ಗೋವಿಂದಾಯ ನಮ: , ಗೂಗ್ಲಿ, ರಣ ವಿಕ್ರಮ, ಜೆಸ್ಸಿಯಂತ ಹಲವಾರು ಯಶಸ್ವಿ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ನಿರ್ದೇಶಕ ಪವನ್ ಒಡೆಯರ್ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಈ ಜೋಡಿ ಮೊದಲನೆ ಮಗು ನಿರೀಕ್ಷೆಯಲ್ಲಿದೆ.
ಪತ್ನಿ ಅಪೇಕ್ಷಾ ಬೇಬಿ ಬಂಪ್ನೊಂದಿಗೆ ಪವನ್ ಒಡೆಯರ್ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಫೋಟೋಗಳನ್ನು ನೋಡಿದವರು ದಂಪತಿಗೆ ಶುಭಾಶಯ ತಿಳಿಸಿದ್ದಾರೆ. ಈ ಸಂತೋಷದ ಸಮಯದಲ್ಲಿ ಪವನ್ ಒಡೆಯರ್ ಒಂದು ಹಾಡನ್ನು ರಚಿಸುವ ಮೂಲಕ ವಿವರಿಸಿದ್ದಾರೆ. ಪವನ್ ಒಡೆಯರ್ ಬರೆದ ಈ ಹಾಡಿಗೆ ಪ್ರವೀಣ್ ಅಳಿವರ್ ರಾಗ ಸಂಯೋಜಿಸಿದ್ದಾರೆ. ಅಕ್ಟೋಬರ್ 11 ರಂದು ಸಂಜೆ 5ಕ್ಕೆ ಪವನ್ ಒಡೆಯರ್ ಯೂಟ್ಯೂಬ್ನಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಪವನ್ ಶರ್ಮ ಈ ಹಾಡಿಗೆ ಚಿತ್ರೀಕರಣ ಮಾಡಿದ್ದಾರೆ.
ಇದು ಜೀವನದ ಸಂಭ್ರಮದ ಕ್ಷಣ ಎಂದು ಹೇಳಿಕೊಳ್ಳುತ್ತಾರೆ ಪವನ್ ವಡೆಯರ್. ವೈದ್ಯರು ಡಿಸೆಂಬರ್ಗೆ ದಿನಾಂಕ ನೀಡಿದ್ದಾರೆ ಎನ್ನಲಾಗಿದೆ. ಈ ಜೋಡಿ 2018 ಆಗಸ್ಟ್ ತಿಂಗಳಲ್ಲಿ ಬಾಗಲಕೋಟೆಯಲ್ಲಿ ಮದುವೆಯಾಗಿದ್ದರು.