ಕನ್ನಡ ಚಿತ್ರರಂಗ ಕಂಡ ಅಜಾತಶತ್ರು ನಟ ಪುನೀತ್ ರಾಜ್ ಕುಮಾರ್ ನಮ್ಮನೆಲ್ಲ ಅಗಲಿ ಐದು ದಿನಗಳ ಕಳೆದಿವೆ. ಆದರೆ ಪುನೀತ್ ರಾಜ್ ಕುಮಾರ್ ಮಾಡಿರುವ ಸಮಾಜಮುಖಿ ಕೆಲಸಗಳು, ಅವ್ರ ಸರಳತೆ, ಅವ್ರ ಬಾಲ್ಯದ ನಟನೆ ಹಾಗು ಹೀರೋ ಆದ್ಮಲೇ ನಟಿಸಿದ ಸಿನಿಮಾಗಳು ಒಂದೊಂದು ಕಥೆಯನ್ನ ಹೇಳುತ್ತವೆ. ಈ ದೊಡ್ಮನೆ ರಾಜಕುಮಾರನ ಬಗ್ಗೆ ಭಾವ ಅಂದ್ರೆ, ತಾಯಿ ಪಾರ್ವತಮ್ಮ ರಾಜ್ ಕುಮಾರ್ ಸಹೋದರನಾಗಿರುವ ನಿರ್ಮಾಪಕ ಎಸ್.ಎ.ಗೋವಿಂದರಾಜು, ಅಪ್ಪು ಬಗ್ಗೆ ಕೆಲವೊಂದು ಅಚ್ಚರಿ ವಿಷ್ಯಗಳನ್ನ ಹಂಚಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ್ ರಾಜು: ಡಾ.ರಾಜ್ ಕುಮಾರ್ ಹಾಗು ಪಾರ್ವತಮ್ಮ ರಾಜ್ ಕುಮಾರ್ ಮನೆಯಲ್ಲಿ ಎಲ್ಲಾ ಜವಾಬ್ದಾರಿಗಳನ್ನ ನಿಭಾಯಿಸುತ್ತಿದ್ದವರು. ಪಾರ್ವತಮ್ಮನವರ ತಮ್ಮನಾಗಿರುವ ಗೋವಿಂದ ರಾಜ್, ಪುನೀತ್ ರಾಜ್ ಕುಮಾರ್ ಚಿಕ್ಕವಯಸ್ಸಿನಿಂದಲೇ ಎಷ್ಟು ಅದ್ಭುತ ಪ್ರತಿಭೆ ಅನ್ನೋದನ್ನ ಹೇಳಿದ್ದಾರೆ. ಗೋವಿಂದರಾಜ್ ಅವ್ರಿಗೆ ಪುನೀತ್ ಅವ್ರನ್ನ ಕಳೆದುಕೊಂಡಿದ್ದಿವಿ ಅನ್ನೋದನ್ನ ನಂಬೋದಕ್ಕೆ ಆಗ್ತಾ ಇಲ್ವಂತೆ.
ಯಾಕಂದ್ರೆ ನಾನು ಪುನೀತ್ ನ್ನ ಚಿಕ್ಕ ವಯಸ್ಸಿನಲ್ಲೇ ಎತ್ತಿ ಆಡಿಸಿದ್ದೇನೆ. ಹೀಗೆ ಇರಬೇಕಾದ್ರೆ ನಾನು ಪುನೀತ್ ನಮ್ಮಿಂದ ದೂರ ಆಗಿದ್ದಾನೆ ಅಂತಾ ನನ್ನ ಮನಸ್ಸು ಒಪ್ಪುತ್ತಿಲ್ಲ. ಅಪ್ಪು ಬಾಲ್ಯದಲ್ಲೇ ಯಾರು ಊಹಿಸಲಾಗದ ಪ್ರತಿಭೆ. ಅದಕ್ಕೆ ಸಾಕ್ಷಿ ಅಪ್ಪು ಚಿಕ್ಕ ವಯಸ್ಸಿನಲ್ಲೇ ನಟಿಸಿರುವ ಬೆಟ್ಟದ ಹೂವು, ಯಾರಿವನು, ಎರಡು ನಕ್ಷತ್ರ, ಭಾಗ್ಯವಂತ, ಭಕ್ತ ಪ್ರಹ್ಲಾದ ಸಿನಿಮಾಗಳೇ ಸಾಕ್ಷಿ ಅಂತಾರೆ.
ಅಪ್ಪು ಆ ಕಾಲದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅಂದ್ರೆ , ಪುನೀತ್ ಎಷ್ಟು ಟ್ಯಾಲೆಂಟ್ ಇತ್ತು ಅನ್ನೋದನ್ನ ಅರ್ಥ ಮಾಡಿಕೊಳ್ಳಿ. ಜೊತೆಗೆ ಆ ಕಾಲದಲ್ಲೇ ಜನರ ಮನಸ್ಸುನ್ನ ಕದ್ದಿದ್ದ ಪುನೀತ್. ಅಷ್ಟೇ ಅಲ್ಲಾ ನಮ್ಮ ಕುಟುಂಬದ ಪವರ್ನ್ನ ನಾವು ಕಳೆದುಕೊಂಡಿದ್ವಿ ಅಂತಾ ಭಾವುಕರಾದರು.
ಮತ್ತೊಂದು ವಿಚಾರ ಅಂದ್ರೆ ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲೇ ನಟಿಸಿದ್ದ ಭಾಗ್ಯವಂತ ಹಾಗು ಭಕ್ತ ಪ್ರಹ್ಲಾದ ಸಿನಿಮಾವನ್ನ ಎಸ್, ಎ ಗೋವಿಂದ ರಾಜ್ ನಿರ್ಮಾಣ ಮಾಡಿದ್ದಾರೆ. ಇನ್ನು ಭಕ್ತ ಪ್ರಹ್ಲಾದ ಸಿನಿಮಾದಲ್ಲಿ, ಆ ಚಿಕ್ಕವಯಸ್ಸಿನಲ್ಲಿ ಎಷ್ಟು ಚೆನ್ನಾಗಿ ಹಾಡುಗಳನ್ನ ಹೇಳಿದ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಇನ್ನು ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಎಂಟನೇ ವಯಸ್ಸಿಗೆ ಹಾವುಗಳನ್ನ ಹಾರದ ರೀತಿಯಲ್ಲಿ ಕೊರಳಿಗೆ ಹಾಕಿಕೊಳ್ಳುವ ಸನ್ನಿವೇಶವಿತ್ತು. ಆ ವೇಳೆ ಭಯ ಪಡದೆ ಹಾವನ್ನ ಕೊರಳಿಗೆ ಹಾಕಿಕೊಂಡ ಕ್ಷಣವಂತು ಇವತ್ತಿಗೂ ಮರೆಯೋದಿಕ್ಕೆ ಆಗೋಲ್ಲ ಅಂದರು.
ಇನ್ನು ಪುನೀತ್ ರಾಜ್ ಕುಮಾರ್ ನಮ್ಮ ಆಸ್ತಿ ಅಲ್ಲಾ ಕರ್ನಾಟಕದ ಆಸ್ತಿ ಅನ್ನೋದಿಕ್ಕೆ ಅಪ್ಪು ನಿಧನ ಆದಾಗ ಕಂಠೀರವ ಸ್ಟೇಡಿಯಂಗೆ ಹರಿದು ಬಂದ ಜನಸಾಗರ ನೋಡಿದ್ರೆ ಗೊತ್ತಾಗುತ್ತೆ. ಇನ್ನು ಎರಡು ದಿನ ಅಪ್ಪು ಪಾರ್ಥಿವ ಶರೀರವನ್ನ ಇಟ್ಟಿದ್ದರು, ಜನ ಬರ್ತಾ ಇದ್ದರು ಎಂದರು.
ಇನ್ನು ಡಾ ರಾಜ್ ಕುಮಾರ್ ಅಪ್ಪುವಿನಲ್ಲಿರುವ ಕಲೆಯನ್ನು ನೋಡಿ, ಇವನುದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ ಅಂತಾ ಭವಿಷ್ಯ ನುಡಿದಿದ್ರಂತೆ. ಆ ಮಾತನ್ನ ಅಪ್ಪು ನಿಜ ಮಾಡಿದರು ಅಂತಾ ಎಸ್,ಎ ಗೋವಿಂದರಾಜ್ ಎಮೋಷನ್ ಆದರು.