'ಭಜರಂಗಿ 2' ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಭಜರಂಗಿ 2 ಬಿಡುಗಡೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಚಿತ್ರದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಅಭಿನಯಿಸಿದ್ದು, ಒಂದೊಂದು ಕ್ಯಾರೆಕ್ಟರ್ ವಿಭಿನ್ನವಾಗಿವೆ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಸಿನಿಮಾದಲ್ಲಿ ಆಕ್ಟ್ ಮಾಡಿರುವ ಯುವ ಖಳ ನಟ ವಜ್ರಗಿರಿ ಈಟಿವಿ ಭಾರತ ಜೊತೆ ಮಾತನಾಡಿ ಪಾತ್ರದ ವಿಶೇಷತೆ ಹಾಗೂ ಶಿವಣ್ಣ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಭಜರಂಗಿ 2 ಸಿನಿಮಾದಲ್ಲಿ 110 ವರ್ಷದ ಗುರುಗಳ ಪಾತ್ರ ಮಾಡಿರೋ ಈ ಆರಡಿ ಹುಡುಗ ವಜ್ರಗಿರಿ ಮೊದಲು ಸೀರಿಯಲ್ಗಳಲ್ಲಿ ನಟಿಸುತ್ತಿದ್ದರು. ಮೊದಲ ಬಾರಿಗೆ ಭಜರಂಗಿ 2 ಸಿನಿಮಾದಲ್ಲಿ ಮುಖ್ಯ ಪಾತ್ರವೊಂದನ್ನ ನಿರ್ವಹಿಸಿದ್ದಾರೆ.
ಭಜರಂಗಿ 2 ಒಂದು ಫ್ಯಾಂಟಸಿ ಮೂವಿ. ಜೊತೆಗೆ ಶಿವಣ್ಣನ ಜೊತೆ ಅಭಿನಯಿಸೋದು ನನ್ನ ಅದೃಷ್ಟ. ನಿರ್ದೇಶಕ ಎ. ಹರ್ಷ ಅವರು, ಬಹಳ ಚೆನ್ನಾಗಿ ನಮ್ಮ ಹತ್ತಿರ, ಕೆಲಸ ಮಾಡಿಸಿದ್ದಾರೆ. ನನ್ನ ವಯಸ್ಸು 26 ವರ್ಷ ಆದರೆ, ನಾನು ಸಿನಿಮಾದಲ್ಲಿ 110 ವರ್ಷದ ವ್ಯಕ್ತಿಯ ಪಾತ್ರ ಮಾಡಿದ್ದೇನೆ.
ಸಿನಿಮಾದಲ್ಲಿ ನಾನು ಅಷ್ಟು ನೈಜವಾಗಿ ಕಾಣುತ್ತಿರುವ ಕಾರಣ ಅಂದ್ರೆ ನನ್ನ ಪಾತ್ರಕ್ಕೆ ಮೇಕಪ್ ಮಾಡುತ್ತಿದ್ದ ಮೇಕಪ್ ಆರ್ಟಿಸ್ಟ್ ಪ್ರಕಾಶ್ ಸಾರ್. ಅವರಿಗೆ ನಾನು ಕೃತಜ್ಞತೆ ಹೇಳಬೇಕು. ಏಕೆಂದರೆ, ನಾನು ಭಜರಂಗಿ 2 ದಲ್ಲಿ ಅಭಿನಯಿಸಿದ 21 ದಿನಗಳೂ ಕೂಡ ಮೇಕಪ್ ಮಾಡೋದಕ್ಕೆ ನಾಲ್ಕು ಗಂಟೆಗಳು ಬೇಕಾಗುತ್ತಿತ್ತು. ಅದಕ್ಕೆ ತಾಳ್ಮೆ ಅನ್ನೋದು ತುಂಬಾ ಮುಖ್ಯ.
ಶಿವಣ್ಣನ ಬಗ್ಗೆ ಮಾತನಾಡೋದಿಕ್ಕೆ ಆಗೋಲ್ಲ. ಎಲ್ಲರಿಗೂ ಅವರ ಜೊತೆ ನಟಿಸಬೇಕು ಅಂತಾ ಕನಸು ಇರುತ್ತೆ, ನನಗೆ 10 ವರ್ಷ ಆದ್ಮಲೇ ಆ ಅದೃಷ್ಟ ಕೂಡಿ ಬಂತು. 10 ವರ್ಷದ ಹಿಂದೆ ಶಿವಣ್ಣನ ಜೊತೆ ಸೈಡ್ ಆಕ್ಟಿಂಗ್ ಮಾಡಿದ್ದೇ. ಭಜರಂಗಿ 2 ಸಿನಿಮಾದಲ್ಲಿ ನಾನು ಏನೇ ಆಕ್ಟಿಂಗ್ ಮಾಡಿದ್ದೀನಿ ಅಂದ್ರೆ, ಅದಕ್ಕೆ ಕಾರಣ ಹರ್ಷ ಮಾಸ್ಟರ್ ಈ ಪಾತ್ರ ಕೊಟ್ಟಿರೋದು ನನ್ನ ಅದೃಷ್ಟ, ಯಾಕಂದ್ರೆ, ನಾನು ಟಿವಿಯಲ್ಲಿ ಭಜರಂಗಿ ಸಿನಿಮಾ ನೋಡಿ ನಾವು ಈ ರೀತಿ ಪಾತ್ರ ಮಾಡಬೇಕು ಅಂದುಕೊಂಡಂತೆ. ಈಗ ಭಜರಂಗಿ 2 ಸಿನಿಮಾದಲ್ಲಿ ಆಕ್ಟ್ ಮಾಡಿದ್ದೀನಿ ನನ್ನ ಅದೃಷ್ಟ ಅಂತಾರೆ ವಜ್ರಗಿರಿ.
ಇನ್ನು ಶಿವಣ್ಣನ ಜೊತೆ ಫೈಟ್ ಇರೋಲ್ಲ, ಬರೀ ಕಣ್ಣಿನಲ್ಲಿ ಮಾತನಾಡುವ ಎಕ್ಸ್‌ಪ್ರೆಷನ್ ಇರುತ್ತೆ. ಶಿವಣ್ಣನ ಜೊತೆ ಕೆಲಸ ಮಾಡೋದು, ಯಾವುದೋ ಜನ್ಮದ ಅದೃಷ್ಟ. ಶಿವಣ್ಣ ನಾನು ಹೊಸಬ ಅನ್ನದೇ, ಶೂಟಿಂಗ್ ಸ್ಪಾಟ್ ನಲ್ಲಿ ಸಾಕಷ್ಟು ಹೇಳಿ ಕೊಟ್ಟು ನಮ್ಮ ಜೊತೆ ಅಭಿನಯಿಸುತ್ತಿದ್ದರು. ಒಬ್ಬ ಸ್ಟಾರ್ ನಟ ನಮ್ಮ ಜೊತೆ ಹೀಗೆ ಇರ್ತಾರೆ ಅಂದ್ರೆ ನಂಬೋದಿಕ್ಕೆ ಆಗಲಿಲ್ಲ. ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಿದ್ದೀನಿ. ಅದನ್ನ ಜನರು ಕೇಳಿ ಮೆಚ್ಚಿಕೊಳ್ಳಬೇಕು ಎಂದು ಯುವ ನಟ ವಜ್ರಗಿರಿ ತಮ್ಮ ಸಿನಿ ಅನುಭವಗಳನ್ನು ಹಂಚಿಕೊಂಡರು.