ಬಿಗ್ ಬಾಸ್ ಮುಂದೆ ಬೇಡಿಕೆ ಇಟ್ಟಿದ್ದ ಶಮಂತ್ ಆಸೆ ಈಡೇರಿದ್ದು, ನಿಧಿ ಸುಬ್ಬಯ್ಯ ಮತ್ತು ಶುಭಾ ಪೂಂಜಾ ಸೇರಿದಂತೆ ಮಹಿಳಾ ಮಣಿಗಳ ಆಸೆ ಈಡೇರಲಿಲ್ಲ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8 ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿದೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಶಮಂತ್ ತಾವೇ ಕಂಪೋಸ್ ಮಾಡಿರುವ 'ಬಾ ಗುರು' ಹಾಡನ್ನು ಬೆಳಗ್ಗೆ ಹಾಕುವಂತೆ ಹಲವು ಬಾರಿ ಮನವಿ ಮಾಡುತ್ತಿದ್ದರು.
ಇದಕ್ಕಾಗಿ ಬಿಗ್ ಬಾಸ್ ಕಣ್ಮಣಿ ಷರತ್ತು ಕೂಡ ಹಾಕಿದ್ದರು. ಅದರಂತೆ ಶಮಂತ್ ಶ್ರದ್ಧೆಯಿಂದ ಐದು ಹಾಡುಗಳನ್ನು ಕಂಪೋಸ್ ಮಾಡಿ, ಬಿಗ್ ಬಾಸ್ಗೆ ಒಪ್ಪಿಸಿದ್ದರು. ಹೀಗಾಗಿ, ಬಿಗ್ ಬಾಸ್ ಬಾ ಗುರು ಹಾಡನ್ನು ಹಾಕಿದರು.
ಶಮಂತ್ಗೆ ನಂಬಲಸಾಧ್ಯವಾಗಿದ್ದು, ನಂತರ ಎದ್ದು ಸ್ಟೆಪ್ ಹಾಕಿದರು. ಈ ಹಾಡು ಕೇಳಿದಾಗ ಮನೆಯ ಸದಸ್ಯರಿಗೆ ತಾವು ಹೊರ ಹೋಗುತ್ತಿರುವುದಾಗಿ ತಿಳಿದಿರಲಿಲ್ಲ.
ಮಹಿಳಾ ಸದಸ್ಯರ ಆಸೆ ಈಡೇರಲಿಲ್ಲ : ಬಿಗ್‌ಬಾಸ್ ಮನೆ ಒಳಗೆ ಬಂದಾಗಿನಿಂದಲೂ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್ ಹಾಗೂ ವೈಷ್ಣವಿ ಗೌಡಗೆ ತಾವು ಮನೆಯ ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಇತ್ತು. ಸೀಸನ್ 8 ಆರಂಭವಾದಾಗಿನಿಂದಲೂ ಟಾಸ್ಕ್ ಗೆದ್ದು, ಪುರುಷರೇ ಮನೆಯ ಕ್ಯಾಪ್ಪನ್ ಆಗಿದ್ದಾರೆ.
ಹೀಗಾಗಿ, ಒಮ್ಮೆಯಾದರೂ ಮಹಿಳೆಯರು ಕ್ಯಾಪ್ಟನ್ ಆಗಬೇಕು ಎನ್ನುವ ಆಸೆ ಅವರದ್ದಾಗಿತ್ತು. ಹಲವು ಟಾಸ್ಕ್ಗಳಲ್ಲಿ ದಿವ್ಯಾ ಸುರೇಶ್ ದಿವ್ಯ ಉರುಡುಗ ಹಾಗು ವೈಷ್ಣವಿ ಉತ್ತಮ ಆಟ ಆಡಿದ್ದರು.
ಆದರೂ ಕ್ಯಾಪ್ಟನ್ ಟಾಸ್ಕ್ನಲ್ಲಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಶೋ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕೊನೆಗೂ ಮಹಿಳಾ ಮಣಿಗಳ ಆಸೆ ಈಡೇರಲಿಲ್ಲ.
ಓದಿ: ಉಮಾಶ್ರೀಗೆ 64ನೇ ಹುಟ್ಟುಹಬ್ಬದ ಸಂಭ್ರಮ.. ಜನಮೆಚ್ಚಿದ ನಾಯಕಿಗೆ ಶುಭಾಶಯ