ಸ್ಯಾಂಡವುಡ್ನಲ್ಲಿ ಬಜಾರ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರೋ ಯುವ ನಟ ಧನ್ವೀರ್ ಹಾಗೂ ಕಿಸ್ ಸಿನಿಮಾ ಬ್ಯೂಟಿ ಶ್ರೀಲೀಲಾ ನಟನೆಯ ಬೈಟು ಲವ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದೆ. ಅಲೆಮಾರಿ, ಕಾಲೇಜ್ ಕುಮಾರ ಸಿನಿಮಾಗಳನ್ನು ನಿರ್ದೇಶಿಸಿರುವ ಹರಿ ಸಂತೋಷ್ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
ಚಿತ್ರ ಪೋಸ್ಟರ್, ಟೀಸರ್ ಹಾಗೂ ಹಾಡುಗಳ ಮೂಲಕವೇ ನಿರೀಕ್ಷೆ ಹುಟ್ಟಿಸಿದೆ. ನಟಿ ಶ್ರೀಲೀಲಾ ಮೊದಲ ಬಾರಿಗೆ ತಮ್ಮ ಸಿನಿಮಾಗೆ ಡಬ್ ಮಾಡಿದ್ದಾರೆ. ಡಬ್ಬಿಂಗ್ ಸಮಯದಲ್ಲಿ ಶ್ರೀಲೀಲಾ ಸಖತ್ ಎಂಜಾಯ್ ಮಾಡಿಕೊಂಡು ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.
![Actor Dhanveer](https://etvbharatimages.akamaized.net/etvbharat/prod-images/14395971_thumb.jpg)
ನಾನು ಇದೇ ಮೊದಲ ಬಾರಿಗೆ ಡಬ್ ಮಾಡಿದ್ದೇನೆ. ನಾನು ನಟಿಸಿದ ಸಿನಿಮಾಗಳಲ್ಲಿ ಬೇರೆಯವರ ಧ್ವನಿ ಇದ್ದರೆ ಅದು ಸೂಕ್ತ ಎನಿಸುವುದಿಲ್ಲ. ನಟನೆ ಮಾಡುವಾಗ ನಾನು ಎಲ್ಲಿ ಒತ್ತು ಕೊಟ್ಟಿರುತ್ತೇನೋ ಡಬ್ ಮಾಡಿದವರು ಅಲ್ಲಿ ಒತ್ತು ಕೊಟ್ಟಿರುವುದಿಲ್ಲ. ಹೀಗಾಗಿ, ಈ ಸಿನಿಮಾಗೆ ನಾನೇ ಧ್ವನಿ ನೀಡಿದ್ದೇನೆ. ನಮ್ಮ ಸಿನಿಮಾ ನೋಡಿ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.
![Srilaila](https://etvbharatimages.akamaized.net/etvbharat/prod-images/14395971_thumsb.jpg)
ಗಣೇಶ್ ಅಭಿನಯದ ಸಖತ್, ನಿಖಿಲ್ ಕುಮಾರ್‌ಸ್ವಾಮಿ ನಟನೆಯ ಯದುವೀರ ಸಿನಿಮಾಗಳನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಅಡಿ ನಿಶಾ ವೆಂಕಟ್ ಕೋಣಂಕಿ ಬೈಟು ಲವ್‌ಗೆ ನಿರ್ಮಾಣ ಮಾಡಿದ್ದಾರೆ. ಮಹೇನ್ ಸಿಂಹ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ಹಾಗೂ ಯೋಗಾನಂದ್ ಸಂಭಾಷಣೆ ಈ ಚಿತ್ರಕ್ಕಿದೆ.
ಫೆಬ್ರವರಿ 25ಕ್ಕೆ ಬೈಟು ಲವ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಪ್ರೇಮಿಗಳ ದಿನದ ಸಂಭ್ರಮಕ್ಕೆ ಸಿನಿ ಪ್ರೇಮಿಗಳ ನಿರೀಕ್ಷೆಯಂತೆ ಒಂದು ವಾರ ಮೊದಲೇ ಫೆ.18ಕ್ಕೆ ಚಿತ್ರ ರಿಲೀಸ್ ಆಗ್ತಿದೆ.