ಹೈದರಾಬಾದ್: ತಾಯಿಯ ಪ್ರೀತಿ ಎಲ್ಲಕ್ಕೂ ಮಿಗಿಲು. ಮಗುವಾಗಿರುವಾಗ ಆರೈಕೆ ಮಾಡಿ ಬೆಳೆಸಿದ ಅಮ್ಮನನ್ನು ಇಳಿವಯಸ್ಸಿನಲ್ಲಿ ನೋಡಿಕೊಳ್ಳುವುದು ಮಕ್ಕಳಾದವರ ಜವಾಬ್ದಾರಿ. ಆ ಕೆಲಸವನ್ನು ಬಾಲಿವುಡ್ ನಟ ಅಕ್ಷಯ್ಕುಮಾರ್ ಇತರರಿಗೆ ಮಾದರಿಯಾಗುವಂತೆ ಮಾಡುತ್ತಿದ್ದಾರೆ.
ಹೌದು, ಅಕ್ಷಯ್ಕುಮಾರ್ ತಮ್ಮ ತಾಯಿ ಅರುಣಾ ಭಾಟಿಯಾ ಜೊತೆ ಕಾಲ ಕಳೆದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅಮ್ಮನನ್ನು ವ್ಹೀಲ್ ಚೇರ್ ಮೇಲೆ ಕೂರಿಸಿಕೊಂಡು ಹರಟೆ ಹೊಡೆಯುತ್ತಾ ಲಂಡನ್ ಸುತ್ತಿದ್ದಾರೆ.
‘ಅಮ್ಮನೊಂದಿಗೆ ಸಮಯ ಕಳೆಯಲು ಶೂಟಿಂಗ್‍ನಿಂದ ಬಿಡುವು ಮಾಡಿಕೊಂಡಿದ್ದೇನೆ. ನೀವು ಎಷ್ಟೇ ಬ್ಯುಸಿಯಾಗಿದ್ದರೂ, ಬೆಳೆಯುತ್ತಿದ್ದರೂ, ನಿಮ್ಮ ಪೋಷಕರಿಗೆ ವಯಸ್ಸಾಗುತ್ತಿದೆ ಎನ್ನುವುದನ್ನು ಮರೆಯಬೇಡಿ. ಸಾಧ್ಯವಾದಾಗಲೆಲ್ಲಾ ಅವರೊಂದಿಗೆ ಕಾಲ ಕಳೆಯಿರಿ’ ಎಂದು ಭಾವುಕರಾಗಿ ಬರೆದು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ನಟ ಅಕ್ಷಯ್ಕುಮಾರ್ ಪೋಸ್ಟ್ ಗೆ ಅವರ ಪತ್ನಿ ನಟಿ ಟ್ವಿಂಕಲ್ ಖನ್ನಾ ಕಿಸ್ ಎಮೋಜಿ ಹಾಕಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಕ್ಷಯ್ಕುಮಾರ್ ಅವರ ತಾಯಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ಆಗಿದೆ. ಅಂತಾರಾಷ್ಟ್ರೀಯ ಯೋಗ ದಿನದಂದು ತಾಯಿ ಯೋಗ ಮಾಡುತ್ತಿರುವ ಫೋಟೊವನ್ನು ಅಕ್ಕಿ ಹಂಚಿಕೊಂಡಿದ್ದರು.