ETV Bharat / sitara

ಬಜಾರ್​ ಹೀರೊ ಧನ್ವೀರ್​ 'ಬ'ಕಾರವೇ ಲಕ್ಕಿ... ಎರಡನೇ ಸಿನಿಮಾಗೂ 'ಬ' ಅಕ್ಷರದಿಂದಲೇ ಟೈಟಲ್ - ಧನ್ವೀರ್ ತಂದೆ ತಿಮ್ಮೇಗೌಡ

‘ಬಜಾರ್’ ಚಿತ್ರದಿಂದ ಸ್ಯಾಂಡಲ್​​ವುಡ್​​​​ಗೆ ಕಾಲಿಟ್ಟ ಭರವಸೆಯ ನಟ ಧನ್ವೀರ್​, ಇದೀಗ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಈ ಸಿನಿಮಾ ಕೂಡಾ ‘ಬ‘ ಅಕ್ಷರದಿಂದ ಆರಂಭವಾಗಲಿದ್ದು ‘ಬಂಪರ್‘ ಎಂದು ಹೆಸರಿಡಲಾಗಿದೆ. ಚಿತ್ರವನ್ನು ಸಂತು ನಿರ್ದೇಶಿಸುತ್ತಿದ್ದಾರೆ.

ಧನ್ವೀರ್
author img

By

Published : Sep 6, 2019, 10:00 AM IST

ಕೆಲವು ಅಕ್ಷರಗಳಿಂದ ಆರಂಭವಾಗುವ ಶೀರ್ಷಿಕೆ ಕೆಲವು ನಟರಿಗೆ ಅದೃಷ್ಟ ಎಂದೇ ಹೇಳಬಹುದು. ಯುವ ನಟ ಧನ್ವೀರ್​​​ ‘ಬಜಾರ್’ ಆದ ಮೇಲೆ ಮತ್ತೆ ‘ಬ’ ಅಕ್ಷರದಿಂದ ಸಿನಿಮಾ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ‘ಬಂಪರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಕೂಡಾ ಬಾಕ್ಸ್ ಆಫೀಸಿನಲ್ಲಿ ಬಂಪರ್ ಹೊಡೆಯಬೇಕು ಎನ್ನುವುದು ಎಲ್ಲರ ಹಾರೈಕೆ.

'ಅಲೆಮಾರಿ' ಖ್ಯಾತಿಯ ಸಂತು ಈ ‘ಬಂಪರ್’ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಅದಕ್ಕೂ ಮುನ್ನ ಅವರು ‘ಬಿಚ್ಚುಗತ್ತಿ’ ಸಿನಿಮಾಕ್ಕೆ ಫೈನಲ್ ಟಚ್​​​​​​​​​​​​​​​​​​​​​​​​​​​​​​​​​​​​ ನೀಡಲಿದ್ದಾರೆ. ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ರಾಜವರ್ಧನ್​​​​​​​​​​​ ವೃತ್ತಿ ಜೀವನದ ಬಹಳ ದೊಡ್ಡ ಸಿನಿಮಾ. ಇದು ಈಗ ಅಂತಿಮ ಹಂತದಲ್ಲಿದೆ. ಈ ಹಿಂದೆ ಸಂತು ನಿರ್ದೇಶನದ ‘ಕಾಲೇಜು ಕುಮಾರ’ ಯಶಸ್ಸನ್ನು ಕಂಡಿತ್ತು. ಸೆಪ್ಟೆಂಬರ್ 8 ಧನ್ವೀರ್ ಹುಟ್ಟುಹಬ್ಬವಾಗಿದ್ದು ಅವರ ಹೊಸ ಸಿನಿಮಾ ‘ಬಂಪರ್​‘ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತ ಸಾಹಿತ್ಯ ಕೂಡಾ ರಚಿಸಿದ್ದಾರೆ.

ಧನ್ವೀರ್​​​​ ‘ಬಜಾರ್’ ಸಿನಿಮಾ ಯಶಸ್ಸಿನ ಸಂದರ್ಭದಲ್ಲಿ ವಿತರಕ ಸುಪ್ರೀತ್ ಧನ್ವೀರ್ ಜೊತೆ ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸುಪ್ರೀತ್ ಈಗ 'ಬಂಪರ್​​' ಚಿತ್ರಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಕೌಟುಂಬಿಕ ಚಿತ್ರವಾಗಿದ್ದು ಮೊದಲ ಚಿತ್ರಕ್ಕೂ ಎರಡನೇ ಸಿನಿಮಾಗೂ ಬಹಳ ವ್ಯತ್ಯಾಸ ಇದೆ ಎನ್ನಲಾಗಿದೆ. ‘ಬಜಾರ್’ ಸಿನಿಮಾವನ್ನು ಧನ್ವೀರ್ ತಂದೆ ತಿಮ್ಮೇಗೌಡ ನಿರ್ಮಿಸಿದ್ದು ಸಿಂಪಲ್ ಸುನಿ ನಿರ್ದೇಶಿಸಿದ್ದರು.

ಧನವೀರ್ ಬಜಾರ್ ಅದ್ಮೇಲೆ ಬಂಪರ್ ಆಯ್ಕೆ!

ಕೆಲವು ಅಕ್ಷರಗಳಿಂದ ಶುರು ಆಗುವ ಶೀರ್ಷಿಕೆ ಕೆಲವು ನಟರುಗಳನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಅದ್ಧೂರಿ ಆದ ನಂತರ ಬಹದ್ದೂರ್, ಭರ್ಜರಿ ಆಗಿ ಧ್ರುವ ಸರ್ಜಾ ಅಕ್ಷರದ ಹಿಂದೆ ಹೋದರು ಅನ್ನುವಷ್ಟರಲ್ಲಿ ಅವರು ಪೊಗರು ನಾಲ್ಕನೇ ಚಿತ್ರವಾಗಿ ಆಯ್ಕೆ ಮಾಡಿಕೊಂಡರು.

ಈಗ ನವ ಯುವ ನಟ ಧನವೀರ್ ಬಜಾರ್ ಆದ ಮೇಲೆ ಮತ್ತೆ ಅಕ್ಷರದಿಂದ ಸಿನಿಮಾ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ಬಂಪರ್’. ಸಿನಿಮಾ ಬಂಪರ್ ಹೊಡೆಯಬೇಕು ಬಾಕ್ ಆಫೀಸಿನಲ್ಲಿ ಎಂಬುದು ಎಲ್ಲರ ಹರಕೆ. ಈಗ ಶೀರ್ಷಿಕೆಯೇ ಬಂಪರ್ ಆಗಿದೆ ಧನವೀರ್ ಎರಡನೇ ಸಿನಿಮಾಕ್ಕೆ.

ಅಲೆಮಾರಿ ಸಿನಿಮಾ ಇಂದ ಜನಪ್ರಿಯ ಆದ ಸಂತು ಈ ಬಂಪರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಕ್ಕೂ ಮುಂಚೆ ಅವರು ಬಿಚ್ಚುಗತ್ತಿ ಸಿನಿಮಾಕ್ಕೆ ಫೈನಲ್ ಟಚಸ್ ನೀಡಲಿದ್ದಾರೆ. ಐತಿಹಾಸಿಕ ಚಿತ್ರ ಬಿಚ್ಚುಗತ್ತಿ ರಾಜವರ್ಧನ ಅವರ ವೃತ್ತಿ ಜೀವನದ ದೊಡ್ಡ ಸಿನಿಮಾ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಸಂತು ನಿರ್ದೇಶನದ ಕಾಲೇಜು ಕುಮಾರ ಯಶಸ್ಸನ್ನು ಕಂಡಿತ್ತು.

ನಾಡಿದ್ದು ಸೆಪ್ಟೆಂಬರ್ 8 ಬಜಾರ್ ನಾಯಕ ಧನವೀರ್ ಹುಟ್ಟು ಹಬ್ಬಕ್ಕೆ ಅವರ ಹೊಸ ಸಿನಿಮಾ ಬಂಪರ್ ಬಗ್ಗೆ ವಿವರಣೆ ನೀಡಲಾಗುವುದು. ಬಂಪರ್ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಬಹದ್ದೂರ್ ಚೇತನ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತ ಸಾಹಿತ್ಯ ನೀಡಿದ್ದಾರೆ. ಕೇವಲ ನಿರ್ದೇಶನ ಮಾತ್ರ ಸಂತು ಅವರದ್ದು.

ಅಂದಹಾಗೆ ಧನವೀರ್ ಬಜಾರ್ ಸಿನಿಮಾ ಯಶಸ್ಸಿನ ಸಂದರ್ಭದಲ್ಲಿ ವಿತರಕ ಸುಪ್ರೀತ್ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸುಪ್ರೀತ್ ಈಗ ನಿರ್ಮಾಣಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಧನವೀರ್ ಎರಡನೇ ಸಿನಿಮಾ ಕುಟುಂಬ ಇಷ್ಟ ಪಡುವ ಕಥಾ ವಸ್ತುವೆ ಆಗಿರಲಿದೆ. ಅವರ ಮೊದಲ ಸಿನಿಮಕ್ಕೂ ಎರಡನೇ ಸಿನಿಮಾಕ್ಕೆ ಬಹಳ ವ್ಯತ್ಯಾಸ ಇದೆ ಎಂದು ಬಣ್ಣಿಸುತ್ತಾರೆ.

 ಧನವೀರ್ ಮೊದಲ ಸಿನಿಮಾ ಬಜಾರ್ ಅವರ ತಂದೆ ತಿಮ್ಮೆ ಗೌಡರೆ ನಿ ರ್ಮಾಣ ಮಾಡಿದ್ದರು. ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.