ETV Bharat / sitara

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಿಂಬ.. ಆ 90 ನಿಮಿಷಗಳು.. - India book of records

ಇತ್ತೀಚಿಗಷ್ಟೆ 66ನೇ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡ ಚಿತ್ರರಂಗದ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಬಿಂಬ.. ಆ 90 ನಿಮೀಷ ಚಿತ್ರ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಿಂಬ
author img

By

Published : Sep 1, 2019, 10:01 PM IST

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮಕ ಚಿತ್ರಗಳು ಮೂಡಿ ಬರುತ್ತಿದ್ದು ಸಾಕಷ್ಟು ಜನಮನ್ನಣೆ ಪಡೆದುಕೊಳ್ಳುತ್ತಿವೆ. ಹಿರಿಯ ನಿರ್ದೇಶಕ ಜಿ. ಮೂರ್ತಿ ಹಾಗೂ ಹಿರಿಯ ನಟ ಶ್ರೀನಿವಾಸ್ ಪ್ರಭು ಕಾಂಬಿನೇಷನ್​ನಲ್ಲಿ ಬಂದ ಸಂಸ ಅವರ ಜೀವನ ಆಧಾರಿತ ಚಿತ್ರ ಬಿಂಬ.. ಆ 90 ನಿಮಿಷಗಳು ಚಿತ್ರಕ್ಕೆ ಈ ಹಿಂದೆ ಯೂನಿವರ್ಸಲ್ ರೆಕಾರ್ಡ್ ಫಾರ್ಮ್ ಸಿಕ್ಕಿತ್ತು.

ಸದ್ಯ ಚಿತ್ರ ತಂಡಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಬಂದಿದೆ. ನಗರದ ರೇಣುಕಾಂಬ ಸ್ಟುಡಿಯೋದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರ ತಂಡಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬಿಂಬ

ಏಕ ಪಾತ್ರಧಾರಿಯ ಒಂದೇ ಶಾಟ್‌ನಲ್ಲಿ ಚಿತ್ರೀಕರಿಸಿರುವ ಪ್ರಪ್ರಥಮ ಚಿತ್ರ ಎಂಬ ವಿಶಿಷ್ಟ ದಾಖಲೆಗೆ ಪಾತ್ರವಾಗಿದೆ. ಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕರಾದ ಪಿ ಕೆ ಹೆಚ್ ದಾಸ್ ಕ್ಯಾಮೆರಾ ವರ್ಕ್ ಇದೆ. ಸುಮಾರು ಎರಡು ಗಂಟೆಗಳ ಕಾಲ ಹೆಗಲ ಮೇಲೆ ಕ್ಯಾಮೆರಾ ಇಟ್ಟುಕೊಂಡು ಇಡೀ ಚಿತ್ರವನ್ನು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷ. ಹಿರಿಯ ನಟ ಶ್ರೀನಿವಾಸ್ ಬಾಬು ಸುಮಾರು ಇಪ್ಪತ್ತು ಪುಟಗಳ ಡೈಲಾಗನ್ನು ರೀಟೆಕ್ ಇಲ್ಲದೆ ಕ್ಯಾಮೆರಾ ಮುಂದೆ ಹೇಳುತ್ತಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಸಂಗೀತ ನೀಡಿದ್ದಾರೆ.

Intro:ಇತ್ತೀಚಿಗಷ್ಟೆ 66ನೇ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿದ್ದು ಕನ್ನಡ ಚಿತ್ರರಂಗದ ಎರಡು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಇದೆ ಸಂಭ್ರಮದಲ್ಲಿದ್ದ ಕನ್ನಡ ಚಿತ್ರರಂಗಕ್ಕೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಎಸ್ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿದ್ದು ಹಿರಿಯ ನಿರ್ದೇಶಕ ಜಿ ಮೂರ್ತಿ ಹಾಗೂ ಹಿರಿಯ ನಟ ಶ್ರೀನಿವಾಸ್ ಪ್ರಭು ಕಾಂಬಿನೇಷನ್ ನಲ್ಲಿ ನಾಟಕಕಾರ ಸಂಸ ಅವರ ಜೀವನ ಆಧಾರಿತ ಚಿತ್ರ ಬಿಂಬ .ಆ 90 ನಿಮಿಷಗಳು ಎಂಬ ಸಿನಿಮಾ ಮಾಡಿದ್ದು ಈ ಚಿತ್ರದಲ್ಲಿ ಸಿನಿಮಾ ಪೂರ್ತಿ ಒಬ್ಬನೇ ನಟ ನಿಂದು ಒಂದೇ ಸ್ಥಳ ಹಾಗೂ ಒಂದೇ ಶಾಪ್ ನಲ್ಲಿ ಇಡೀ ಚಿತ್ರವನ್ನು ಚಿತ್ರಿಕರಣವಾಗಿದೆ. ಇನ್ನು ಈ ಚಿತ್ರಕ್ಕೆ ಈ ಹಿಂದೆ ಯೂನಿವರ್ಸಲ್ ರೆಕಾರ್ಡ್ ಫಾರ್ಮ್ ಒದಗಿಬಂದಿತ್ತು.

Body:ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಒದಗಿಬಂದಿದೆ. ಏಕ ಪಾತ್ರಧಾರಿಯ ಒಂದೇ ಶಾಟ್ ನಲ್ಲಿ ಚಿತ್ರೀಕರಿಸುವ ಪ್ರಪ್ರಥಮ ಚಿತ್ರ ಎಂಬ ವಿಶಿಷ್ಟ ದಾಖಲೆ ದಾಖಲಾಗಿದ್ದು, ಇದೊಂದು ವೈವಿಧ್ಯಮಯ ಸಿನಿಮಾ ಎಂದು ಪ್ರಶಸ್ತಿಯನ್ನು ಪುರಸ್ಕರಿಸಲಾಗಿದೆ. ಅಲ್ಲದೆ ಇಂದು ನಗರದ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಂಬ .. ಆ 90 ನಿಮಿಷಗಳು ಚಿತ್ರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

Conclusion:ಇಲ್ಲೂ ಈ ಚಿತ್ರಕ್ಕೆ ಹೆಸರಾಂತ ಛಾಯಾಗ್ರಾಹಕರಾದ ಪಿಕೆಎಚ್ ದಾಸ್ ಕ್ಯಾಮೆರಾ ವರ್ಕ್ ಮಾಡಿದ್ದು ಸುಮಾರು ಎರಡು ಗಂಟೆಗಳ ಕಾಲ ಅವರ ಹೆಗಲ ಮೇಲೆ ಕ್ಯಾಮೆರಾ ಇಟ್ಟುಕೊಂಡು ಇಡೀ ಚಿತ್ರವನ್ನು ಚಿತ್ರೀಕರಿಸಿರುವುದು ಮತ್ತೊಂದು ವಿಶೇಷವಾಗಿದೆ. ಅಲ್ಲದೇ ಹಿರಿಯ ನಟ ಶ್ರೀನಿವಾಸ್ ಬಾಬು ಸುಮಾರು ಇಪ್ಪತ್ತು ಪುಟಗಳ ಸಂಭಾಷಣೆಯನ್ನು ದೇಶದಲ್ಲಿ ಕ್ಯಾಮೆರಾ ಮುಂದೆ ಹೇಳುತ್ತಾ ಅಭಿನಯಿಸಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಪ್ರವೀಣ್ ಗೋಡ್ಕಿಂಡಿ ಸಂಗೀತ ನೀಡಿದ್ದಾರೆ.

ಸತೀಶ ಎಂ ಬಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.