ETV Bharat / sitara

ಸ್ಟಾರ್​ ಡೈರೆಕ್ಟರ್​ಗೆ ₹50 ಲಕ್ಷ ವಂಚನೆ ಆರೋಪ.. ಮನೆ ಮಾರುವುದಾಗಿ ಪಂಗನಾಮ, ಲೇಡಿ ಎಸ್ಕೇಪ್!

ಮನೆ ಖರೀದಿಸಲು ಮುಂದಾಗಿ 50 ಲಕ್ಷ ರೂ. ವಂಚನೆಗೆ ಒಳಗಾಗಿರುವ ನಟ, ನಿರ್ದೇಶಕ ನಾಗಶೇಖರ್​ ಅವರು ರಾಜರಾಜೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೀನಾ ಎಂಬುವರು ಮನೆ ನೀಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

director-nagashekar
ನಿರ್ದೇಶಕ ನಾಗಶೇಖರ್
author img

By

Published : Dec 25, 2021, 9:18 AM IST

ಬೆಂಗಳೂರು : 50 ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ಖ್ಯಾತ ನಟ, ನಿರ್ದೇಶಕ ನಾಗಶೇಖರ್ ಇಲ್ಲಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಕನ್ನಡದ ಹಿಟ್ ಸಿನಿಮಾಗಳಾದ ಅರಮನೆ, ಮೈನಾ, ಸಂಜು ವೆಡ್ಸ್ ಗೀತಾ, ಮಾಸ್ತಿಗುಡಿ, ಅಮರ್ ಹೀಗೆ ಹಲವಾರು ಚಿತ್ರಗಳಿಗೆ ನಿರ್ದೇಶನ ಮಾಡಿರುವ ನಾಗಶೇಖರ್ ಆರ್.ಆರ್.ನಗರ ನಿವಾಸಿಗಳಾದ ಮೀನಾ ಹಾಗೂ ರಾಜ್ ಕುಮಾರ್ ಎನ್ನುವ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ದೇಶಕ ನಾಗಶೇಖರ್​ ದೂರು : ಆರ್.ಆರ್. ನಗರದ ಜಯಣ್ಣ ಲೇಔಟ್​ನಲ್ಲಿ ಮನೆ ಖರೀದಿಸಲು ಮುಂದಾಗಿದ್ದ ನಾಗಶೇಖರ್​ಗೆ ಮೀನಾ ಎನ್ನುವವರ ಜೊತೆ 2 ಕೋಟಿ 70 ಲಕ್ಷ ರೂ. ಮನೆ ಖರೀದಿಗೆ ಮಾತುಕತೆ ಆಗಿತ್ತು. ಕಳೆದ ವರ್ಷ 2020 ಆಗಸ್ಟ್ ನಲ್ಲಿ ಮನೆ ಖರೀದಿ ಸಂಬಂಧ ಮೀನಾ ಜೊತೆ ಸೇಲ್ ಅಗ್ರಿಮೆಂಟ್ ಅನ್ನು ನಾಗಶೇಖರ್ ಮಾಡಿಕೊಂಡಿದ್ದರು. ಅಗ್ರಿಮೆಂಟ್ ಆಗುತ್ತಿದ್ದಂತೆ ಹಂತ ಹಂತವಾಗಿ ಮೀನಾ ಖಾತೆಗೆ 50 ಲಕ್ಷ ರೂ. ವರ್ಗಾಯಿಸಿರುವುದಾಗಿ ನಾಗಶೇಖರ್​ ಹೇಳಿದ್ದಾರೆ.

ಸೇಲ್ ಅಗ್ರಿಮೆಂಟ್ ನಂತರ ಮತ್ತೊಬ್ಬರಿಗೆ ಮನೆ ಮಾರಾಟ ಮಾಡಿರುವ ಮೀನಾ ಅಡ್ವಾನ್ಸ್ ರೂಪದಲ್ಲಿ ಸೇಲ್ ಅಗ್ರಿಮೆಂಟ್ ವೇಳೆ ಪಡೆದಿದ್ದ 50 ಲಕ್ಷ ಹಣ ರೂ. ಹಿಂದಿರುಗಿಸಿಲ್ಲ ಎಂದು ನೀಡಿದ ದೂರಿನ ಅನ್ವಯ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 420 ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಠಾಣೆಗೆ ಕರೆಸಲು ಮುಂದಾದಾಗ ಮೀನಾ ಹಾಗೂ ರಾಜ್ ಕುಮಾರ್ ತಲೆಮರೆಸಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.