ಲಾಕ್ಡೌನ್ನಲ್ಲಿ ಅನೇಕ ಸೆಲೆಬ್ರಿಟಿಗಳು ಸಿಂಪಲ್ ಆಗಿ ಮದುವೆ ಆಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭರ್ಜರಿ, ಬಹದ್ದೂರ್ನಂತ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಚೇತನ್ ಅವರ ಮದುವೆ ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಬೆಳಗ್ಗೆ ಸಿಂಪಲ್ ಆಗಿ ನೆರವೇರಿದೆ.
ಕೆಲವೇ ಕೆಲವು ಮಂದಿ ಮಾತ್ರ ಈ ಶುಭ ಸಮಾರಂಭಕ್ಕೆ ಸಾಕ್ಷಿಯಾದರು. ಚಿತ್ರರಂಗದ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ಶ್ರೀಮುರಳಿ, ಮುಂತಾದವರು ಮದುವೆಗೆ ಆಗಮಿಸಿ ನವಜೋಡಿಗೆ ಆಶೀರ್ವಾದ ಮಾಡಿದರು. ಲಾಕ್ಡೌನ್ ಕಾರಣದಿಂದ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ.
ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್ ಕುಮಾರ್ ಅವರನ್ನು ಕೈ ಹಿಡಿದಿರುವ ಹುಡುಗಿ ಯಾರು ಎಂಬ ಕುತೂಹಲ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಚೇತನ್ ಕೈ ಹಿಡಿದಿರುವ ಹುಡುಗಿ ಹೆಸರು ಮಾನಸ. ಇವರು ಚೇತನ್ಗೆ ಸ್ವಂತ ಅತ್ತೆಯ ಮಗಳು ಎಂಬುದು ವಿಶೇಷ. ಬಹಳ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಉಭಯ ಕುಟುಂಬದವರ ಒಪ್ಪಿಗೆ ಮೇರೆಗೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾನಸ ಅವರು ಇಂಜಿನಿಯರಿಂಗ್ ಓದಿದ್ದಾರೆ. ಪ್ರಸ್ತುತ ಅವರು ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮದುವೆ ಫೋಟೋಗಳು ಕೂಡ ಲಭ್ಯವಾಗಿದ್ದು ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚೇತನ್-ಮಾನಸ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಲಾಕ್ಡೌನ್ ಇರುವುದರಿಂದ ಮೈಸೂರಿನಲ್ಲಿ ಸರಳವಾಗಿ ವಿವಾಹ ಸಮಾರಂಭ ನೆರವೇರಿದೆ.