ETV Bharat / entertainment

ಫ್ಯಾಂಟಮ್​ ನಂತರ ಕಿಚ್ಚ ಬಂಡಾರಿ ಕಾಂಬಿನೇಶನ್​ನಲ್ಲಿ ಮತ್ತೊಂದು ಸಿನಿಮಾ, ಅಶ್ವತ್ಥಾಮ ನ ಸ್ಪೆಷಾಲಿಟಿ ಏನು

author img

By

Published : Sep 7, 2020, 6:10 PM IST

Updated : Sep 27, 2022, 2:15 PM IST

ಕಿಚ್ಚ ಹಾಗೂ ಅನೂಪ್​ ತಂಡದಿಂದ ಹೊಸದೊಂದು ಸುದ್ದಿ ಹೊರಬಿದ್ದಿದ್ದು, ಫ್ಯಾಂಟಮ್​ ನಂತರ ಕಿಚ್ಚ ಸುದೀಪ್ ಬ್ಯಾನರ್​​​ನಲ್ಲಿ ಇನ್ನೊಂದು ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

Another project from Phantom Set named after Ashwatthama
ಫ್ಯಾಂಟಮ್​​​​ ಸೆಟ್​​​ನಿಂದ ‘ಅಶ್ವತ್ಥಾಮ’: ಕಿಚ್ಚನ ಜೊತೆ ಅನೂಪ್​​​ ಇನ್ನೊಂದು ಪ್ರಾಜೆಕ್ಟ್​​..!

ಬೆಂಗಳೂರು: ಕಿಚ್ಚ ಸುದೀಪ್​ ನಟನೆಯ ಅನೂಪ್ ಬಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಫ್ಯಾಂಟಮ್​​ ಚಿತ್ರ ಈಗಾಗಲೇ ಸದ್ದು ಮಾಡುತ್ತಿದೆ. ಚಿತ್ರದ ಪೋಸ್ಟರ್​ ಹಾಗೂ ಫಸ್ಟ್​ ಲುಕ್​​​ಗಳಿಂದಲೇ ಸಿನಿ ರಸಿಕರ ಮನಗೆದ್ದಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ.

ಈ ನಡುವೆ ಕಿಚ್ಚ ಹಾಗೂ ಅನೂಪ್​ ತಂಡದಿಂದ ಹೊಸದೊಂದು ಸುದ್ದಿ ಹೊರಬಿದ್ದಿದ್ದು, ಫ್ಯಾಂಟಮ್​ ನಂತರ ಕಿಚ್ಚ ಸುದೀಪ್ ಬ್ಯಾನರ್​​​ನಲ್ಲಿ ಇನ್ನೊಂದು ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಚಿತ್ರಕ್ಕೆ ‘ಅಶ್ವತ್ಥಾಮ’ ಎಂದು ಹೆಸರಿಡಲಾಗಿದ್ದು, ಫ್ಯಾಂಟಮ್​ ಬಳಿಕ ಸೆಟ್ಟೇರಲಿದೆ ಎನ್ನಲಾಗಿದೆ. ಚಿತ್ರವೂ ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದ ಮುಖ್ಯ ಪಾತ್ರಧಾರಿಗಳ ಕುರಿತಂತೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನು ಚಿತ್ರದ ಪೋಸ್ಟರ್​​​​ನಲ್ಲಿ ಮಹಾಭಾರತದ ಅಶ್ವತ್ಥಾಮನ ಜೊತೆ ಗನ್​ ಹಿಡಿದ ಖಡಕ್​​​ ಲುಕ್​ ಸಹ ಕಾಣಬಹುದಾಗಿದೆ.

ಇನ್ನು ಸಿನಿ ರಸಿಕರಲ್ಲಿ ಫ್ಯಾಂಟಮ್​​ ಕುರಿತಂತೆ ಮಾತು ಹೆಚ್ಚಾಗುತ್ತಿರುವ ವೇಳೆ ‘ಅಶ್ವತ್ಥಾಮ’ನ ಕುರಿತು ಇನ್ನಷ್ಟು ಕುತೂಹಲ ಮೂಡಿದೆ.

Last Updated : Sep 27, 2022, 2:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.