ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸದ್ಯಕ್ಕೆ ರಿಲೀಸ್ಗೆ ರೆಡಿಯಾಗಿದೆ. ಅಲ್ಲದೆ ಇತ್ತೀಚಿಗಷ್ಟೇ 'ಪೈಲ್ವಾನ್' ಚಿತ್ರದ 'ಕಣ್ಣು ಮಣಿಯೇ...ಕಣ್ಣು ಹೊಡಿಯೇ..' ಲಿರಿಕಲ್ ವಿಡಿಯೋ ಕೂಡಾ ರಿಲೀಸ್ ಆಗಿ ಹಿಟ್ ಆಗಿದೆ.
- " class="align-text-top noRightClick twitterSection" data="">
ಸಂಜಿತ್ ಹೆಗಡೆ ಹಾಡಿರುವ ಈ ಹಾಡು ಸಖತ್ ವೈರಲ್ ಆಗಿದ್ದು ಯೂಟ್ಯೂಬ್ನಲ್ಲಿ ಮಿಲಿಯನ್ಗೂ(10 ಲಕ್ಷಕ್ಕೂ)ಅಧಿಕ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ. ಹಾಡಿನಲ್ಲಿ ಕಿಚ್ಚನ ಜೊತೆ ಬಾಂಬೆ ಬೆಡಗಿ ನಟಿ ಆಕಾಂಕ್ಷ ಸಿಂಗ್ ಡ್ಯೂಯೆಟ್ ಹಾಡಿದ್ದಾರೆ. ಈ ಹಾಡಿಗೆ ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಆಕಾಂಕ್ಷ ಸಿಂಗ್ ಕೂಡಾ ಫಿದಾ ಆಗಿದ್ದಾರೆ. ಹಾಡು ಅವರಿಗೆ ಎಷ್ಟು ಕಿಕ್ ಕೊಟ್ಟಿದೆ ಅಂದ್ರೆ, ಹಾಡಿನ ಜೊತೆಗೆ ಕಾರ್ನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಈ ವಿಡಿಯೋವನ್ನು ಪೈಲ್ವಾನ್ ಬೆಡಗಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವನ್ನು 'ಹೆಬ್ಬುಲಿ' ಕೃಷ್ಣ ನಿರ್ದೇಶಿಸಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಚಿತ್ರದ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಆಗಸ್ಟ್ 29 ರಂದು ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.