ETV Bharat / sitara

'ಭರಾಟೆ' ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ: ನಿರ್ದೇಶಕ ಚೇತನ್ ಕುಮಾರ್ - ನಾಯಕಿ ಶ್ರೀ ಲೀಲಾ

'ಬಹದ್ದೂರ್​​​' ಚಿತ್ರದಿಂದ ನಿರ್ದೇಶನ ಆರಂಭಿಸಿದ ಚೇತನ್ ಕುಮಾರ್ ನಂತರ 'ಭರ್ಜರಿ' ಸಿನಿಮಾ ಮಾಡಿದರು. ಈಗ ಬ ಅಕ್ಷರದಿಂದಲೇ 'ಭರ್ಜರಿ' ಸಿನಿಮಾ ಮಾಡಿದ್ದು ಸಿನಿಮಾ ಬಿಡುಗಡೆಗೆ ತಯಾರಿ ನಡೆಸಿದ್ದಾರೆ. ಇದು ನನ್ನ ವೃತ್ತಿ ಜೀವನದ ಬಿಗ್ ​​​ಬಜೆಟ್ ಸಿನಿಮಾ ಎನ್ನುತ್ತಾರೆ ಚೇತನ್​​.

ಚೇತನ್ ಕುಮಾರ್
author img

By

Published : Sep 26, 2019, 9:46 AM IST

ಸದಾ ಹೊಸ ಹುರುಪು, ಹೊಸ ಆಯಾಮದಿಂದಲೇ ಸಿನಿಮಾ ನಿರ್ದೇಶನಕ್ಕೆ ಇಳಿಯುವ ಚೇತನ್ ಕುಮಾರ್ ಸದ್ಯಕ್ಕೆ ‘ಭರಾಟೆ’ ಚಿತ್ರದ ಬ್ಯುಸಿಯಲ್ಲಿದ್ದಾರೆ. ಇತ್ತೀಚೆಗೆ ಚಿತ್ರದ ಮೂರನೇ ಹಾಡು ‘ಮರುಭೂಮಿ ಓಯಸಿಸ್​...ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರ ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ ಎನ್ನುತ್ತಾರೆ ಚೇತನ್.

Chetan
ಚೇತನ್ ಕುಮಾರ್

'ಭರಾಟೆ' ಚಿತ್ರದಲ್ಲಿ ಆರು ಭರ್ಜರಿ ಸಾಹಸ ಸನ್ನಿವೇಶಗಳಿವೆ, 41 ಕಲಾವಿದರ ಜೊತೆ 91 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ರಾಜಸ್ಥಾನದಿಂದ ಚಿತ್ರ ಪ್ರಾರಂಭ ಆಗುತ್ತದೆ. ಅಲ್ಲಿ ಒಂದು ಹಾಡು ಹಾಗೂ ಚೇಸ್ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. 41 ಡಿಗ್ರಿ ಸೂರ್ಯನ ತಾಪ, ಧೂಳು, ಚಿಕ್ಕ ಚಿಕ್ಕ ಸ್ಥಳಗಳು ಎಲ್ಲವನ್ನೂ ನೆನಪಿಸಿಕೊಂಡರೆ ಮೈ ಜುಂ ಎನ್ನಿಸುತ್ತದೆ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು. ನಾಯಕಿ ಶ್ರೀ ಲೀಲಾ ಬಗ್ಗೆ ಮಾತನಾಡಿದ ಚೇತನ್​​​​​​ ಆಕೆಯ ಅಭಿನಯವನ್ನು ಮೆಚ್ಚಿಕೊಂಡರು. ಕೆಲವೊಂದು ದೃಶ್ಯಗಳಲ್ಲಿ ಕಣ್ಣೀರು ತುಂಬಿಕೊಂಡು ಬಹಳ ಸಹಜವಾಗಿ ಅಭಿನಯಿಸಿದ್ದಾರೆ ಎಂದು ನೆನಪಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್​, ರವಿಶಂಕರ್ ಹಾಗೂ ಅಯ್ಯಪ್ಪ ಶರ್ಮ ಮೂವರೂ ಸಹೋದರರು ನಟಿಸಿದ್ದು ಅವರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು.

bharate
'ಭರಾಟೆ' ನಿರ್ದೇಶಕ ಚೇತನ್

ಚಿತ್ರದ ಟೀಸರ್​ ಇದೇ ತಿಂಗಳ 29 ರಂದು ಬಿಡುಗಡೆ ಆಗಲಿದ್ದು ನಿನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಮುರಳಿ ಸುಮಾರು 18 ಬಗೆಯ ಕಾಸ್ಟ್ಯೂಮ್ ಧರಿಸಿದ್ದು ಪತ್ನಿ ವಿದ್ಯಾಶ್ರೀ ಮುರಳಿ ಅವರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ ಎನ್ನಲಾಗಿದೆ.

ಭರಾಟೆ ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ – ಚೇತನ್ ಕುಮಾರ್ ನಿರ್ದೇಶಕ

ಸದಾ ಹೊಸ ಹುರುಪು, ಹೊಸ ಆಯಾಮ ಚಿಂತಿಸುತ್ತಲೆ ಸಿನಿಮಾ ನಿರ್ದೇಶನಕ್ಕೆ ಇಳಿಯುವ ಚೇತನ್ ಕುಮಾರ್ (ಭರ್ಜರಿ ಹಾಗೂ ಬಹದ್ದೂರ್ ನಿರ್ದೇಶಕ) ಭರಾಟೆ ಚಿತ್ರದ ಮೂರನೇ ಹಾಡು ಮರಭೂಮಿ ಓಯಸಿಸ್ಸು ಪ್ಯಾಲೇಸ್ಸೇ ಇವನ ಅಡ್ಡ್ರೆಸ್ಸು... ಬಿಡುಗಡೆ ಮಾಡಿದ ಸಮಯದಲ್ಲಿ ಮಾತನಾಡುತ್ತಾ ಈ ಚಿತ್ರ ನನ್ನ ವೃತ್ತಿ ಜೀವನದ ಬಿಗ್ ಬಜೆಟ್ ಸಿನಿಮಾ ಎನ್ನುತ್ತಾರೆ.

ಒಂದು ಚಿಕ್ಕ ಸಂದರ್ಶನದಲ್ಲಿ ಚೇತನ್ ಕುಮಾರ್ ಭರಾಟೆ ಕೇವಲ ಒಂದು ಪಕ್ಕ ಕಮರ್ಷಿಯಲ್ ಸಿನಿಮಾ ಅಲ್ಲ ಇದರಲ್ಲಿ ಶ್ರೀ ಮುರಳಿ ನವರಸ ವ್ಯಕ್ತಿ ಮಾಡುತ್ತಾರೆ. ಆರು ಭರ್ಜರಿ ಸಾಹಸ ಸನ್ನಿವೇಶಗಳಿವೆ, 41 ಕಲಾವಿದರ ಜೊತೆ 91 ದಿವಸ ಚಿತ್ರೀಕರಣ ಮಾಡಿದ್ದೇವೆ, ರಾಜಸ್ಥಾನದ ಬ್ಲೂ ಸಿಟಿ ಇಂದ ಚಿತ್ರ ಪ್ರಾರಂಭ ಆಗುತ್ತದೆ. ರಾಜಸ್ಥಾನದಲ್ಲಿ ಒಂದು ಹಾಡು ಹಾಗೂ ಚೇಸ್ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. 41 ಡಿಗ್ರಿ ಸೂರ್ಯನ ತಾಪ, ಧೂಳು, ಚಿಕ್ಕ ಚಿಕ್ಕ ಸ್ಥಳಗಳು....ಅದು ನೆನಪಿಸಿಕೊಂಡರೆ ಮೈ ಜುಂ ಎನ್ನಿಸುತ್ತದೆ. ಚಿತ್ರದ ಕಥಾ ನಾಯಕಿ ಶ್ರೀ ಲೀಲ ನನ್ನ ಪ್ರಕಾರ ಮತ್ತೊಂದು ರಾಧಿಕಾ ಪಂಡಿತ್ ರೀತಿ ಅಭಿನಯ ಶಕ್ತಿ ಇಟ್ಟುಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ಕೆಲವೇ ಸೆಕಂಡ್ ಅಲ್ಲಿ ಕಣ್ಣಿನಲ್ಲಿ ನೀರು ತುಂಬಿಕೊಡು ಬಹಳ ಸಹಜವಾಗಿ ಅಭಿನಯ ಮಾಡಿದ್ದನ್ನು ಚೇತನ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಭರಾಟೆ ಸಿನಿಮಾ ಫ್ಯಾನ್ ಇಂಡಿಯಾ ಸಿನಿಮಾ ಆಗಲ್ಲ. ಹಿಂದಿ ಭಾಷೆಗೆ ಡಬ್ಬಿಂಗ್ ಆಗುವ ಶಕ್ತಿ ಇದೆ. ಅದಕ್ಕೆ ಕಾರಣ ಇದು ದೇಸೀ ಕಲ್ಟ್ ಸಿನಿಮಾ ಎನ್ನುತ್ತಾರೆ ಚೇತನ್ ಕುಮಾರ್.

ಭರಾಟೆ ಚಿತ್ರದಲ್ಲಿ ಡಯಲಾಗ್ ಕಿಂಗ್ ಸಾಯಿಕುಮಾರ್, ಅರ್ಮುಗ ರವಿಶಂಕರ್ ಮತ್ತು ಅಯ್ಯಪ್ಪ ಶರ್ಮ ಸಹೋದರರು ಘರ್ಜಿಸಿದ್ದಾರೆ ಹಾಗೂ ಉತ್ತಮ ಅಭಿನಯ ನೀಡಿದ್ದಾರೆ.

ಚಿತ್ರದ ಕಥಾ ವಸ್ತುವಿನಲ್ಲಿ ಚೇತನ್ ಕುಮಾರ್ ಇದೆ ಮೊದಲ ಬಾರಿಗೆ ಆಯುರ್ವೇದದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಚಿತ್ರದ ಆಕ್ಷನ್ ಟೀಸರ್ ಇದೆ ತಿಂಗಳ 29 ರಂದು ಬಿಡುಗಡೆ ಮಾಡಲಿದ್ದಾರೆ. ಅದರಲ್ಲಿ 19 ವ್ಯಕ್ತಿಗಳು ಪರಿಚಯ ಆಗುತ್ತಾರೆ. ಅವರೆಲ್ಲರನ್ನು ನಾಯಕ ಮೆಟ್ಟಿ ನಿಲ್ಲುವುದು ಚಿತ್ರದ ಸಾಹಸ ದೃಶ್ಯಗಳ ಅಂಶ.

ಅಂದಹಾಗೆ ಬುದವಾರ ರೇಣುಕಂಬ ಸ್ಟುಡಿಯೋ ಅಲ್ಲಿ ಬಿಡುಗಡೆ ಆದ ಚಂದನ್ ಶೆಟ್ಟಿ ಹಾಡಿರುವ ಚೇತನ್ ಕುಮಾರ್ ರಚನೆಯ, ಅರ್ಜುನ್ ಜನ್ಯ ಸಂಗೀತದ ಹಾಡಿಗೆ 18 ವಸ್ತ್ರಗಳ ಉಪಯೋಗ ಆಗಿದೆ. ಶ್ರೀ ಮುರಳಿ ಈ ಹಾಡಿನಲ್ಲಿ 18 ಬಗೆಯ ಉಡುಪು ಧರಿಸಿದ್ದಾರೆ. ಇವೆಲ್ಲವನ್ನೂ ಆಯ್ಕೆ ಮಾಡಿ ವಸ್ತ್ರ ವಿನ್ಯಾಸ ಮಾಡಿರುವವರು ಅವರ ಮಡದಿ ವಿದ್ಯಾಶ್ರೀ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.