ಕನ್ನಡ ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕಿದ್ದ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಮತ್ತು ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಚಿರಂಜೀವಿ ಸರ್ಜಾ ದೈಹಿಕವಾಗಿ ನಮ್ಮಿಂದ ದೂರವಾಗಿದ್ದಾರೆ. ಇದೀಗ ಅವರು ಸೋಷಿಯಲ್ ಮೀಡಿಯಾದಿಂದ ಕೂಡಾ ದೂರವಾಗಿದ್ದಾರೆ.
ಚಿರಂಜೀವಿ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಇದ್ದರು. ಆದರೆ ಅವರು ನಿಧನರಾಗಿ ಇನ್ನೂ ಎರಡು ದಿನಗಳು ಕೂಡಾ ಕಳೆದಿಲ್ಲ. ಆಗಲೇ ಅವರ ಅಫಿಷಿಯಲ್ ಫೇಸ್ಬುಕ್ ಖಾತೆ ಡಿಲೀಟ್ ಆಗಿದೆ. ಫೇಸ್ಬುಕ್ ಮೂಲಕ ಚಿರಂಜೀವಿ ಸರ್ಜಾ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದರು. ತಮ್ಮ ಹೊಸ ಸಿನಿಮಾಗಳ ಅಪ್ಡೇಟ್ ನೀಡುತ್ತಿದ್ದರು. ಈಗ ಅವರ ಫೇಸ್ಬುಕ್ ಖಾತೆ ಡಿಲೀಟ್ ಆಗಿದೆ. ಆದರೆ ಅವರ ಟ್ವಿಟ್ಟರ್ ಖಾತೆ ಇನ್ನೂ ಆ್ಯಕ್ಟಿವ್ ಇದೆ. ಒಂದು ವೇಳೆ ಚಿರಂಜೀವಿ ಸರ್ಜಾ ಕುಟುಂಬದವರೇ ಡಿಲೀಟ್ ಮಾಡಿದ್ದಾರೆ ಎಂದು ಹೇಳುವುದಾದರೆ ಅವರು ನೋವಿನಲ್ಲಿದ್ದು ಈ ಸಂದರ್ಭದಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದರೆ ಫೇಸ್ಬುಕ್ ಖಾತೆ ಯಾರು ಡಿಲೀಟ್ ಮಾಡಿದ್ದಾರೆ ಎಂಬುದೇ ಪ್ರಶ್ನೆಯಾಗಿದೆ.