ETV Bharat / sitara

ಹಿಂದಿಯ ರಾಮ್​ಯುಗ್ ವೆಬ್​ ಸಿರೀಸ್​​ನಲ್ಲಿ ದೂದ್​ಪೇಡಾ:​ ಮತ್ತೆ ಬಾಲಿವುಡ್​ಗೆ ಹಾರಿದ ದಿಗಂತ್​ - Actor Diganth in Hindi RamYug web series

ಹಿಂದಿಯ ವೆಬ್​ ಸಿರೀಸ್ ರಾಮ್​ಯುಗ್​ನಲ್ಲಿ ನಟ ದಿಗಂತ್​ ನಟಿಸಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ದೂದ್​ಪೇಡಾ ಈಗ ಮತ್ತೆ ಬಾಲಿವುಡ್​ಗೆ ಹಾರಿದ್ದಾರೆ.

Diganth starring in RamYug web series
ಹಿಂದಿಯ ರಾಮ್​ಯುಗ್ ವೆಬ್​ ಸಿರೀಸ್​​ನಲ್ಲಿ ದೂದ್​ಪೇಡಾ
author img

By

Published : May 6, 2021, 9:45 PM IST

ಬೆಂಗಳೂರು: ಕನ್ನಡ, ಹಿಂದಿ‌ ಸಿನಿಮಾಗಳಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ದೂದ್​ ಪೇಡಾ ದಿಗಂತ್, ಸದ್ಯ ಮಾರಿಗೋಲ್ಡ್, ಗಾಳಿಪಟ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ವೆಬ್​ ಸಿರೀಸ್​ ಮೂಲಕ ಮತ್ತೆ ಬಾಲಿವುಡ್ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ.

ಈ ಹಿಂದೆ ವೆಡ್ಡಿಂಗ್ ಪಲಾವ್ ಎಂಬ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ ದಿಗಂತ್, ರಾಮನಾಗಲು ಹೊರಟಿದ್ದಾರೆ. ದಿಗಂತ್ ರಾಮ್​ಯುಗ್ ಎಂಬ ವೆಬ್ ಸಿರೀಸ್​ಗೆ ಬಣ್ಣ ಹಚ್ಚಿ ಟೀಸರ್​ನಲ್ಲಿ ರಾಮನಾಗಿ ಸಖತ್ ಆಗಿಯೇ ಅಬ್ಬರಿಸಿದ್ದಾರೆ. ಸೀತೆಯಾಗಿ ಐಶ್ವರ್ಯ ಓಜಾ ಅಭಿನಯಿಸಿದ್ದಾರೆ. ದಿಗಂತ್ ಎದುರಾಳಿಯಾಗಿ ಪೈಲ್ವಾನ್ ವಿಲನ್ ಕಬೀರ್ ಸಿಂಗ್ ದುಹಾನ್ ರಾವಣನಾಗಿ ಅಬ್ಬರಿಸಲಿದ್ದಾರೆ. ರಾಮ್ ಯುಗ್ ವೆಬ್ ಸಿರೀಸ್‌ ವಾಲ್ಮೀಕಿ ರಾಮಾಯಣ ಆಧಾರಿತವಾಗಿದೆ.

ಇದನ್ನು ಓದಿ:ಕೋವಿಡ್​ ಬಗ್ಗೆ 'RRR'​ ಚಿತ್ರ ತಂಡದಿಂದ ವಿಡಿಯೋ ರಿಲೀಸ್​; ಕನ್ನಡದಲ್ಲೇ ಮನವಿ ಮಾಡಿದ ಜೂ.ಎನ್​ಟಿಆರ್​

ಈ ಸಿರೀಸ್‌ನಲ್ಲಿ ತಂತ್ರಜ್ಞಾನವನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿದ್ದು, ರಾಮ ಸೇತುವೆ ಕಟ್ಟುವುದನ್ನು ನಿರ್ದೇಶಕ ಕುನಾಲ್ ಕೊಹ್ಲಿ ಸಖತ್​ ಆಗಿ ತೋರಿಸಿದ್ದಾರೆ. ಹಿನ್ನೆಲೆ ಸಂಗೀತ, ಹಾಡುಗಳು, ಸಾಹಿತ್ಯ ಎಲ್ಲವೂ ಚೆನ್ನಾಗಿವೆ. ಅಬ್ಬಾಸ್ ಅಲಿ ಮೊಘಲ್ ಅದ್ಭುತವಾಗಿ ಕೊರಿಯೋಗ್ರಫಿ ಮಾಡಿದ್ದಾರೆ. ಕಲ್ಮೇಶ್ ಪಾಂಡೆ ಸಂಭಾಷಣೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.