ರಾಮನಗರ/ಬೆಂಗಳೂರು: ಡೆತ್ನೋಟ್ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ನಲ್ಲೇ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೌಜನ್ಯ ಇಂಗ್ಲಿಷ್ನಲ್ಲಿ ಬರೆದಿರುವ 4 ಪುಟದ ಡೆತ್ನೋಟ್ ಪತ್ತೆಯಾಗಿದೆ. 'ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ'. ಕ್ಷಮಿಸಿ ಎಂದಿರುವ ಅವರು, ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ ಎಂದು ತಿಳಿದುಬಂದಿದೆ.
![Serial actress committed suicide in bengaluru](https://etvbharatimages.akamaized.net/etvbharat/prod-images/r-kn-rmn-02-30-30092021-film-actor-suside-ka10051_30092021132012_3009f_1632988212_158.jpg)
ಸೌಜನ್ಯ ಮೂಲತಃ ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾಗಿದ್ದು, ದೊಡ್ಡಬೆಲೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಟಿ ಫ್ಯಾನಿಗೆ ನೇಣಿಗೆ ನೇಣುಹಾಕಿಕೊಂಡಿದ್ದಾರೆ.
![ಕುಟುಂಬಸ್ಥರ ಜೊತೆ ನಟಿ](https://etvbharatimages.akamaized.net/etvbharat/prod-images/13217629_tr3w.jpg)
ನಟಿ ಸೌಜನ್ಯ ಧಾರಾವಾಹಿಗಳು ಹಾಗೂ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಕುಂಬಳಗೂಡು ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
![ನಟಿ ಸೌಜನ್ಯ ಆತ್ಮಹತ್ಯೆ](https://etvbharatimages.akamaized.net/etvbharat/prod-images/13217629_tr.jpg)
ಇದನ್ನೂ ಓದಿ: ಧನ್ಯಾ ರಾಮ್ಕುಮಾರ್ಗೆ ಶಿವಣ್ಣ ರಾಘಣ್ಣ ಆ್ಯಕ್ಟಿಂಗ್ ಟಿಪ್ಸ್ ಕೊಡ್ತಿದ್ರಂತೆ