ಬೆಂಗಳೂರು: ಕೊರೊನಾದಿಂದಾಗಿ ವಿಶ್ವದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ಪರಿಣಾಮ ಚಿತ್ರೋದ್ಯಮದ ಮೇಲೂ ಬೀರಿದೆ. ಈ ಮಾತಿಗೆ ಪೂರಕವಾಗಿ ಇದೀಗ ಸ್ಯಾಂಡಲ್ವುಡ್ನಲ್ಲಿ ಓಟಿಟಿ ಪ್ಲಾಟ್ ಫಾರ್ಮ್‌ಗಳು ಹೆಚ್ಚಾಗಿವೆ.
ಈಗಾಗಲೇ ಕನ್ನಡದಲ್ಲಿ ನಮ್ಮ ಪ್ಲಿಕ್ಸ್ ಹಾಗು ಓಕೆ ಕನ್ನಡ ಅಂತಾ ಓಟಿಟಿ ಪ್ಲಾಟ್ ಫಾರ್ಮ್‌ಗಳು ಚಾಲ್ತಿಯಲ್ಲಿವೆ. ಈಗ ಇದೇ ಸಾಲಿಗೆ Cinemanodi ಎಂಬ ಕನ್ನಡ ಓಟಿಟಿ ಪ್ಲಾಟ್ ಫಾರ್ಮ್ ಸೇರ್ಪಡೆಯಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಚಿತ್ರಮಂದಿರಗಳು ಮುಚ್ಚಿರುವ ಕಾಲದಲ್ಲಿ ಓಟಿಟಿ ಪ್ಲಾಟ್ ಫಾರ್ಮ್ಗಳಿಗೆ ಬೇಡಿಕೆ ಹೆಚ್ಚಿದೆ.
ಈ ಕಾರಣಕ್ಕೆ ಕೇಂದ್ರ ಸೆನ್ಸಾರ್ ಬೋರ್ಡ್ನ ನಿವೃತ್ತ ಅಧಿಕಾರಿ ನಾಗೇಂದ್ರ ಸ್ವಾಮಿ ಹಾಗು ಶಾಂತಕುಮಾರಿ ಸೇರಿಕೊಂಡು Cinemanodi ಓಟಿಟಿ ಪ್ಲಾಟ್ ಫಾರ್ಮ್ ಅನ್ನು ಹುಟ್ಟು ಹಾಕಿದ್ದಾರೆ. ಇದರಲ್ಲಿ ಮೊದಲಿಗೆ ಡಾ. ರಾಜ್ ಕುಮಾರ್ ಅವರ ಎವರ್ ಗ್ರೀನ್ ಸಿನಿಮಾ 'ಕಸ್ತೂರಿ ನಿವಾಸ'ವನ್ನು ಆರಂಭಿಕ ಚಿತ್ರವಾಗಿ ಪ್ರಸಾರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ Cinemnodi ಓಟಿಟಿ ಪ್ಲಾಟ್ ಫಾರ್ಮ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
ಈ 'ಸಿನಿಮಾನೋಡಿ' ಓಟಿಟಿ ಪ್ಲಾಟ್ ಫಾರ್ಮ್ ಬೇರೆ ಓಟಿಟಿಗಿಂತ ಭಿನ್ನವಾಗಿದೆ. ಅಡ್ವಾನ್ಸ್ ಕ್ಲೌಡ್ ಟೆಕ್ನಾ ಲಜಿಯೊಂದಿಗೆ ಇದ್ರಲ್ಲಿ ವಿಡಿಯೋ ಸ್ಟ್ರೀಮ್ ಆಗುತ್ತೆ. ಇದಕ್ಕೆ ಜನರು ಚಂದಾದಾರರಾಗಬೇಕಿಲ್ಲ. ಜೊತೆಗೆ ಇದು ಜಾಹೀರಾತು ಮುಕ್ತ ವೇದಿಕೆಯೂ ಹೌದು. ವೆಬ್ ಪ್ಲೇಸ್ಟೋರ್, ಆ್ಯಪ್ ಸ್ಟೋರ್, ಫೈರ್ ಟಿವಿ ಮತ್ತು ರೋಕ್ ಈ ಐದು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾಗಳನ್ನು ನೋಡಬಹುದಾಗಿದೆ. ಈಗ Cinemanodi.in ವೆಬ್ಸೈಟ್ನಲ್ಲಿ ಲಭ್ಯವಿದ್ದು ಒಂದು ವಾರದ ಬಳಿಕ ವೆಬ್ ಪ್ಲೇಸ್ಟೋರ್, ಆ್ಯಪ್ ಸ್ಟೋರ್, ಫೈರ್ ಟಿವಿ ಮತ್ತು ರೋಕ್ನಲ್ಲಿ ಸಿಗಲಿದೆ.
ನಾಗೇಂದ್ರಸ್ವಾಮಿ ಹಾಗೂ ಶಾಂತಕುಮಾರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಓಟಿಟಿನಲ್ಲಿ ಈಗಾಗಲೇ ಹೊಸ ಮತ್ತು ಹಳೆ ಚಿತ್ರಗಳು ಹಾಗೂ ಸಿನಿಮಾದ 200 ಹಾಡುಗಳಿವೆ.
ಆರ್ಥಿಕವಾಗಿ ವೀಕ್ಷಕರಿಗೆ ಹೊರೆಯಾಗದ ದರದಲ್ಲಿ ಸಿನಿಮಾ ನೋಡುವ ಅವಕಾಶ ಕಲ್ಪಿಸುವ ಭರವಸೆಯನ್ನು ಈ ಪ್ಲಾಟ್‌ಫಾರ್ಮ್‌ನ ತಂಡ ನೀಡಿದೆ. ಕನಿಷ್ಠ ದರ ಅಂತ ಬಂದಾಗ 30 ರೂಪಾಯಿ ಹಾಗೂ ಹೊಸ ಸಿನಿಮಾವನ್ನು 100 ರೂಪಾಯಿ ಪಾವತಿಸಿ ವೀಕ್ಷಣೆ ಮಾಡಬಹುದು ಅಂತಾರೆ ನಾಗೇಂದ್ರ ಸ್ವಾಮಿ.
ಪ್ರತಿಷ್ಠಿತ ಓಟಿಟಿ ಪ್ಲಾಟ್ ಫಾರ್ಮ್ಗಳ ಮುಂದೆ, ಕನ್ನಡದಲ್ಲಿ ಹುಟ್ಟಿಕೊಂಡಿರುವ ಕನ್ನಡದವರ ಓಟಿಟಿಗಳು ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ತಲುಪಲಿವೆ ಅನ್ನೋದನ್ನು ಕಾದು ನೋಡಬೇಕಿದೆ.