ETV Bharat / sitara

ಟೆಲಿಫೋನ್​​​ ಬೂತ್​ನಲ್ಲಿ ಕೆಲಸ ಮಾಡ್ತಿದ್ದ ಹುಡುಗ ಈಗ ಬಹುಬೇಡಿಕೆ ನಟ - undefined

ಕನ್ನಡ ಚಿತ್ರರಂಗಕ್ಕೆ ರಂಗಭೂಮಿ ಸಾಕಷ್ಟು ಅದ್ಭುತ ಕಲಾವಿದರನ್ನು ಕೊಡುಗೆಯಾಗಿ ಕೊಟ್ಟಿದೆ. ಬಣ್ಣದ ಲೋಕದಲ್ಲಿ ರಂಗಭೂಮಿ ಹಿನ್ನೆಲೆಯುಳ್ಳವರು ದೊಡ್ಡ ತಾರೆಯರಾಗಿ ಮಿಂಚು ಹರಿಸಿದವರಿದ್ದಾರೆ. ಇಂತಹವರ ಸಾಲಿಗೆ 'ರಾಮಾ ರಾಮಾ ರೇ' ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ಹಾಸ್ಯನಟ ಧರ್ಮಣ್ಣ ಅವರೂ ಸೇರುತ್ತಾರೆ.

ಧರ್ಮಣ್ಣ
author img

By

Published : Jul 4, 2019, 9:37 PM IST

ಧರ್ಮಣ್ಣ, ಸದ್ಯ ಚಂದನವನದಲ್ಲಿ ಬಹು ಬೇಡಿಕೆ ನಟ. ವಿಭಿನ್ನ ಪಾತ್ರಗಳ ಮೂಲಕ ಮೂಲಕ ಪುನೀತ್ ರಾಜ್​ಕುಮಾರ್, ದರ್ಶನ್, ಗಣೇಶ್​ ಹೀಗೆ ದೊಡ್ಡ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡವರು. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಈ ಕಲಾವಿದ ಬಣ್ಣದ ಲೋಕಕ್ಕೆ ಬಂದಿದ್ದೇ ಒಂದು ರೋಚಕ ಕಥೆ. ಕೃಷಿ ಕುಟುಂಬದ ಈ ಹಳ್ಳಿ ಪ್ರತಿಭೆ ಮುಂದೊಂದು ದಿನ ತಾನು ನಟನಾಗುತ್ತೇನೆ ಎಂದು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

Actor Dharmanna
ಹಾಸ್ಯನಟ ಧರ್ಮಣ್ಣ

ಇವರಲ್ಲಿರುವ ಪ್ರತಿಭೆ ಕಾಲೇಜ್ ದಿನಗಳಲ್ಲಿ ಅನಾವರಣಗೊಳ್ಳುತ್ತೆ. ಪಿ.ಲಂಕೇಶ್ ಅವರ 'ತೆರೆಗಳು', 'ಕುವೆಂಪು' ಅವರ ಕಲ್ಕಿ ಹೀಗೆ ನಾಟಕಗಳಲ್ಲಿ ಅಭಿನಯಿಸುತ್ತ ಕಲೆಯ ಗೀಳು ಹಚ್ಚಿಕೊಳ್ಳುತ್ತಾರೆ. ಹೀಗೆ ಪ್ರಾರಂಭವಾದ ಇವರ ಅಭಿನಯದ ಪಯಣ ಇಂದು ಕನ್ನಡ ಚಿತ್ರರಂಗಕ್ಕೆ ತಂದು ನಿಲ್ಲಿಸಿದೆ.

Actor Dharmanna
ಹಾಸ್ಯನಟ ಧರ್ಮಣ್ಣ

ಅಭಿನಯಾಸಕ್ತಿ ಜತೆಗೆ ಓದಿನಲ್ಲಿ ಇವರಿಗೆ ಒಲವು ಜಾಸ್ತಿ. ಆದ್ರೆ ಹಣದ ಕೊರತೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿ ಟೆಲಿಫೋನ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಇದಾದ ನಂತರ ಯಶವಂತ್ ಸರ್​​ದೇಶಪಾಂಡೆ ಅವರ ನಾಟಕ ತಂಡದಲ್ಲಿ ಟೆಕ್ನಿಶಿಯನ್ ಆಗಿ ಸೇರಿಕೊಳ್ಳುತ್ತಾರೆ. ಇಲ್ಲಿ ಲೈಟ್​​ಬಾಯ್ ಆಗಿ ಕೆಲಸ ಮಾಡುತ್ತಿದ್ದ ಧರ್ಮಣ್ಣ, ಚಿಕ್ಕ-ಪುಟ್ಟ ಪಾತ್ರಗಳ ಮೂಲಕ ಕಲಾವಿದನ ಪಟ್ಟ ಅಲಂಕರಿಸುತ್ತಾರೆ. ಇಲ್ಲಿಂದಲೇ ಧರ್ಮಣ್ಣ ಅದೃಷ್ಟ ಖುಲಾಯಿಸುತ್ತೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಂಡ ಹಲವು ನಾಟಕಗಳಲ್ಲಿ ಇವರು ನಟಿಸುತ್ತಾರೆ.

Actor Dharmanna
ಹಾಸ್ಯನಟ ಧರ್ಮಣ್ಣ

ನಾಟಕಗಳಲ್ಲಿ ಬ್ಯುಸಿಯಾಗಿದ್ದ ಇವರು 'ರಾಮಾ ರಾಮಾ ರೇ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಾರೆ. ಅವರ ಈ ಆಗಮನಕ್ಕೆ ಈ ಚಿತ್ರದ ನಿರ್ದೇಶಕ ಸತ್ಯಪ್ರಕಾಶ್ ಅವರು ಕಾರಣರಾಗುತ್ತಾರೆ. ಈ ಚಿತ್ರದ ಮೊದಲ ದೃಶ್ಯಕ್ಕೆ ಸಾಕಷ್ಟು ಟೇಕ್​ ತೆಗೆದುಕೊಂಡ ಧರ್ಮ ಅವರಿಗೆ ಸತ್ಯ ಪ್ರಕಾಶ್ ಬಹಳ ತಾಳ್ಮೆಯಿಂದ ನಟನೆ ಕುರಿತು ಹೇಳಿ, ಧೈರ್ಯ ತುಂಬುತ್ತಾರೆ.

Actor Dharmanna
ಉಪೇಂದ್ರ ಜತೆ ಹಾಸ್ಯನಟ ಧರ್ಮಣ್ಣ

'ರಾಮಾ ರಾಮಾ ರೇ' ಸಿನಿಮಾ ನಂತ್ರ ಇವರಿಗೆ ಸಾಲು-ಸಾಲು ಅವಕಾಶಗಳು ಬರುತ್ತವೆ. ಅದು ಎಷ್ಟರ ಮಟ್ಟಿಗೆಯಂದ್ರೆ ಡೇಟ್ ಹೊಂದಾಣಿಕೆ ಆಗದೆ ಕೆಜಿಎಫ್, ಅಮರ್​ನಂತಹ ಚಿತ್ರಗಳನ್ನು ಬಿಡ್ತಾರೆ. ಇವರು ಪುನೀತ್​ ಜತೆ ಅಂಜನೀಪುತ್ರ, ಗಣೇಶ್​ ಜತೆ ಮುಗುಳು ನಗೆ, ದರ್ಶನ್​ ಹಾಗೂ ಪ್ರಜ್ವಲ್ ಜತೆ ಇನ್ಸ್​ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ನಟಿಸಿದ್ದಾರೆ. ಇದುವರೆಗೆ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಇವರಿಗೆ ಕುಟುಂದವರಿಂದ ಸಾಕಷ್ಟು ಸಪೋರ್ಟ್ ಕೂಡ ಇದೆಯಂತೆ. ಈಟಿವಿ ಭಾರತದ ಜೊತೆ ಧರ್ಮಣ್ಣ ತಮ್ಮ ಸಿನಿ ಪಯಣದ ಅನುಭವ ಹಂಚಿಕೊಂಡಿದ್ದಾರೆ.

'ಈಟಿವಿ ಭಾರತ'​ ಜತೆ ಧರ್ಮಣ್ಣನ ಮಾತು

Intro:ಟೆಲಿಪೋನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡ್ಗ ಸಿನಿಮಾ ನಟನಾದ ಯಶೋಗಾಥೆ!!

ಕನ್ನಡ ಚಿತ್ರರಂಗಕ್ಕೆ ರಂಗಭೂಮಿ ಕಲಾವಿದರು ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ..ಕೆಲವರು ಹೀರೋಗಳಾಗಿ ಈ ಬಣ್ಣದ ಲೋಕದಲೇ ಸ್ಟಾರ್ ಗಿರಿಯನ್ನ ಸಂಪಾದಿಸಿದ್ರೆ, ಮತ್ತೆ ಕೆಲವರು ಹಾಸ್ಯ ನಟರಾಗಿ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ..ಇದೇ ಸಾಲಿನಲ್ಲಿ ರಾಮಾ ರಾಮಾ ರೇ, ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ ಧರ್ಮಣ್ಣನ ಸಿನಿಮಾ ಎಂಟ್ರಿಯೇ ರೋಚಕವಾಗಿದೆ..

ಸದ್ಯ ಚಂದನವನದಲ್ಲಿ ಬೇಡಿಕೆ ಹಾಸ್ಯ ನಟನಾಗಿರೋ ಧರ್ಮಣ್ಣ, ವಿಭಿನ್ನ ಪಾತ್ರದ ಮೂಲ್ಕ ಪುನೀತ್ ರಾಜ್ ಕುಮಾರ್, ದರ್ಶನ್, ಗಣೇಶ್,ಹೀಗೆ ದೊಡ್ಡ ಸ್ಟಾರ್ ನಟರ ಜೊತೆ ಧರ್ಮ ಮಿಂಚುತ್ತಿದ್ದಾರೆ..ಚಿಕ್ಕಮಗಳೂರು ಜಿಲ್ಲೆಯ, ಕಡೂರು ಹಳ್ಳಿಯವನಾದ ಧರ್ಮಣ್ಣ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರೋದು ಇಂಟ್ರಸ್ಟ್ರಿಂಗ್ ಆಗಿದೆ..ಕೃಷಿ ಕುಟುಂಬದಲ್ಲಿ ಹುಟ್ಟಿರುವ ಹಳ್ಳಿ ಪ್ರತಿಭೆ, ನಾನು ಒಂದು ದಿನ ನಟನಾಗುತ್ತೆನೆ ಅಂತಾ ಸ್ವತಃ ಧರ್ಮಣ್ಣನಿಗೂ ಗೊತ್ತಿರಲಿಲ್ಲ..ಅಷ್ಟಕ್ಕೂ ಧರ್ಮ ಅವ್ರಿಗೆ ಈ ಸಿನಿಮಾದ ಗೀಳು ಅಂಟಿಕೊಂಡಿದ್ದು, ಎಲ್ಲಿಂದ ಅನ್ನೋದನ್ನ ಹಾಸ್ಯ ಕಲಾವಿದನ ಮಾತಲ್ಲೇ ಕೇಳಿ..

ಬೈಟ್: ಧರ್ಮಣ್ಣ, ಹಾಸ್ಯ ನಟ

ಧರ್ಮಣ್ಣನಲ್ಲಿ ಕಲೆ ಇದೆ ಅನ್ನೋದು ಗೊತ್ತಾಗಿದ್ದು ಕಾಲೇಜ್ ದಿನಗಳಲ್ಲಿ.ಆ ಟೈಮಲ್ಲಿ ಪಿ ಲಂಕೇಶ್ ತೆರೆಗಳು, ಕುವೆಂಪು ಅವ್ರ, ಕಲ್ಕಿ, ಜಲಗಾರ ನಾಟಕಗಳು ಮಾಡ್ತಾ ಇದ್ದ ಧರ್ಮಣ್ಣನಿಗೆ ಕಲೆಗೆ, ಮತ್ತಷ್ಟು ಪ್ರೋತ್ಸಾಹ ಕೊಟ್ಟಿದವರು ಯಾರು ಅಂತೀರಾ ಧರ್ಮ ಅವರು ಹೇಳ್ತಾರೆ..

ಬೈಟ್: ಧರ್ಮಣ್ಣ, ಹಾಸ್ಯ ನಟ

ಕಲೆ ಜೊತೆಗೆ ಧರ್ಮಣ್ಣ ಓದಿನಲ್ಲಿ ಹೆಚ್ಚು ಆಸಕ್ತಿ ಇತ್ತು..ಆದ್ರೆ ಓದೋದಿಕ್ಕೆ ಹಣದ ಕೊರತೆ ಇದ್ದ ಕಾರಣ, ಓದಿಗೆ ಇತಶ್ರೀ ಇಟ್ಟು, ಟೆಲಿಪೋನ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ..ಎಸ್ ಟಿ ಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಧರ್ಮಣ್ಣನಿಗೆ ಮತ್ತೊಂದು ಅದೃಷ್ಟ ಖುಲಾಯಿಸಿತ್ತು..ಕಾಲೇಜ್ ದಿನಗಳಲ್ಲಿ ನಾಟಕ ಆಡುತ್ತಿದ್ದ ಧರ್ಮ, ಯಶವಂತ್ ಸರ್ ದೇಶಪಾಂಡೆಯವ್ರ, ಕಲಾ ತಂಡಕ್ಕೆ ಸೇರಿಕೊಂಡಿದ್ದು ಮಾತ್ರ ಕೋಟಿ ರೂಪಾಯಿ ಸಿಕ್ಕಿದಂತಾಯಿತು..

ಬೈಟ್: ಧರ್ಮಣ್ಣ, ಹಾಸ್ಯ ನಟ

ಯಶವಂತ್ ಸರ್ ದೇಶಪಾಂಡೆ ನಾಟಕ ತಂಡದಲ್ಲಿ, ಟೆಕ್ನಿನಿಶಿಯನ್ ಆಗಿ ಸೇರಿಕೊಂಡ ಧರ್ಮಣ್ಣ ಕಲಾವಿದ ಆಗಿದ್ದು ಮಾತ್ರ ಅಚ್ಚರಿ. ಈ ನಾಟಕ ತಂಡದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಧರ್ಮ, ಸಣ್ಣ ಸಣ್ಣ ಪಾತ್ರಗಳನ್ನ ಮಾಡ್ತಾ ಕಲಾವಿದನ ಪಟ್ಟವನ್ನ ಅಲಂಕರಿಸುತ್ತಾರೆ..ಇಲ್ಲಿಂದಲೇ ಧರ್ಮಣ್ಣ ಅದೃಷ್ಟ ಖುಲಾಯಿಸುತ್ತೆ..ಸಾಮಾನ್ಯವಾಗಿ ಸಿನಿಮಾದಲ್ಲಿ ಫಾರಿನ್ ಹೋಗುದು ಕಾಮನ್, ಆದ್ರೆ ಧರ್ಮ ಸಿನಿಮಾಗೆ ಎಂಟ್ರಿ ಕೊಡೋದಿಕ್ಕಿಂತ ಮುಂಚೆ, ಅಮೆರಿಕಾ, ಆಸ್ಟ್ರೇಲಿಯಾ ಹೀಗೆ ಹಲವು ಫಾರಿನ್ ಕಂಟ್ರಿಗಳಲ್ಲಿ ನಾಟಕ ಪ್ರದರ್ಶನಗಳನ್ನ ಕೊಟ್ಟಿದ್ದಾರೆ.. ಈ ನಾಟಕಗಳನ್ನ ಮಾಡ್ತಾ ಇದ್ದ ಧರ್ಮಣ್ಣನಿಗೆ ಸಿನಿಮಾಗೆ ಎಂಟ್ರಿ ಆಗೋದಿಕ್ಕೆ, ರಾಮಾ ರಾಮಾ ರೇ ಸಿನಿಮಾ ನಿರ್ದೇಶಕ ಸತ್ಯಪ್ರಕಾಶ್ ಕಾರಣವಂತೆ..ಅದು ಹೇಗೆ..ಈ ರಾಮಾ ರಾಮಾ ರೇ ಸಿನಿಮಾ ಸ್ಟಾರ್ಟ್ ಆಗಿದ್ದು ಹೇಗೆ ಕೇಳಿ.‌

ಬೈಟ್: ಧರ್ಮಣ್ಣ. ಹಾಸ್ಯ ನಟBody:ರಾಮಾ ರಾಮಾ ರೇ ಸಿನಿಮಾ ಫಸ್ಟ್ ಟೈಮ್ ಕ್ಯಾಮರ ಫೇಸ್ ಮಾಡಿದಾಗ ಧರ್ಮಣ್ಣ, ಮಧ್ಯಾಹ್ನದಿಂದ ಸಂಜೆ ತನಕ ಎಷ್ಟು ಟೇಕ್ ಗಳನ್ನ ತಗೊಂಡ್ರು, ರಾತ್ರಿ ಬಂದಾಗ ಧರ್ಮ ಯಾಕೇ ತುಂಬಾ ಬೇಜಾರು ಮಾಡಿಕೊಂಡ್ರು ಕೇಳಿ..

ಬೈಟ್: ಧರ್ಮಣ್ಣ. ಹಾಸ್ಯ ನಟ

ಅಂದು ರಾಮಾ ರಾಮಾ ರೇ ಸಿನಿಮಾದಲ್ಲಿ, ನನ್ನ ಕೈಯಲ್ಲಿ ಆಕ್ಟ್ ಮಾಡೋದಿಕ್ಕೆ ಆಗ್ತಾ ಇಲ್ಲಾ ಅಂತಾ ಅಂದು ಕೊಂಡು ಸುಮ್ಮನಿದ್ರೆ, ಇಂದು ಕನ್ನಡ ಚಿತ್ರರಂಗದಲ್ಲಿ ಧರ್ಮಣ್ಣ ಎಂಬ ನಟ ಆಗೋದಿಕ್ಕೆ ಆಗ್ತಾ ಇರಲಿಲ್ಲ ..ಅಂದು ನಿರ್ದೇಶಕ ಸತ್ಯ ಪ್ರಕಾಶ್ ನೂರಾರು ಟೇಕ್ ಗಳನ್ನ ತೆಗೆದುಕೊಂಡ್ರು ಕೂಡ, ಸತ್ಯಪ್ರಕಾಶ್ ಬಹಳ ತಾಳ್ಮೆಯಿಂದ ಧರ್ಮಣ್ಣನಿಗೆ ನಟನೆ ಹೇಳಿ ಕೊಟ್ಟ ಬಗ್ಗೆ ಧರ್ಮ ಹೇಳೋದು ಹೀಗೆ..

ಬೈಟ್: ಧರ್ಮಣ್ಣ. ಹಾಸ್ಯ ನಟ

ರಾಮಾ ರಾಮಾ ರೇ ಸಿನಿಮಾ, ಯಶಸ್ಸಿನ ನಂತ್ರ ಧರ್ಮಣ್ಣನಿಗೆ ಅವಕಾಶಗಳ ಸುರಿಮಳೆ ಆಗುತ್ತಿವೆ‌.ಯಾವ ಮಟ್ಟಿಗೆ ಅಂದ್ರೆ,ಡೇಟ್ ಹೊಂದಾಣಿಕೆ ಆಗದೆ ಕೆಜಿಎಫ್, ಅಮರ್ ಹೀಗೆ ದೊಡ್ಡ ದೊಡ್ಡ ಸಿನಿಮಾಗಳ ಕೈ ತಪ್ಪಿ ಹೋಗುತ್ವೆ,,ಆದ್ರೂ ಧರ್ಮಣ್ಣ, ಅಂಜನೀಪುತ್ರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್,ಮುಗುಳೆ ನಗೆ ಚಿತ್ರದಲ್ಲಿ ಗಣೇಶ್ ಜೊತೆ ಹಾಗು ಇನ್ಸಿಪೆಕ್ಟರ್ ವಿಕ್ರಂ ಚಿತ್ರದಲ್ಲಿ ದರ್ಶನ್ ಹಾಗು ಪ್ರಜ್ವಲ್ ದೇವರಾಜ ಜೊತೆ ಧರ್ಮ ಅಭಿನಯಿಸಿದ್ದಾರೆ..ಹೀಗೆ 12ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋ ಧರ್ಮಣ್ಣನಿಗೆ ಕುಟುಂದವರಿಂದ ಸಾಕಷ್ಟು ಸಪೋರ್ಟ್ ಕೂಡ ಇದೆಯಂತೆ.. ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ, ಕಡೂರು ಧರ್ಮಣ್ಣನ ಸಿನಿಮಾ ಜರ್ನಿಯ ಹಿಂದಿರೋ ಸಕ್ಸಸ್ ಕಹಾನಿ ಇದು..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.