ಲವ್ ಮಾಕ್ಟೇಲ್ ಸಿನಿಮಾ ಸಕ್ಸಸ್ ಬಳಿಕ ಡಾರ್ಲಿಂಗ್ ಕೃಷ್ಣ ಈಗ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಲವ್ ಮಾಕ್ಟೇಲ್-2, ಕೃಷ್ಣ ಶುಗರಿ ಫ್ಯಾಕ್ಟರಿ, ಮಿಸ್ಟರ್ ಬ್ಯಾಚುಲರ್ ಹೀಗೆ ನಾಲ್ಕೈದು ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ. ಇದೀಗ ಮತ್ತೊಂದು ಚಿತ್ರವನ್ನ ಅನೌನ್ಸ್ ಮಾಡಿದ್ದಾರೆ.
ಶಂಕರ್ ಗುರು ಸಿನಿಮಾದಲ್ಲಿ ಡಾ. ರಾಜ್ ಕುಮಾರ್ ಲವ್ ಮಿ ಆರ್ ಹೇಟ್ ಮಿ, ಕಿಸ್ ಮಿ ಆರ್ ಕಿಲ್ ಮಿ, ಓ ಡಾರ್ಲಿಂಗ್ ಪ್ಲೀಸ್ ಡು ಸಮ್ಥಿಂಗ್ ಟು ಮಿ ಅಂತಾ ಗಿಟಾರ್ ಹಿಡಿದು ಹಾಡಿದ್ರು. ಈ ಹಾಡಿನ ಪದವೊಂದು ಈಗ ಡಾರ್ಲಿಂಗ್ ಕೃಷ್ಣ ಅಭಿನಯದ ಚಿತ್ರಕ್ಕೆ ಟೈಟಲ್ ಆಗಿ ಇಡಲಾಗಿದೆ. ಹೌದು, ಡಾರ್ಲಿಂಗ್ ಕೃಷ್ಣ ಅಭಿನಯದ ಹೊಸ ಚಿತ್ರಕ್ಕೆ ಲವ್ ಮಿ ಆರ್ ಹೇಟ್ ಮಿ ಅಂತಾ ಟೈಟಲ್ ಇಡಲಾಗಿದೆ.
ಯಜಮಾನ, ಅಮರ್, ಸೈರಾ ನರಸಿಂಹ ರೆಡ್ಡಿ, ಕಾಳಿದಾಸ ಕನ್ನಡ ಮೇಷ್ಟ್ರು, ನನ್ನ ಪ್ರಕಾರ ಸೇರಿದಂತೆ ನೂರಕ್ಕೂ ಹೆಚ್ಚು ಚಲನಚಿತ್ರಗಳನ್ನು ವಿತರಣೆ ಮಾಡಿದ ವಿತರಕ ದೀಪಕ್ ಗಂಗಾಧರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣಗೆ ನಾಯಕಿಯಾಗಿ ರಚಿತಾರಾಮ್ ನಟಿಸುತ್ತಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದರೆ, ಕೆ.ಎಂ.ಪ್ರಕಾಶ್ ಅವರ ಸಂಕಲನವಿರಲಿದೆ. ಸಿನಿಮಾ ಯಾವಾಗ ಶುರು, ಕಥೆ ಏನು, ಯಾರೆಲ್ಲಾ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.