ETV Bharat / sitara

ದೃಶ್ಯ ಚಿತ್ರದ ನಂತ್ರ ಹೊಸ ಪಾತ್ರದಲ್ಲಿ ರವಿಚಂದ್ರನ್​​..ಈಗ 'ಆ ದೃಶ್ಯ' ಅಂತಿದ್ದಾರೆ ಕ್ರೇಜಿಸ್ಟಾರ್ - ನಿರ್ದೇಶಕ ಶಿವಗಣೇಶ್

ಶಿವಗಣೇಶ್ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವ 'ಆ ದೃಶ್ಯ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು ಸಿನಿಮಾ ಅಕ್ಟೋಬರ್​​​ನಲ್ಲಿ ತೆರೆ ಕಾಣಲಿದೆ. ಈ ಚಿತ್ರದಲ್ಲಿ ರವಿಚಂದ್ರನ್ 35 ವರ್ಷದ ಯಂಗ್ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.

ಕ್ರೇಜಿಸ್ಟಾರ್
author img

By

Published : Aug 14, 2019, 11:58 PM IST

ದೃಶ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಎರಡು ಹೆಣ್ಣು ಮಕ್ಕಳ ತಂದೆಯಾಗಿ ರವಿಚಂದ್ರನ್ ಈ ಸಿನಿಮಾದಲ್ಲಿ ಅಮೋಘವಾಗಿ ನಟಿಸಿದ್ದರು. ಇದೀಗ ಕ್ರೇಜಿ ಸ್ಟಾರ್ ಹೊಸ ಲುಕ್​​​​ನಲ್ಲಿ 'ಆ ದೃಶ್ಯ' ಎಂಬ ಸಿನಿಮಾದಲ್ಲಿ ನಟಿಸಿದ್ದು ಇದು ರಿಲೀಸ್​​ಗೂ ರೆಡಿಯಾಗಿದೆ.

'ಆ ದೃಶ್ಯ' ಟ್ರೇಲರ್ ಬಿಡುಗಡೆ ಕಾರ್ಯಕ್ರಮ

ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಚಿತ್ರದ ಟ್ರೇಲರನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿದೆ. ಟ್ರೇಲರ್​​​​​​​​​​​​​ ಬಿಡುಗಡೆ ಸಂದರ್ಭದಲ್ಲಿ ಕ್ರೇಜಿಸ್ಟಾರ್​​ ರವಿಚಂದ್ರನ್, ನಿರ್ಮಾಪಕ ಕೆ. ಮಂಜು ಹಾಗೂ ಚಿತ್ರತಂಡ ಹಾಜರಿತ್ತು. 'ಜಿಗರ್​ಥಂಡ' ಖ್ಯಾತಿಯ ನಿರ್ದೇಶಕ ಶಿವಗಣೇಶ್ ಈ ಸಿನಿಮಾಗೆ ಆ್ಯಕ್ಷನ್​​​ ಕಟ್ ಹೇಳಿದ್ದಾರೆ‌. ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಶೇಷ ಗೆಟಪ್‍ನಲ್ಲಿ ಕಾಣಿಸಿಕೊಂಡಿದ್ದಾರೆ. 35 ವರ್ಷದ ಯಂಗ್​​ ಆಫೀಸರ್ ಆಗಿ ಈ ಚಿತ್ರದಲ್ಲಿ ರವಿಚಂದ್ರನ್ ಚಿಕ್ಕ ವಯಸ್ಸಿನವರಂತೆ ಕಾಣಿಸುತ್ತಿರುವುದು ವಿಶೇಷ.

ravi
'ಆ ದೃಶ್ಯ' ಚಿತ್ರದಲ್ಲಿ ರವಿಚಂದ್ರನ್

ಜೊತೆಗೆ ಚೈತ್ರಾ ಆಚಾರ್, ನಿಸರ್ಗ, ಯಶವಂತ್ ಶೆಟ್ಟಿ ಸೇರಿದಂತೆ ಈ ಚಿತ್ರದಲ್ಲಿ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ಗೌತಮ್ ಶ್ರೀವಾತ್ಸವ್​​​​​​​​​​​​​​​​​​ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿನೋದ್ ಭಾರತಿ ಛಾಯಾಗ್ರಹಣ ಚಿತ್ರಕ್ಕಿದೆ. ಕೆ. ಮಂಜು ಈ‌ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ರವಿಚಂದ್ರನ್ ಸಿನಿಮಾಗಳಲ್ಲಿ ಹೆಚ್ಚಾಗಿ ಡುಯ್ಯೆಟ್ ಇದ್ದೇ ಇರುತ್ತದೆ. ಆದರೆ ಈ ಸಿನಿಮಾದಲ್ಲಿ ರವಿಚಂದ್ರನ್​​​​​​​​​​​​​​ಗೆ ಪತ್ನಿ ಕ್ಯಾರೆಕ್ಟರ್ ಆಗಲೀ, ಡ್ಯೂಯ್ಯೆಟ್ ಆಗಲೀ ಇಲ್ಲದಿರುವುದು ವಿಶೇಷ. ಸದ್ಯ 'ಆ ದ್ಯಶ್ಯ' ಟ್ರೇಲರ್ ಕೂಡಾ ರಿಲೀಸ್ ಆಗಿದ್ದು, ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲಿದೆ.

  • " class="align-text-top noRightClick twitterSection" data="">

Intro:ದೃಶ್ಯ ಚಿತ್ರದ ನಂತ್ರ ಹೊಸ ಲುಕ್ ನಲ್ಲಿ ಆ ದೃಶ್ಯ ಅಂತಿದ್ದಾರೆ ರವಿಚಂದ್ರನ್

Body:ದೃಶ್ಯ ಚಿತ್ರದ ನಂತ್ರ ಹೊಸ ಲುಕ್ ನಲ್ಲಿ ಆ ದೃಶ್ಯ ಅಂತಿದ್ದಾರೆ ರವಿಚಂದ್ರನ್

Conclusion:ದೃಶ್ಯ ಚಿತ್ರದ ನಂತ್ರ ಹೊಸ ಲುಕ್ ನಲ್ಲಿ ಆ ದೃಶ್ಯ ಅಂತಿದ್ದಾರೆ ರವಿಚಂದ್ರನ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.