ಬ್ಲಾಕ್ ಬಸ್ಟರ್ ಬಾಹುಬಲಿ ಸರಣಿ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರುವ ನಟಿ ರಮ್ಯಕೃಷ್ಣ ಹೊಸದೊಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರು ಇದೇ ಮೊದಲ ಬಾರಿಗೆ ಪಾರ್ನ್ ಸ್ಟಾರ್ ಪಾತ್ರಧಾರಿಯಾಗಿ ಬೆಳ್ಳಿ ಪರದೆ ಮೇಲೆ ರಂಜಿಸಲು ಸಿದ್ದವಾಗುತ್ತಿದ್ದಾರೆ.
ತಮಿಳಿನ 'ಸೂಪರ್ ಡಿಲೆಕ್ಸ್' ಸಿನಿಮಾದಲ್ಲಿ ನೀಲಿ ತಾರೆ ಶೀಲಾ ಪಾತ್ರದಲ್ಲಿ ರಮ್ಯಕೃಷ್ಣ ಅಭಿನಯಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ನಲ್ಲಿ ಪಾಲ್ಗೊಂಡಿರುವ ಅವರು ಒಂದು ನಿಗದಿತ ಸೀನ್ಗಾಗಿ 37 ಟೇಕ್ಗಳನ್ನು ತೆಗೆದುಕೊಂಡಿದ್ದಾರಂತೆ. ಎರಡು ದಿನಗಳ ಕಾಲ ಇವರ ಪಾತ್ರದ ಶೂಟಿಂಗ್ ನಡೆದಿದೆ. ಈ ಕುರಿತು ಮಾಧ್ಯಮಗಳ ಎದುರು ಅಭಿಪ್ರಾಯ ಹಂಚಿಕೊಂಡಿರುವ ಅವರು, ನನ್ ಸಿನಿ ಕರಿಯರ್ನಲ್ಲೇ ಇದು ತುಂಬಾ ಚಾಲೆಂಜಿಂಗ್ ಪಾತ್ರ ಎಂದಿದ್ದಾರೆ.
![Ramya krishana 1](https://etvbharatimages.akamaized.net/etvbharat/images/201705081322525489_rajamoulis-first-choice-for-sivagami-was-sridevi-not-ramya_secvpf_1203newsroom_00090_723.jpg)
ಇನ್ನು ಸೂಪರ್ ಡಿಲೆಕ್ಸ್ ಚಿತ್ರದಲ್ಲಿ ಫೇಮಸ್ ನಟ ವಿಜಯ್ ಸೇತುಪತಿ ತೃತೀಯ ಲಿಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಮಂತಾ ಅಕ್ಕಿನೇನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತ್ಯಾಗರಾಜನ್ ಕುಮಾರರಾಜ್ ಈ ಚಿತ್ರದ ನಿರ್ದೇಶಕರು.