ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಟಿ.ಎಸ್.ನಾಗಭರಣ, ಅಲ್ಲಮ ಎಂಬ ಸಿನಿಮಾವೊಂದನ್ನು ನಿರ್ದೇಶನ ಮಾಡಿದ್ರು. 12ನೇ ಶತಮಾನದ ವಚನಕಾರ ಅಲ್ಲಮಪ್ರಭು ಕುರಿತು ಮತ್ತೊಂದು ಸಿನಿಮಾ ಬರ್ತಾ ಇದೆ.
2005ರಲ್ಲಿ ಎನ್ಕೌಟಂರ್ ದಯನಾಯಕ್ ಸಿನಿಮಾದಲ್ಲಿ ನಟಿಸಿದ್ದ ಸಚಿನ್ ಸುವರ್ಣ 15 ವರ್ಷಗಳ ಬಳಿಕ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಈ ಸಿನಿಮಾ ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಸೆಟ್ಟೇರಿತ್ತು. ಕಾರ್ಯಕ್ರಮಕ್ಕೆ ಓಲೇಮಠ, ಸಿದ್ದೇಶ್ವರ ಮಠ, ಮಹಾಂತೇಶ್ವರ ಮಠ, ಇಂಚಗೇರಿ ಮಠ ಹೀಗೆ ಉತ್ತರ ಕರ್ನಾಟಕದ ಭಾಗದಲ್ಲಿ ಬರುವ 20 ಮಠಗಳ ಸ್ವಾಮೀಜಿಗಳು ಬಂದು ಅಲ್ಲಮಪ್ರಭು ಸಿನಿಮಾಗೆ ಶುಭಾ ಹಾರೈಸಿದ್ರು.
ಇದನ್ನೂ ಓದಿ: ಮೂರು ಧಾರಾವಾಹಿಗಳ ಮಹಾಸಂಗಮದಲ್ಲಿ ಖ್ಯಾತ ಬಿಗ್ಬಾಸ್ ಸ್ಪರ್ಧಿ..!
ಅಲ್ಲಮಪ್ರಭು ಸಿನಿಮಾವನ್ನು ನಿರ್ದೇಶಕ ಡಿ.ಕೆ.ಶಿವರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಮಾಧವಾನಂದ ಈ ಚಿತ್ರದ ಕಥೆ ಬರೆದಿದ್ದು, ರಾಜ ರವಿಶಂಕರ್ ಸಿನಿಮಾಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಆರ್.ಮಂಜುನಾಥ್ ಕ್ಯಾಮರಾ ವರ್ಕ್ ಮಾಡುತ್ತಿದ್ದು, ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ.
ನಿರ್ದೇಶಕ ಡಿ.ಕೆ.ಶಿವರಾಜ್ ಹೇಳುವ ಹಾಗೆ ಸಿನಿಮಾದಲ್ಲಿ ಅಲ್ಲಮಪ್ರಭು ಸಮಾಜಕ್ಕೆ ಯಾವ ರೀತಿ ದಾರಿ ದೀಪ ಆದ್ರು ಅನ್ನೋದನ್ನು ತೋರಿಸಲಾಗುತ್ತದೆಯಂತೆ. ಇನ್ನು 15 ವರ್ಷಗಳ ಬಳಿಕ ಚಿತ್ರರಂಗದ ಕಡೆ ಮುಖ ಮಾಡಿರುವ ಸಚಿನ್ ಸುವರ್ಣ ಅಲ್ಲಮಪ್ರಭು ಪಾತ್ರ ಮಾಡ್ತಾ ಇದ್ದಾರೆ.
ಇದರ ಜೊತೆಗೆ ಹಿರಿಯ ನಟ ರಾಮಕೃಷ್ಣ, ವೈಜನಾಥ್ ಬಿರಾದಾರ್, ಮೂಗ್ ಸುರೇಶ್, ಗಣೇಶ್ ರಾವ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಹಾವೀರ ಪ್ರಭು ಮತ್ತು ಮಾಧವಾನಂದ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.