾರೆ..ಇನ್ನು ವೀಕೆಂಡ್ ನಲ್ಲಿ ಎರಡು ಸಾವಿರ, ಹಬ್ಬದ ದಿನ ,ಹುಟ್ಟಿದ ದಿನ‌ ಸಂದರ್ಭದಲ್ಲಿ ಹತ್ತು ಸಾವಿರದಿಂದ‌ ಇಪ್ಪತ್ತು ಸಾವಿರ ಜನ ಸಮಾಧಿಗೆ ಬಂದು ಪೂಜೆ ಸಲ್ಲಿಸುತ್ತಾರೆ.. ಬೆಳಗ್ಗೆ 8.30ಕ್ಕೆ ಆರಂಭ ಆಗಲಿದ್ದು ಸಂಜೆ 6 ಗಂಟೆವರೆಗೂ ರಾಜ್ ಕುಮಾರ್ ಸಮಾಧಿಗೆ ವಿಜೀಟ್ ಮಾಡಲು ಅವಕಾಶವಿದೆ.ಇನ್ನು ಡಾ ರಾಜ್ ಕುಮಾರ್ ಸ್ಮಾರಕಕ್ಕೆ ನೈಸ್ ರಸ್ತೆಯ ಪಕ್ಕದಲ್ಲೇ ಇರುವುದರಿಂದ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಹಾಗು ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಹಳ ಹತ್ತಿರವಿದೆ..ಏರ್ ಪೋರ್ಟ್ ನಿಂದ ರಾಜ್ ಕುಮಾರಕಕ್ಕೆ 37 ಕಿಲೋಮೀಟರ್ ಇದು ಒಂದು ಗಂಟೆ ಜರ್ನಿ ಆಗುತ್ತೆ..ಹಾಗೇ ಮೆಜೆಸ್ಟಿಕ್ ಹಾಗು ರೈಲ್ವೆ ನಿಲ್ದಾಣಕ್ಕೆ ಕೇವಲ 9 ಕಿಲೋ ಮೀಟರ್ ಇರುವುದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರ್ತಾರೆ..ಅಷ್ಟೇ ಅಲ್ಲ ದೇಶ, ವಿದೇಶ ಹಾಗು ಕರ್ನಾಟಕ 30ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಬಹಳ ಹತ್ತಿರವಿದೆ.. ಇನ್ನು ಸ್ಮಾರಕ ನೋಡಲು ಯಾವುದೇ ಶುಲ್ಕ ಇಲ್ಲದೇ ಇರುವುದರಿಂದ ಅಭಿಮಾನಿಗಳು ಹಾಗು ಪ್ರವಾಸಿಗರ ಹಾಟ್ ಫೇವರೆಟ್ ಸ್ಥಳವಾಗಿದೆ..ಮುಂದಿನ ದಿನಗಳಲ್ಲಿ ಡಾ ರಾಜ್ ಕುಮಾರ್ ಸಮಾಧಿ ಈಗಾಗಲೇ ಟೂರಿಸ್ಟ್ ಸ್ಪಾಟ್ ಆಗಿದೆ..Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.