ದೇಶದಲ್ಲಿ ಸದ್ಯ ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಕೊರೊನಾ ಮಹಾಮಾರಿ ಭಯದಲ್ಲೂ ಹೊಟ್ಟೆಪಾಡಿಗಾಗಿ ಆಟೋ ಚಾಲಕರು ದುಡಿಯಲೇಬೇಕಿದೆ.
ಆಟೋ, ಕ್ಯಾಬ್ಗಳು ರಸ್ತೆಗೆ ಇಳಿದರೂ ಸುರಕ್ಷತೆ ದೃಷ್ಟಿಯಿಂದ ಜನರು ಆಟೋ, ಕ್ಯಾಬ್ ಬಳಸ್ತಿಲ್ಲ. ಇದರಿಂದ ಗ್ರಾಹಕರಿಲ್ಲದೆ ಆಟೋ ಚಾಲಕರು ಪರದಾಡ್ತಿದ್ದಾರೆ. ಈಗ ಸಂಕಷ್ಟದಲ್ಲಿ ಇರುವ ಆಟೋ ಚಾಲಕರ ನೆರವಿಗೆ ನಟಿ ಪ್ರಣಿತಾ ಬಂದಿದ್ದು, ಸಹಾಯ ಹಸ್ತ ಚಾಚಿದ್ದಾರೆ.
ದಿನದಲ್ಲಿ ಸಾಕಷ್ಟು ಜನರನ್ನು ಆಟೋದಲ್ಲಿ ಕೂರಿಸಿಕೊಂಡು ನಗರದ ಹಲವೆಡೆ ಚಾಲಕರು ಸಂಚರಿಸುತ್ತಾರೆ. ಕೊರೊನಾ ವೈರಸ್ ಭೀತಿ ಆಟೋ ಚಾಲಕರಿಗೂ ಕಾಡುತ್ತೆ. ಹೀಗಾಗಿ ಆಟೋ ಚಾಲಕರಿಗೆ ನಟಿ ಪ್ರಣಿತಾ ತಮ್ಮ ಪ್ರಣಿತಾ ಫೌಂಡೇಶನ್ ಮೂಲಕ ಉಚಿತ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಲು ಮಧ್ಯ ಪರದೆ, ಜೊತೆಗೆ ಆಟೋಗಳಿಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಿ ಚಾಲಕರಿಗೆ ಸಹಾಯ ಮಾಡಿದ್ದಾರೆ.
ಇದರಿಂದ ಜನರಿಗೂ ಸುರಕ್ಷತೆ ಇದೆ ಎಂಬ ಮನೋಭಾವ ಮೂಡುತ್ತದೆ ಎಂದು ಜನರು ಆಟೋ ಬಳಸುತ್ತಾರೆ. ಇದರಿಂದ ಆಟೋ ಚಾಲಕರ ಕಷ್ಟ ನಿವಾರಣೆ ಆಗುತ್ತದೆ ಎಂಬುದು ಅವರ ಉದ್ದೇಶವಾಗಿದೆ.