ETV Bharat / sitara

ಧನ್ಯಾ ರಾಮ್​​ಕುಮಾರ್​ಗೆ ಶಿವಣ್ಣ ರಾಘಣ್ಣ ಆ್ಯಕ್ಟಿಂಗ್ ಟಿಪ್ಸ್​​ ಕೊಡ್ತಿದ್ರಂತೆ - ಧನ್ಯಾರಾಮ್​ಕುಮಾರ್

ಥಿಯೇಟರ್‌ಗಳಲ್ಲಿ 100 ರಷ್ಟು ಪ್ರೇಕ್ಷಕರಿಗೆ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಅಕ್ಟೋಬರ್‌ 14 ರಂದು ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿವೆ. ಈ ಎರಡು ಚಿತ್ರಗಳ ಮುಂಚೆ ಅ.8ರಂದು ಹೊಸಬರ ‘ನಿನ್ನ ಸನಿಹಕೆ’ ಚಿತ್ರಕೂಡ ರಿಲೀಸ್ ಆಗುತ್ತಿದೆ.

dhanya-ramkumar-talks-about-shivanna-and-raghanna-in-event
ಧನ್ಯಾ ರಾಮ್​​ಕುಮಾರ್​ಗೆ ಶಿವಣ್ಣ ರಾಘಣ್ಣ ಆ್ಯಕ್ಟಿಂಗ್ ಟಿಪ್ಸ್​​ ಕೊಡ್ತಿದ್ರಂತೆ
author img

By

Published : Sep 30, 2021, 12:28 PM IST

ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್​​​ಕುಮಾರ್ ಕುಟುಂಬದಿಂದ ಮಕ್ಕಳು ನಟರಾಗಿ ಸ್ಯಾಂಡಲ್​ವುಡ್​​ನಲ್ಲಿ ಹೆಸರು ಗಳಿಸಿದ್ದಾರೆ. ಆದರೆ, ರಾಜ್ ಕುಟುಂಬದಿಂದ ನಾಯಕಿಯಾಗಿ ಯಾರೊಬ್ಬರೂ ಬೆಳ್ಳಿ ತೆರೆಗೆ ಬಂದಿರಲಿಲ್ಲ. ಇದೀಗ ರಾಜ್​​ಕುಮಾರ್ ಮೊಮ್ಮಗಳು ಧನ್ಯಾ ರಾಮ್​​​ಕುಮಾರ್​ ಮೊದಲ ನಾಯಕಿಯಾಗಿ ರಾಜ್​ ಕುಟುಂಬವನ್ನ ಪ್ರತಿನಿಧಿಸುತ್ತಿದ್ದಾರೆ.

ಈಗಾಗಲೇ ಧನ್ಯಾ ರಾಮ್​​​ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರದ ಟ್ರೈಲರ್ ಸಹ ರಿಲೀಸ್ ಆಗಿದ್ದು, ಸಿನಿ ರಸಿಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರತಂಡ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಅದರಂತೆ ಅಕ್ಟೋಬರ್ 8ರಂದು ಸಿನಿಪ್ರಿಯರ ಮುಂದೆ ಬರಲು ರೆಡಿಯಾಗಿದೆ.

ಧನ್ಯಾ ರಾಮ್​​ಕುಮಾರ್​ಗೆ ಶಿವಣ್ಣ ರಾಘಣ್ಣ ಆ್ಯಕ್ಟಿಂಗ್ ಟಿಪ್ಸ್​​ ಕೊಡ್ತಿದ್ರಂತೆ

ಪೂರ್ಣಿಮಾ, ರಾಮ್​ಕುಮಾರ್​ ಮಗಳಾದ ಧನ್ಯಾ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇತ್ತ ದೊಡ್ಮನೆಯಿಂದ ಧನ್ಯಾ ನಟನೆ ಕುರಿತು ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.

ಧನ್ಯಾ ರಾಮ್​ಕುಮಾರ್ ಮಾತನಾಡಿ, ಇವತ್ತು ತಾತ, ಅಜ್ಜಿ ಇದ್ದಿದ್ದರೆ ತುಂಬಾನೇ ಸಂತೋಷ ಪಡ್ತಾ ಇದ್ದರು. ನಾನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೀನಿ. ಜೊತೆಗೆ ಶೂಟಿಂಗ್​ ಹೋಗುವ ಮೊದಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು ಅಂತ ಶಿವಣ್ಣ, ರಾಘಣ್ಣ ಹೇಳಿಕೊಡುತ್ತಿದ್ದರು. ರಾತ್ರಿ ಬೇಗ ಮಲಗಬೇಕು, ಡಬ್ಬಿಂಗ್ ಹೋಗುವ ಮುಂಚೆ ಏನನ್ನೂ ಕುಡಿಯಬಾರದು, ಬಿಸಿ ನೀರು ಕುಡಿಯಬೇಕು ಹೀಗೆಲ್ಲಾ ಸಲಹೆ ನೀಡಿದ್ದರು ಎಂದಿದ್ದಾರೆ.

ಓದಿ: ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಿಂದ ನಮ್ಮ ಸಿನಿಮಾಗೆ ತೊಂದರೆ - ನಟ ಸೂರಜ್‌, ಧನ್ಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.