ಒಬ್ಬರು ನಾದಬ್ರಹ್ಮ, ಇನ್ನೊಬ್ಬರು ನಾಡೋಜ ಪ್ರಶಸ್ತಿ ವಿಜೇತ. ನಾದಬ್ರಹ್ಮ ಹಂಸಲೇಖ ಅವರದ್ದು ಕಳೆದ 40 ವರ್ಷಗಳಿಂದ ಸಂಗೀತ ಪಯಣವಾದರೆ, ನಾಡೋಜ ಪ್ರಶಸ್ತಿ ವಿಜೇತ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಕನ್ನಡ ಸಿನಿಮಾ ನಿರ್ದೇಶಕ ಕೂಡಾ. ಇವರಿಬ್ಬರೂ ಜೊತೆ ಸೇರಿ ಕೊರೊನಾ ವೈರಸ್ ಬಗ್ಗೆ ವಿಡಿಯೋ ಆಲ್ಬಮ್ ಒಂದನ್ನು ಸಿದ್ಧ ಮಾಡಿದ್ದಾರೆ. ಈ ವಿಡಿಯೋ ಈಗ ಯೂಟ್ಯೂಬ್ನಲ್ಲಿ ಅಪ್ಲೋಡ್ ಲಭ್ಯವಿದೆ.
- " class="align-text-top noRightClick twitterSection" data="">
ಹಂಸ-ಬರಗೂರು ಜೋಡಿಯ ಈ ಹಾಡಿಗೆ 'ಹೊಸ ಅಧ್ಯಾಯ' ಎಂದು ನಾಮಕರಣ ಮಾಡಲಾಗಿದೆ. 'ದೇಶ ವಿದೇಶದ ಸಂಚಾರಿ...ಕಣ್ಣಿಗೆ ಕಾಣದ ಸಂಹಾರಿ' ಎಂಬ ಸಾಲುಗಳಿಂದ ಆರಂಭವಾಗುವ ಈ ಗೀತೆಯ ಸಾಹಿತ್ಯವನ್ನು ಪ್ರೊ. ಬರಗೂರು ರಾಮಚಂದ್ರಪ್ಪ ಬರೆದಿದ್ದಾರೆ. ಇದಕ್ಕೆ ರಾಗ ಸಂಯೋಜನೆ ಮಾಡಿ ಹಾಡಿರುವವರು ಹಂಸಲೇಖ. ಈ 'ಹೊಸ ಅಧ್ಯಾಯ' ಹಾಡಿಗೆ ಬೇಕಾದ ವಿಡಿಯೋ ತುಣುಕುಗಳನ್ನು ವಿಶ್ವಾಸ್ ಮಾದಿಶೆಟ್ಟಿ ಹೊಂದಿಸಿ ಅವರೇ ಸಂಕಲನ ಕೂಡಾ ಮಾಡಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾಗ್ರಹಣ ಒದಗಿಸಿದ್ದಾರೆ.
ಇದಕ್ಕೂ ಮುನ್ನವೇ ನಾದಬ್ರಹ್ಮ ಹಂಸಲೇಖ ಅವರು ತಮ್ಮ ಮಡದಿ ಲತಾ ಹಂಸಲೇಖ ಹಾಗೂ ಪುತ್ರಿ ನಂದಿನಿ ಜೊತೆ ಸೇರಿ, ಕೊರೊನಾ ಬಗ್ಗೆ ಒಂದು ಹಾಡು ಹಾಡಿದ್ದರು. ಈ ಹಾಡಿಗೂ ಕೂಡಾ ಸಂಗೀತಪ್ರಿಯರಿಂದ ಒಳ್ಳೆ ಪ್ರತಿಕ್ರಿಯೆ ದೊರೆತಿತ್ತು.
![corona song](https://etvbharatimages.akamaized.net/etvbharat/prod-images/hamsalekha-smiling1591064303025-94_0206email_1591064314_678.jpg)