ಕನ್ನಡ ಚಿತ್ರರಂಗದಲ್ಲಿ ಭರವಸೆ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹಾದೇವ್ ಹಾಗೂ ಶ್ಯಾನೆ ಟಾಪಾಗಿರುವ ನಟಿ ಅದಿತಿ ಪ್ರಭುದೇವ ಅಭಿನಯದ ಚಿತ್ರ ಗಜಾನನ ಅಂಡ್ ಗ್ಯಾಂಗ್ ಟೈಟಲ್ನಿಂದಲೇ ಸದ್ದು ಮಾಡುತ್ತಿರುವ ಗಜಾನನ ಅಂಡ್ ಗ್ಯಾಂಗ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ನಮ್ ಗಣಿ ಬಿಕಾಂ ಪಾಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪದಾರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ ಗಜಾನನ ಅಂಡ್ ಗ್ಯಾಂಗ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಸಿನಿಮಾದ ಟ್ರೈಲರ್ ಅನ್ನ ನಟಿ ಮೇಘನಾ ರಾಜ್ ಟ್ರೇಲರ್ ಲಾಂಚ್ ಮಾಡಿದ್ದಾರೆ. ಬಳಿಕ ಮೇಘನಾ ರಾಜ್, ಅದಿತಿ ಹಾಡಿ ಹೊಗಳಿದ ಮೇಘನಾ ನನ್ನ ಫೇವರಿಟ್ ಹೀರೋಯಿನ್. ಶ್ರೀ ಮಹದೇವ್ ಜೊತೆ ಇರುವುದೆಲ್ಲವ ಬಿಟ್ಟು ಸಿನಿಮಾದಲ್ಲಿ ಅವರೊಟ್ಟಿಗೆ ನಟಿಸಿದ್ದೇನೆ. ಆ ಸ್ನೇಹದ ಕಾರಣಕ್ಕಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದ್ದು, ಸಿನಿಮಾಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಗಜಾನನ ಅಂಡ್ ಗ್ಯಾಂಗ್ ಟೈಟಲೇ ಹೇಳುವಂತೆ ಕಾಲೇಜ್ ಕಥೆಯಾಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಶ್ರೀ ಮಹಾದೇವ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಗಜ ಎಂಬ ಪಾತ್ರದಲ್ಲಿ ಶ್ರೀ ನಟಿಸಿದರೆ, ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಅಭಿಷೇಕ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬೃಂದಾವನ್ ಎಂಟರ್ ಪ್ರೈಸಸ್ ಅಡಿ ಯು ಎಸ್ ನಾಗೇಶ್ ಕುಮಾರ್ 'ಗಜಾನನ ಅಂಡ್ ಗ್ಯಾಂಗ್' ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಪ್ರದ್ಯುತನ್ ಮ್ಯೂಸಿಕ್. ಉದಯ ಲೀಲಾ ಕ್ಯಾಮೆರಾ ವರ್ಕ್, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಉಳಿದಂತೆ ಬಿಗ್ ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಊರೂಫ್ ಬ್ರೋ ಗೌಡ ಕೂಡ ನಟಿಸಿದ್ದಾರೆ.
ಓದಿ: ರಾಜ್ಯದಲ್ಲಿ ಇಂದು 12 ಒಮಿಕ್ರಾನ್ ದೃಢ: ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ