ETV Bharat / sitara

'ಪೈಲ್ವಾನ್' ನೋಡಿ ಮೆಚ್ಚಿದ ಸೆಂಚುರಿ ಸ್ಟಾರ್​​​​... ನಿರ್ಮಾಪಕರ ಹೊಟ್ಟೆ ಮೇಲೆ ಹೊಡಿಬೇಡಿ ಅಂದ್ರು ಶಿವಣ್ಣ - ಟಗರು

'ಪೈಲ್ವಾನ್​' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​​​​​​​​​​​​​​​​​​​ ಒಳ್ಳೆಯ ಸಿನಿಮಾಗಳು ಬಂದರೆ ನೋಡಿ ಪ್ರೋತ್ಸಾಹಿಸಿ ಎಂದು ಕಿವಿಮಾತು ಹೇಳಿದರು. ಇನ್ನು ಪೈರಸಿ ವಿಚಾರವಾಗಿ ತನಿಖೆ ನಡೆಯುತ್ತಿದೆ ಎಂದು ನಿರ್ದೇಶಕ ಕೃಷ್ಣ ಹೇಳಿದರು.

ಶಿವಣ್ಣ
author img

By

Published : Sep 18, 2019, 9:04 PM IST

ಕನ್ನಡ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್​​​' ಸಿನಿಮಾವನ್ನು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ದೂರಿ ಮೇಕಿಂಗ್, ಚಿತ್ರದಲ್ಲಿರುವ ಸಂದೇಶ, ಕೃಷ್ಣ ಅವರ ನಿರ್ದೇಶನ ಹಾಗೂ ಈ ಪಾತ್ರಕ್ಕಾಗಿ ಕಿಚ್ಚನ ಡೆಡಿಕೇಷನ್​​​​ಗೆ ಶಿವಣ್ಣ ಫಿದಾ ಆಗಿದ್ದಾರೆ.

'ಪೈಲ್ವಾನ್' ಸಿನಿಮಾ ವೀಕ್ಷಿಸಿದ ಶಿವಣ್ಣ

ಕ್ಲೈಮಾಕ್ಸ್ ಸನ್ನಿವೇಶ, ಎಮೋಷನಲ್​ ಸೀನ್​​​​​​​​​​​​​​​​ಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಮೊದಲ ನಿರ್ಮಾಣದಲ್ಲಿ ಸ್ವಪ್ನಕೃಷ್ಣ ಯಶಸ್ಸು ಸಾಧಿಸಿದ್ದಾರೆ ಎಂದು ಕೃಷ್ಣ ಅವರನ್ನು ಶಿವರಾಜ್​​​ಕುಮಾರ್ ಹೊಗಳಿದರು. ನಿರ್ದೇಶಕ ಕೃಷ್ಣ, 'ಟಗರು' ಸಿನಿಮಾ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಶಿವರಾಜ್​​​​​​​ಕುಮಾರ್​​​ಗೆ ಸಾಥ್ ನೀಡಿದರು. ಇನ್ನು ಸ್ಯಾಂಡಲ್​​ವುಡ್​​​ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಮಾತನಾಡಿದ ಶಿವಣ್ಣ ಎಲ್ಲಾ ಸ್ಟಾರ್​​ಗಳೂ ಒಂದೇ. ಆದರೆ ಕೆಲವು ಅಭಿಮಾನಿಗಳು ಮಾಡುತ್ತಿರುವುದು ತಪ್ಪು. ಇಲ್ಲಿ ದೇವರಿಗಿಂತ ದೊಡ್ಡವರು ಯಾರೂ ಇಲ್ಲ. ಯಾರು ಏನು ಮಾಡುತ್ತಿದ್ದಾರೆ ಎಂಬುದನ್ನು ಅವನು ನೋಡುತ್ತಿರುತ್ತಾನೆ. ಸಮಯ ಬಂದಾಗ ಅವರನ್ನು ಕೊಕ್ಕೆ ಹಾಕಿ ಎಳೆಯುತ್ತಾನೆ ಅಥವಾ ತಳ್ಳುತ್ತಾನೆ. ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಒಳ್ಳೆ ಸಿನಿಮಾ ಬಂದಾಗ ಎಲ್ಲರೂ ಹೆಮ್ಮೆ ಪಡಬೇಕು. ಆದರೆ ಕಾಲು ಎಳೆಯುವುದು ತಪ್ಪು ಎಂದು ಶಿವರಾಜ್​ಕುಮಾರ್​ ಕಿವಿಮಾತು ಹೇಳಿದರು.

ನಂತರ ಮಾತನಾಡಿದ ನಿರ್ದೇಶಕ ಕೃಷ್ಣ ಶಿವರಾಜ್ ಕುಮಾರ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರ ದೊಡ್ಡ ಗುಣ ಎಂದು ಸಂತೋಷ ವ್ಯಕ್ತಪಡಿಸಿದರು. ಇನ್ನು ಪೈರಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೃಷ್ಣ 'ಪೈರಸಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಮ್ಮ ಚಿತ್ರರಂಗದಲ್ಲಿ ಕಾಲು ಎಳೆಯುವವರು ಇದ್ದಾರೆ ಎಂದರು. ಇನ್ನು ತಮ್ಮ ಪತ್ನಿ ಸ್ವಪ್ನಕೃಷ್ಣ ಮಾಡಿದ ಟ್ವೀಟ್ ಬಗ್ಗೆ ಮಾತನಾಡಿದ ಕೃಷ್ಣ ನಿರ್ಮಾಪಕಿಯಾಗಿ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ ಅಷ್ಟೇ. ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ ಎಂದು ಹೇಳಿದರು.

Intro:ಸುದೀಪ್ ಡೇಡಿಕೆಷನ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫಿದಾ!!

ಪೈಲ್ವಾನ್..ಕರ್ನಾಟಕ ಅಲ್ಲದೇ ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರೋ‌ ಸಿನಿಮಾ..ಕಿಚ್ಚ ಸುದೀಪ್ ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡಿರೋ ಸಿನಿಮಾ, ಬಾಕ್ಸ್ ಆಫೀಸ್‌ ಅಲ್ಲದೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ..ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪೈಲ್ವಾನ್ ಸಿನಿಮಾ ನೋಡಿ, ಕೊಂಡಾಡಿದ್ದಾರೆ...ಅದ್ದೂರಿ ಮೇಕಿಂಗ್, ಚಿತ್ರದಲ್ಲಿರುವ ಮೆಸೇಜ್, ನಿರ್ದೇಶಕ ಕೃಷ್ಣ ನಿರ್ದೇಶನ ಹಾಗು ಕಿಚ್ಚ ಸುದೀಪ್ ಈ ಪಾತ್ರಕ್ಕಾಗಿ ಡೇಡಿಕೆಷನ್ ಗೆ ಶಿವರಾಜ್ ಕುಮಾರ್ ಫಿದಾ ಆಗಿದ್ದಾರೆ..ಕ್ಲೈಮಾಕ್ಸ್ ಸನ್ನಿವೇಶ, ಎಮೋಷನ್ ಸೀನ್ ಗಳು ಬಹಳ ಚೆನ್ನಾಗಿ ಮೂಡಿ ಬಂದಿದೆ.Body:.ಒಂದು ಪಾತ್ರಕ್ಕಾಗಿ ಇಂಟ್ರಸ್ಟ್ರಿಂಗ್ ತಗೊಂಡು ಮಾಡಿರೋ ಕ್ಯಾರೆಕ್ಟರ್ ಇಷ್ಟ ಆಗುತ್ತೆ ಅಂತಾ ಶಿವರಾಜ್ ಕುಮಾರ್ ಹೇಳಿದ್ರು..ನಿರ್ದೇಶಕ ಕೃಷ್ಟ, ಟಗರು ಸಿನಿಮಾ ನಿರ್ಮಾಪಕ ಕೆ ಪಿ ಶ್ರೀಕಾಂತ್ ಶಿವರಾಜ್ ಕುಮಾರ್ ಗೆ ಸಾಥ್ ನೀಡಿದ್ರು..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.