ಹಾಸ್ಯ ತಾರೆ ಬಂದ್ಲಾ ಗಣೇಶ್ ಈಗ ಸಂಭಾವನೆ ಸಲುವಾಗಿ ಸುದ್ದಿಯಲ್ಲಿದ್ದಾರೆ. ಒಂದು ದಿನಕ್ಕೆ ಇವರು ಪಡೆಯುತ್ತಿರುವ ಸಂಭಾವನೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ದಿನಕ್ಕೆ ₹5 ಲಕ್ಷ ಸಂಭಾವನೆ ಈ ಹಾಸ್ಯ ನಟನ ಮನೆಗೆ ಬಂದು ಬೀಳುತ್ತಿದೆಯಂತೆ. ತೆಲುಗು ಇಂಡಸ್ಟ್ರೀಯಲ್ಲಿ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಇದುವರೆಗೆ ಯಾವ ಕಾಮಿಡಿಯನ್ಗೂ ಕೊಟ್ಟಿಲ್ಲವಂತೆ.
ಕೆಲ ದಿನಗಳ ಹಿಂದೆ ಅಭಿಯನಕ್ಕೆ ಗುಡ್ ಬೈ ಹೇಳಿದ್ದ ಗಣೇಶ್, ಜ್ಯೂ. ಎನ್ಟಿಆರ್ ಹಾಕಿಕೊಂಡು 'ಟೆಂಪರ್' ಸಿನಿಮಾ ನಿರ್ಮಾಣ ಮಾಡಿದ್ದರು. ಇದೇ ಕೊನೆ ಮತ್ತೆ ಯಾವ ಚಿತ್ರದ ನಿರ್ಮಾಣಕ್ಕೂ ಅವರು ಮುಂದಾಗಲಿಲ್ಲ. ಈ ಗ್ಯಾಪ್ ನಡುವೆ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯಕ್ಕೂ ಕಾಲಿಟ್ಟರು. ಆದರೆ, ಅಲ್ಲಿ ಹೆಚ್ಚು ಕಾಲ ನೆಲೆ ನಿಲ್ಲದೆ, ಅತೀ ಕಡಿಮೆ ಅವಧಿಯಲ್ಲಿ ರಾಜಕೀಯದಿಂದ ವಿಮುಖಗೊಂಡರು.
ಮಹೇಶ ಬಾಬು ಅವರ 'ಸರಿಲೇರು ನೀಕೆವ್ವರು' ಚಿತ್ರದ ಮೂಲಕ ಅಭಿನಯಕ್ಕೆ ಕಮ್ಬ್ಯಾಕ್ ಮಾಡಿರುವ ಗಣೇಶ್, ಈ ಚಿತ್ರಕ್ಕೆ ಪರ್ಡೇ ₹5 ಲಕ್ಷ ಹಣ ಪಡೆಯುತ್ತಿದ್ದಾರೆ. ಈ ಚಿತ್ರದ ನಿರ್ಮಾಪಕರು ಸಹ ಈ ಪರಿ ಹಣ ನೀಡುತ್ತಿರುವುದು ಸಹಜವಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.