ಕಿರುತೆರೆಯ ಮೂಲಕ ಬಣ್ಣದ ಜಗತ್ತಿಗೆ ಬಂದ ಹಲವು ಪ್ರತಿಭೆಗಳು ಇಂದು ಹಿರಿತೆರೆಯಲ್ಲಿ ಮಿಂಚುತ್ತಿವೆ. ಆ ಪೈಕಿ ಮಲೆನಾಡಿನ ಕುವರಿ ಕೃತಿಕಾ ರವೀಂದ್ರ ಕೂಡಾ ಒಬ್ಬರು. ಜಿಂಬಾ ಧಾರಾವಾಹಿಯಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದ ಕೃತಿಕಾ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಮಗಳು ಧಾರಾವಾಹಿಯಲ್ಲಿ ನಟಿಸಿದ್ದರು. ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳಾಗಿ ಅಭಿನಯಿಸಿದ್ದರು. ಹೀಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಕೃತಿಕಾ ಇಂದಿಗೂ ವೀಕ್ಷಕರ ಪಾಲಿನ ಪ್ರೀತಿಯ ರಾಧೆಯಾಗಿದ್ದಾರೆ.
ಬಾಲ ನಟಿಯಾಗಿ ಕಿರುತೆರೆಗೆ ಬಂದ ಕೃತಿಕಾ ಇಂದಿಗೂ ಪ್ರೇಕ್ಷಕರ ರಾಧೆ - Sandalwood
ರಾಧಾ ಕಲ್ಯಾಣ ಧಾರಾವಾಹಿಯ ರಾಧೆಯಾಗಿ ಜನ ಮೆಚ್ಚುಗೆ ಪಡೆದಿದ್ದ ನಟಿ ಕೃತಿಕಾ ಬೆಳ್ಳಿತೆರೆಯಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಅಷ್ಟೇ ಅಲ್ಲ ಇವರು ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಶಾರ್ದೂಲ ಎಂಬ ಹೊಸ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ.
Krutika