ಹೈದರಾಬಾದ್ : ಆರ್‌ಆರ್‌ಆರ್ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ಸದ್ಯ ಸೀರೆಯುಟ್ಟು ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಕ್ ಆಗಿದ್ದಾರೆ.
ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಇದರ ನಡುವೆ ಚಿತ್ರತಂಡ ಭರ್ಜರಿಯಾಗಿ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದೆ.
ಇನ್ನು ಪ್ಯಾನ್ ಇಂಡಿಯಾ ಸಿನಿಮಾ ಆರ್ಆರ್ಆರ್ದಲ್ಲಿ ಆಲಿಯಾ ಭಟ್ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮುದ್ದು ಹುಡುಗಿ ಆಲಿಯಾ ಚಿತ್ರದ ಪ್ರಚಾರ ಸಮಯದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪಡ್ಡೆ ಹೈಕ್ಲ್ ಹೃದಯ ಗೆದ್ದಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಸಿರು ಸೀರೆಯನ್ನು ಧರಿಸಿರುವ ಸುಂದರವಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಗಳನ್ನು 'ಆರ್‌ಆರ್‌ಆರ್' ಚಿತ್ರದ ಪ್ರಚಾರದ ಸಂದರ್ಭದಲ್ಲಿ ತೆಗೆಯಲಾಗಿದೆ.
ಆಲಿಯಾ ಭಟ್ ಹಸಿರು ಸೀರೆಯನ್ನುಟ್ಟು, ಎಥ್ನಿಕ್ ಲುಕ್‌ನಲ್ಲಿ ಸೌಂದರ್ಯದ ರಾಶಿಯಂತೆ ಕಂಗೊಳಿಸುತ್ತಿದ್ದಾರೆ.
ಹಸಿರು ಬಣ್ಣದ ಸೀರೆಗೆ ಸ್ಲೀವ್ ಕಟ್ ಬ್ಲೌಸ್ ಜೊತೆ ಸುಂದರ ಹೇರ್ ಸ್ಟೈಲ್ ನೋಡಿದ ಫ್ಯಾನ್ಸ್, ವ್ಹಾ..! ಅಂತಾ ಬಾಯ್ತೆರೆದು ನೋಡುತ್ತಿದ್ದಾರೆ.
ಈ ಹಿಂದೆ ಚಿತ್ರದ ಪ್ರಚಾರದ ವೇಳೆ ಆಲಿಯಾ ಭಟ್ ಕೆಂಪು ಬಣ್ಣದ ಸೀರೆಯನ್ನು ಉಟ್ಟುಕೊಂಡಿದ್ದರು. ಅಲ್ಲದೆ, ಸ್ಲೀವ್ ಕಟ್ ಬ್ಲೌಸ್ ಧರಿಸಿ ಓಪನ್ ಬಿಟ್ಕೊಂಡು ಅದ್ಭುತವಾಗಿ ಕಾಣಿಸಿಕೊಂಡಿದ್ದರು.