ಸೂಜಿದಾರ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಚೈತ್ರಾ ಕೊಟ್ಟೂರು. ಈ ಚಿತ್ರ ಬಿಡುಗಡೆ ಮುನ್ನವೇ ಕನ್ನಡದ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಸೇರಿಕೊಂಡು, ಈ ಶೋನಲ್ಲಿ ವಿಚಿತ್ರ ಮಾತುಗಾರಿಕೆಯಿಂದ ಗಮನ ಸೆಳೆದಿದ್ದರು. ಕಳೆದ ಮಾರ್ಚ್ 28ರಂದು ನಾಗಾರ್ಜುನ ಎಂಬುವರ ಜೊತೆ ಮದುವೆ ಸಹ ಆಗಿದ್ದರು.
![Actress chaithra kotoor joined osho meditation camp](https://etvbharatimages.akamaized.net/etvbharat/prod-images/kn-bng-04-spiritual-kadie-mukha-madida-chaithrakotoor-7204735_22072021165206_2207f_1626952926_78.jpg)
ಆದರೆ ಈ ಮದುವೆ ವಿಚಾರವಾಗಿ ನಾರ್ಗಾರ್ಜುನ್ ಜತೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇದೀಗ ಮದುವೆ, ಸಂಸಾರ ಜಂಜಾಟಗಳಿಂದ ಬೇಸತ್ತಿರುವ ಅವರು, ದಿಢೀರ್ ಅಂತಾ ಆಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ. ಅಲ್ಲದೆ, ತಮ್ಮ ಹೆಸರನ್ನ ಕೂಡ ಬದಲಾಯಿಸಿಕೊಂಡಿದ್ದಾರೆ.
![Actress chaithra kotoor joined osho meditation camp](https://etvbharatimages.akamaized.net/etvbharat/prod-images/kn-bng-04-spiritual-kadie-mukha-madida-chaithrakotoor-7204735_22072021165206_2207f_1626952926_104.jpg)
ಸದ್ಯ ಓಶೋ ಧ್ಯಾನ ಶಿಬಿರ ಸೇರಿಕೊಂಡು ಧ್ಯಾನ ಮಾಡುತ್ತಿದ್ದಾರೆ. ಆಧ್ಯಾತ್ಮಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಚೈತ್ರಾ ಭಾಗವಹಿಸಿದ್ದು, ತಮ್ಮ ಹೆಸರನ್ನು ಮಾ ಪ್ರಗ್ಯಾ ಭಾರತಿ ಅಂತಾ ಬದಲಾಯಿಸಿಕೊಂಡಿದ್ದಾರೆ.
![Actress chaithra kotoor joined osho meditation camp](https://etvbharatimages.akamaized.net/etvbharat/prod-images/12538946_499_12538946_1626959556097.png)
ಚೈತ್ರಾ ಅವರು ಸ್ವಾಮಿ ಗೋಪಾಲ ಭಾರತಿ ಅವರೊಂದಿಗಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅದಕ್ಕೆ ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಜತೆ ಮಾ ಪ್ರಗ್ಯಾ ಭಾರತಿ ಎಂದು ಬರೆದುಕೊಂಡಿದ್ದಾರೆ.
![Actress chaithra kotoor joined osho meditation camp](https://etvbharatimages.akamaized.net/etvbharat/prod-images/kn-bng-04-spiritual-kadie-mukha-madida-chaithrakotoor-7204735_22072021165206_2207f_1626952926_283.jpg)
ಇದನ್ನೂ ಓದಿ: ಮದುವೆ ವಿವಾದದ ಬೆನ್ನಲ್ಲೇ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆ ಯತ್ನ