ಉತ್ತರಾಖಂಡ್: ಇತ್ತೀಚೆಗಷ್ಟೇ 'ರಾಬರ್ಟ್' ಶೂಟಿಂಗ್ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದರು. ಸ್ನೇಹಿತರ ಜೊತೆಗೂಡಿ ವೈಲ್ಡ್ ಫೋಟೊಗ್ರಫಿಗಾಗಿ ಉತ್ತರಾಖಂಡ್ನ ಅರಣ್ಯ ಪ್ರದೇಶಕ್ಕೆ ತೆರಳಿದ್ದರು.
ನಟ ದರ್ಶನ್ ಉತ್ತರಾಖಂಡ್ ರಾಜ್ಯದ ಅರಣ್ಯದಲ್ಲಿ ಪ್ರಾಣಿ-ಪಕ್ಷಿಗಳ ಫೋಟೋ ತೆಗೆದು ತವರಿಗೆ ವಾಪಸ್ಸಾಗಿದ್ದಾರೆ. ಜನ ಸಾಮಾನ್ಯರಂತೆ ರಸ್ತೆಬದಿ ಓಡಾಡಿಕೊಂಡು, ಪುಟ್ಪಾತ್ನಲ್ಲಿ ಸಿಗುವ ಕುರುಕಲು ತಿಂಡಿಗಳನ್ನು ಸವಿದ ಡಿಬಾಸ್, ಲೋಕಲ್ ಟ್ರೈನ್ನಲ್ಲಿ ಪ್ರಯಾಣಿಸಿ ಖುಷಿಪಟ್ಟರು.