ETV Bharat / sitara

ಬಿಗ್‌ಬಾಸ್​​ ಮನೆಯಲ್ಲಿರುವ ಈ ನಟಿ ರಾಕಿಂಗ್​​ ಸ್ಟಾರ್​​​ ಯಶ್​​ ಸಂಬಂಧಿ?

author img

By

Published : Oct 23, 2019, 1:46 PM IST

ಈ ಚೆಲುವೆ ರಾಕಿಂಗ್ ಸ್ಟಾರ್ ಯಶ್ ಅವರ ಸಂಬಂಧಿಯಂತೆ. ಆದ್ರೆ, ಬಣ್ಣದ ಲೋಕದಲ್ಲಿದ್ರೂ ಈ ಕುತೂಹಲಕಾರಿ ವಿಚಾರವನ್ನೇಕೆ ಬಾಯಿ ಬಿಟ್ಟಿಲ್ಲ ಅನ್ನೋದು ಸಿನಿಮಾ ಗಾಸಿಪ್ ಪ್ರಿಯರ ಪ್ರಶ್ನೆ.

ದೀಪಿಕಾ ದಾಸ್​ ಮತ್ತು ಯಶ್​​

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರವಾಹಿ ಮನೆ ಮಾತಾಗಿರುವಂಥದ್ದು. ಈ ಸೀರಿಯಲ್​​ನಲ್ಲಿ ಅಮೃತಾಳ ಪಾತ್ರ ಮಾಡುತ್ತಿದ್ದ ದೀಪಿಕಾ ದಾಸ್​ ಬಿಗ್‌ಬಾಸ್​ಗೆ ಆಯ್ಕೆಯಾಗಿ ದೊಡ್ಡಮನೆ ಸೇರಿದ್ದಾರೆ.

ದೀಪಿಕಾ ದಾಸ್​ ಬಿಗ್‌ಬಾಸ್​​​ ಮನೆ ಹೊಕ್ತಿದ್ದಂತೆ ಕೆಲವು ಗಾಸಿಪ್​ ಸುದ್ದಿಗಳು ಹರಿದಾಡುತ್ತಿದ್ದು, ನಾಗಿಣಿ ಸೀರಿಯಲ್​ ಇನ್ಮೇಲೆ ಪ್ರಸಾರ ಆಗಲ್ಲ ಎಂಬ ಮಾಹಿತಿಯೂ ಇದೆ. ಈಕೆ ನಟಿಸಿದ ಮೊದಲ ಧಾರಾವಾಹಿಯಲ್ಲೇ ಇನ್ನೊಂದು ಗಾಸಿಪ್​ ಜೋರಾಗಿದೆ.

deepika das
ದೀಪಿಕಾ ದಾಸ್​

ಲೇಟೆಸ್ಟ್‌ ವಿಷ್ಯ ಏನಪ್ಪ ಅಂದ್ರೆ, ದೀಪಿಕಾ, ರಾಕಿಂಗ್ ಸ್ಟಾರ್ ಯಶ್ ಅವರ ಸಂಬಂಧಿಯಂತೆ. ಆದ್ರೆ, ಬಣ್ಣದ ಲೋಕಕ್ಕೆ ದೀಪಿಕಾ ಬಂದು ಇಷ್ಟು ವರ್ಷಗಳಾದರೂ ಯಶ್​​ ಮತ್ತು ದೀಪಿಕಾ ಸಂಬಂಧಿಕರು​​ ಎಂಬ ಕುತೂಹಲಕಾರಿ ವಿಚಾರ ಯಾರಿಗೂ ಗೊತ್ತಿಲ್ಲ. ದೀಪಿಕಾ ಅವರ ತಾಯಿಯ ಕಡೆಯಿಂದ ಯಶ್ ತುಂಬಾ ಹತ್ತಿರದ ಸಂಬಂಧಿಯಂತೆ. ದೀಪಿಕಾದಾಸ್​​ ಯಶ್​ ಚಿಕ್ಕಮ್ಮನ ಮಗಳು ಎಂದು ಹೇಳಲಾಗುತ್ತಿದೆ. ಆದರೆ ದೀಪಿಕಾ ಅವರಾಗಲೀ, ಯಶ್​​ ಆಗಲಿ ಈ ಬಗ್ಗೆ ಎಲ್ಲಿಯೂ ಹೇಳಲೇ ಇಲ್ಲ‌. ಆದ್ರೆ ಈ ಗಾಸಿಪ್​ ಸುದ್ದಿಗಳಿಗೆ ತೆರೆ ಬೀಳಬೇಕೆಂದರೆ ದೀಪಕಾ ಅಥವಾ ರಾಕಿಂಗ್​ ಸ್ಟಾರ್​​ ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳಬೇಕು ಅನ್ನೋದು ಅಭಿಮಾನಿಗಳ ಪಿಸುಮಾತು.

deepika das
ದೀಪಿಕಾ ದಾಸ್​

ಒಟ್ಟಾರೆ ತಮ್ಮ ಮನೋಜ್ಞ ಅಭಿನಯದ ಮೂಲಕ ನಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಯಶ್ ಮತ್ತು ದೀಪಿಕಾ ದಾಸ್​​​ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

deepika das
ದೀಪಿಕಾ ದಾಸ್​
deepika das
ಯಶ್​​​

Intro:Body:ಬಾಲ್ಯದಿಂದಲೂ ಈಕೆಗೆ ಇದ್ದ ಒಂದೇ ಒಂದು ಆಸೆ ಎಂದರೆ ಇದೇ! ತಾನು ನಟಿಯಾಗಬೇಕು! ತನ್ನ ಬಾಲ್ಯದ ಆಸೆ ನನಸು ಮಾಡಿರುವ ಸಂತಸದಲ್ಲಿ ಇರುವ ಈಕೆ ಈಗ ಕಿರುತೆರೆಯ ಜನಪ್ರಿಯ ನಟಿ. ಜೊತೆಗೆ ಬೆಳ್ಳಿತೆರೆಗೂ ಕಾಲಿಟ್ಟಿರುವ ಚೆಲುವೆ. ಅಂದ ಹಾಗೇ ಈಕೆ ಬೇರಾರೂ ಅಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ರ ಸ್ಫರ್ಧಿಯಾಗಿ ಕಾಣಿಸಿಕೊಂಡಿರುವ ದೀಪಿಕಾ ದಾಸ್.

ಬಿಸಿಎ ಪದವೀಧರೆಯಾಗಿರುವ ದೀಪಿಕಾ ಶಾಲಾ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಿದ್ದರು. ಮುಂದೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ದೀಪಿಕಾ ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

ನಟಿಸಿದ ಮೊದಲ ಧಾರಾವಾಹಿಯಲ್ಲೇ ಮನೆ ಮಾತಾಗಿರುವ ದೀಪಿಕಾ ಧೂದ್ ಸಾಗರ್, ಡ್ರೀಮ್ಸ್‌ಗರ್ಲ್ ಸೇರಿದಂತೆ ಎಂಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾದ ಸಂಗತಿಯೆಂದರೆ ದೀಪಿಕಾ ಅವರು ಅರಸಿ ಬಂದ ಅವಕಾಶಗಳಿಗೆಲ್ಲಾ ಅಸ್ತು ಎನ್ನುವುದಿಲ್ಲ‌ ಬದಲಿಗೆ ತಮಗೆ ಬಂದ ಪಾತ್ರವನ್ನು ಆಯ್ಕೆ ಮಾಡುವಾಗ ಬಹಳ ಆಲೋಚನೆ ಮಾಡುತ್ತಾರೆ.

ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಪಾತ್ರ ಆದರೆ ಸಿನಿಮಾದಲ್ಲಿ ಹಾಗಲ್ಲ ಎನ್ನುವ ದೀಪಿಕಾ ಗೆ ಅಮೃತಾಳಾಗಿ ಬದಲಾಗಲು ಸುತಾರಾಂ ಮನಸ್ಸಿರಲಿಲ್ಲ. ಆದರೆ ಅವರಿಂದು ಅಮೃತಾ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ನಿರ್ದೇಶಕ ಹಯವದನ ಅವರ ಒತ್ತಾಯವೇ ಕಾರಣ. ಅವರ ಒತ್ತಾಯದ ಮೇರೆಗೆ, ನಾಗಿಣಿ ಪಾತ್ರ ಎಂದು ತಿಳಿದ ನಂತರ ದೀಪಿಕಾ ಒಪ್ಪಿಗೆ ನೀಡಿದರು.

ಒಟ್ಟಾರೆಯಾಗಿ ಬೆಳ್ಳಿತೆರೆಯಲ್ಲಿ ಮಿಂಚಿದ್ದ ದೀಪಿಕಾ ದಾಸ್ ಅವರು ವೀಕ್ಷಕರಿಗೆ ತುಂಬಾ ಹತ್ತಿರವಾದುದು ನಾಗಿಣಿ ಆದ ಮೇಲೆಯೇ! ಅರ್ಥಾತ್ ದೀಪಿಕಾ ನಾಗಿಣಿಯಾಗಿ ಬದಲಾಗಿ ಕಿರುತೆರೆಯಲ್ಲಿ ಬರಲಾರಂಭಿಸಿದ ಮೇಲೆ ಕಿರುತೆರೆ ಪ್ರಿಯರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇದೀಗ ಬಿಗ್ ಬಾಸ್ ಸೀಸನ್ 7 ರ ಸ್ಫರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿರುವ ಚೆಂದುಳ್ಳಿ ಚೆಲುವೆ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಸಂಬಂಧಿಯೂ ಹೌದು. ಬಣ್ಣದ ಲೋಕದಲ್ಲಿ ದೀಪಿಕಾ ಬಂದು ಇಷ್ಟು ವರುಷಗಳಾದರೂ ಅವರಿಬ್ಬರೂ ಸಂಬಂಧಿಕರು ಎಂದು ಹಲವರಿಗೆ ತಿಳಿದಿಲ್ಲ!

ಅಂದ ಹಾಗೆ ದೀಪಿಕಾ ದಾಸ್ ಮತ್ತು ಯಶ್ ಸೋದರ ಸಂಬಂಧಿಗಳು. ದೀಪಿಕಾ ಅವರ ತಾಯಿಯ ಕಡೆಯಿಂದ ಯಶ್ ಅವರ ತುಂಬಾ ಹತ್ತಿರದ ಸಂಬಂಧಿ. ಆದರೆ ದೀಪಿಕಾ ಅವರು ಎಲ್ಲಿಯೂ ತಾವು ರಾಕಿಂಗ್ ಸ್ಟಾರ್ ಅವರ ಸಂಬಂಧಿ ಎಂದು ಹೇಳಲೇ ಇಲ್ಲ‌.

ತಮ್ಮ ಮನೋಜ್ಞ ವಾದ ಅಭಿನಯದ ಮೂಲಕ ನಟನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಯಶ್ ಮತ್ತು ದೀಪಿಕಾ ನೂರಾರು ಜನ ಅಭಿಮಾನಿಗಳನ್ನು ಹೊಂದಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.