ಮೈಸೂರು: ನಾಳೆ ನಿವೇದಿತಾ ಗೌಡ ಹಾಗೂ ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ವಿವಾಹ ನಡೆಯಲಿದ್ದು, ಈ ಹಿನ್ನೆಲೆ ಇಂದು ನಿವೇದಿತಾ ಗೌಡ ಮನೆಯಲ್ಲಿ ಚಪ್ಪರದ ಕಾರ್ಯ ನೆರವೇರಿತು.
ನಾಳೆ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿವಾಹ ನಡೆಯಲಿದ್ದು, ಮದುವೆ ಮುನ್ನಾ ದಿನ ಹೆಣ್ಣಿನ ಮನೆಯಲ್ಲಿ ನಡೆಸಲಾಗುವ ಚಪ್ಪರದ ಕಾರ್ಯಗಳು ಸಂಪ್ರದಾಯದಂತೆ ನೆರವೇರಿತು.
ಈ ಕಾರ್ಯದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಪಾಲ್ಗೊಂಡು ಹೆಣ್ಣಿಗೆ ಆರತಿ ಶಾಸ್ತ್ರ ಮಾಡಿದರು. ಇಂದು ಚಪ್ಪರದ ಕಾರ್ಯ ಮುಗಿಸಿಕೊಂಡು ನಿವೇದಿತಾ ಕುಟುಂಬ ಕಲ್ಯಾಣ ಮಂಟಪಕ್ಕೆ ಹೊರಟಿದ್ದು, ಸಂಜೆ ಆರತಕ್ಷತೆ ಕಾರ್ಯ ನಡೆಯಲಿದೆ. ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಟ ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಚಿತ್ರರಂಗದ ಹಲವರು ಭಾಗವಹಿಸುವ ನಿರೀಕ್ಷೆ ಇದೆ.