ಒಂದು ತಮಿಳು ಚಿತ್ರವನ್ನು ಒಪ್ಪಿಕೊಂಡಿದ್ದು ಬಿಟ್ಟರೆ, ಕೋವಿಡ್ 2ನೇ ಅಲೆಯ ಲಾಕ್ಡೌನ್ ಬಳಿಕ ಆಶಿಕಾ ರಂಗನಾಥ್ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಆಶಿಕಾ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗುವುದಕ್ಕಿವೆ. ಜೊತೆಗೆ ಒಂದೊಳ್ಳೆಯ ಚಿತ್ರಕ್ಕಾಗಿ ಕಾಯುತ್ತಿದ್ದ ಅವರು, ಇದೀಗ ಕೃಷ್ಣ ಅಭಿನಯದ ಹೊಸ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ.
ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಬಹಳ ಸ್ಟೈಲಿಶ್ ಆಗಿರಲಿದೆ. ಈ ಚಿತ್ರದಲ್ಲಿ ಆಶಿಕಾ ಪಾತ್ರ ಬಹಳ ಕ್ಲಾಸ್ ಆಗಿರುತ್ತದೆಯಂತೆ. ಅವರ ಹೇರ್ಸ್ಟೈಲ್, ಕಾಸ್ಟೂಮ್ ಎಲ್ಲವೂ ವಿಭಿನ್ನವಾಗಿರಲಿದೆ. ಕಾರ್ಪೋರೇಟ್ ವಲಯವನ್ನು ಪ್ರತಿನಿಧಿಸುವ ಕಥೆಯಾದ್ದರಿಂದ ಆಶಿಕಾ ಅವರನ್ನು ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆಯಂತೆ.
'ಕಡ್ಡಿಪುಡಿ' ಚಂದ್ರು ನಿರ್ಮಿಸುತ್ತಿರುವ ಈ ಚಿತ್ರದ ಮುಹೂರ್ತ ಅಕ್ಟೋಬರ್ 10ರಂದು ನಡೆಯಲಿದೆ. ಅಕ್ಟೋಬರ್ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಇದಲ್ಲದೇ, ಕಾಲಿವುಡ್ಗೂ ಎಂಟ್ರಿ ಕೊಟ್ಟಿರುವ ಆಶಿಕಾ, ಅಥರ್ವ ಅಭಿನಯದ ತಮಿಳು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಗ್ರಾಮೀಣ ಹಿನ್ನೆಲೆಯ ಕ್ರೀಡೆಯ ಕುರಿತಾದ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಆಶಿಕಾ ಕಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಕಾಲಿವುಡ್ನಲ್ಲಿ ಕಬಡ್ಡಿ ಅಖಾಡಕ್ಕಿಳಿದ ಆಶಿಕಾ ರಂಗನಾಥ್