ETV Bharat / sitara

ಬಾಲಿವುಡ್​​ನಲ್ಲಿ ಕೊರೊನಾ ಸ್ಫೋಟ.. ಅರ್ಜುನ್​ ಕಪೂರ್​, ರಿಯಾ, ಅನ್ಶುಲಾಗೆ ಸೋಂಕು

Arjun Kapoor test positive for Covid: ಬಾಲಿವುಡ್​ ಮಂದಿಗೆ ಕೊರೊನಾ ಬಿಟ್ಟು ಬಿಡದಂತೆ ಕಾಡುತ್ತಿದ್ದು, ಇದೀಗ ನಟ ಅರ್ಜುನ್​ ಕಪೂರ್​ಗೆ ಎರಡನೇ ಸಲ ಮಹಾಮಾರಿ ಕೋವಿಡ್​ ಸೋಂಕು ಕಾಣಿಸಿಕೊಂಡಿದೆ.

Arjun Kapoor test positive for Covid
Arjun Kapoor test positive for Covid
author img

By

Published : Dec 29, 2021, 2:53 PM IST

ಮುಂಬೈ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಆರ್ಭಟ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಇದೀಗ ಬಾಲಿವುಡ್​ ಮಂದಿಗೆ ಬಿಟ್ಟು ಬಿಡುದಂತೆ ಕಾಡಲು ಶುರುಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ಕರೀನಾ ಕಪೂರ್​ ಸೋಂಕಿಗೊಳಗಾಗಿದ್ದರು. ಇದರ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ಅರ್ಜುನ್​ ಕಪೂರ್​​ಗೂ ಸೋಂಕು ದೃಢಗೊಂಡಿದೆ.

ಕ್ರಿಸ್​ಮಸ್​ ಸಂಭ್ರಮದಲ್ಲಿ ಬಾಲಿವುಡ್​ನ ಅನೇಕರು ಕೊರೊನಾ ಮಾರ್ಗಸೂಚಿ ಗಾಳಿಗೆ ತೋರಿರುವ ಪರಿಣಾಮ ಇದೀಗ ಸೋಂಕಿಗೊಳಗಾಗುತ್ತಿದ್ದು, ಅರ್ಜುನ್​ ಕಪೂರ್​, ರಿಯಾ ಕಪೂರ್​, ಕರಣ್​ ಬೊಲಾನಿ, ಅನ್ಶುಲಾಗೆ ಸೋಂಕು ದೃಢಗೊಂಡಿದೆ. ಇವರೆಲ್ಲರೂ ಮುನ್ನೆಚ್ಚರಿಕೆಯಾಗಿ ಈಗಾಗಲೇ ಕ್ವಾರಂಟೈನ್​ಗೊಳಗಾಗಿದ್ದಾಗಿ ತಿಳಿದು ಬಂದಿದೆ.

ಇದನ್ನೂ ಓದಿರಿ: ಹಳೇ ದ್ವೇಷಕ್ಕೆ ಸಹೋದರನ ಕೊಂದ ವ್ಯಕ್ತಿ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇದಕ್ಕೆ ಸಂಬಂಧಿಸಿದಂತೆ ಅರ್ಜುನ್​ ಕಪೂರ್​ ಮಾಹಿತಿ ಕೂಡ ಹಂಚಿಕೊಂಡಿದ್ದು, ತಮ್ಮ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್​ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಅರ್ಜುನ್ ಮತ್ತು ಅನ್ಶುಲಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅರ್ಜುನ್ ಗೆಳತಿ ಮಲೈಕಾ ಅರೋರಾ ಕೂಡ ಮತ್ತೆ ಕೊರೊನಾ ಪರೀಕ್ಷೆಗೊಳಗಾಗಿರುವುದಾಗಿ ತಿಳಿದು ಬಂದಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಅರ್ಜುನ್ ಕಪೂರ್​ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೊಮ್ಮೆ ಸೋಂಕು ತಗುಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.