ಒಮ್ಮೆ ನೀವು ಡಬ್ಸ್ಮ್ಯಾಶ್ಗೆ ಹೋಗಿ ಪ್ರಶ್ವಿತ ಅಂತ ಸರ್ಚ್ ಮಾಡಿದ್ರೆ ಹತ್ತಾರು ವಿಡಿಯೋಗಳು ನಿಮ್ಮ ಕಣ್ಣಮುಂದೆ ಬರುತ್ತವೆ. ಈ ಚೂಟಿ ಹುಡುಗಿ ಕಳೆದ ಮೂರು ವರ್ಷಗಳಿಂದ ‘ಡಬ್ ಸ್ಮ್ಯಾಶ್’ ಕಲೆಯಲ್ಲಿ ಸುಮಾರು 15 ಲಕ್ಷ ನೋಡುಗರನ್ನು ಹೊಂದಿದ್ದಾಳೆ. ಇವಳ ಅಭಿನಯ ಕಂಡ ಮನೆ ಮಾರಾಟಕ್ಕಿದೆ ಸಿನಿಮಾ ತಂಡ ನಟಿಸಲು ಅವಕಾಶ ಕೊಟ್ಟಿದೆ.
ಬೇಬಿ ಪ್ರಶ್ವಿತ ಇನ್ನು ಮೂರನೇ ತರಗತಿ ಓದುತ್ತಿದ್ದು ಇದೀಗ ಎಸ್.ವಿ ಬಾಬು ಅವರ ‘ಮನೆ ಮಾರಾಟ್ಟಕ್ಕಿದೆ’ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಸಿನಿಮಾದಲ್ಲಿ ಈ ಬಾಲ ನಟಿಯ ಪಾತ್ರ ಎಲ್ಲರನ್ನು ನಕ್ಕು ನಲಿಸುವ ಪಾತ್ರವಂತೆ.
ಈ ಸಿನಿಮಾದಲ್ಲಿ ದೆವ್ವ ಹಾಗೂ ಕಾಮಿಡಿಯನ್ನು ಹೆಚ್ಚು ತೋರಿಸಿದ್ದಾರಂತೆ. ಅಲ್ಲದೆ ಅಭಿನಯ ಮಾಡಲು ನನಗೆ ನಿರ್ದೇಶಕ ಮಂಜು ಸ್ವರಾಜ್ ಸಹಾಯ ಮಾಡಿದರು ಎಂದು ಹೇಳಿಕೊಳ್ಳುವ ಪ್ರಶ್ವಿತ, ಇದೀಗ ಶಾಲೆಯಲ್ಲಿ ಫುಲ್ ಫೇಮಸ್ ಆಗಿದ್ದಾಳೆ.
![](https://etvbharatimages.akamaized.net/etvbharat/prod-images/5032420_thumb.jpg)
ಅಂತರ್ಜಾಲ ಮಾಧ್ಯಮದಲ್ಲಿ ಬೇಬಿ ಪ್ರಶ್ವಿತ ದೊಡ್ಡ ನಾಯಕ-ನಾಯಕಿಯರ ತುಣುಕುಗಳಿಗೆ ಡಬ್ ಸ್ಮ್ಯಾಶ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾಳೆ. ಇನ್ನೂ ಈ ಜನಪ್ರಿಯತೆ ಕಂಡ ನಿರ್ದೇಶಕ ಮಂಜು ಸ್ವರಾಜ್ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.