ETV Bharat / sitara

ಕತ್ತಲು ಆವರಿಸಿದಂತಿದೆ.. ನನ್ನ ಉಸಿರು ಭಾರವಾಯಿತು.. ಆ ಸ್ಥಳ ‘ಅಪ್ಪು’ಗೆ ಮಾತ್ರ ಮೀಸಲು.. ಕಿಚ್ಚನ ಭಾವುಕ ನುಡಿ ನಮನ - Puneeth Rajkumar news

ಕಿಚ್ಚ ತಮ್ಮ ಟ್ವಿಟರ್​ನಲ್ಲಿ ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ. ಅಲ್ಲದೇ ಪುನೀತ್​ ಫೋಟೋವನ್ನೇ ತಮ್ಮ ಟ್ವಿಟರ್​ ಖಾತೆಯ ProfilePic ಮಾಡಿಕೊಂಡಿದ್ದಾರೆ. ಅಲ್ಲದೇ "GO IN PEACE,, REST IN POWER MY FRIEND." ಎಂದು ಬರೆದುಕೊಂಡಿದ್ದಾರೆ..

ಸುದೀಪ್ ಮತ್ತು ಪುನೀತ್
ಸುದೀಪ್ ಮತ್ತು ಪುನೀತ್
author img

By

Published : Oct 30, 2021, 4:06 PM IST

Updated : Oct 30, 2021, 4:25 PM IST

ನಿನ್ನೆ ಹೃದಯಾಘಾತದಿಂದ ನಟ ಪುನೀತ್​ ರಾಜ್​ಕುಮಾರ್​ ನಿಧನರಾಗಿದ್ದಾರೆ. ಕುಟುಂಬಸ್ಥರು, ಅಪಾರ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ನಟ-ನಟಿಯರು ಸಹ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಇದ್ದಕ್ಕಿದ್ದಂತೆ ಯಮನ ಕುಣಿಕೆಗೆ ಕೊರಳೊಡ್ಡಿದ ಅಪ್ಪುವಿನ ಮರಣದ ಸುದ್ದಿ ಎಂದೆಂದಿಗೂ ಅರಗಿಸಿಕೊಳ್ಳಲಾಗದಂತಹ ನೋವಾಗಿದೆ. ಈಗಿದ್ದ ಮನುಷ್ಯ ಇನ್ನೊಂದು ಕ್ಷಣಕ್ಕೆ ಇಲ್ಲ ಎಂಬ ಸಂಗತಿ ಭರಿಸಲಾಗದ ದುಃಖ ನೀಡಿದೆ. ಈ ಮಧ್ಯೆ ನಟ ಕಿಚ್ಚ ಸುದೀಪ್ ಕೂಡ ಪುನೀತ್​ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಕಿಚ್ಚ ತಮ್ಮ ಟ್ವಿಟರ್​ನಲ್ಲಿ ಭಾವುಕ ನುಡಿಗಳನ್ನು ಬರೆದುಕೊಂಡಿದ್ದಾರೆ. ಅಲ್ಲದೇ ಪುನೀತ್​ ಫೋಟೋವನ್ನೇ ತಮ್ಮ ಟ್ವಿಟರ್​ ಖಾತೆಯ Profile Pic ಮಾಡಿಕೊಂಡಿದ್ದಾರೆ. ಅಲ್ಲದೇ "GO IN PEACE,, REST IN POWER MY FRIEND." ಎಂದು ಬರೆದುಕೊಂಡಿದ್ದಾರೆ.

ಅಪ್ಪು ಅಗಲಿಕೆಗೆ ಸುದೀಪ್​ ಭಾವುಕ ನುಡಿ ನಮನ : ಇದು ಬಾಲ್ಯದಿಂದ ಶುರುವಾದ ಪಯಣ. ಅಪ್ಪು ಅವರನ್ನು ಶಿವಮೊಗ್ಗದಲ್ಲಿ ಮೊದಲು ಭೇಟಿಗಿದ್ದೆ. ಅವರು ಆಗಲೇ ಸ್ಟಾರ್‌ ಆಗಿದ್ದರು. ಅವರ ನಟನೆಯ ಭಾಗ್ಯವಂತರು ಸಿನಿಮಾ ಹಿಟ್‌ ಆಗಿತ್ತು.

ಪುನೀತ್‌ ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿದ ಬಳಿಕ ಊಟಕ್ಕೆಂದು ನಮ್ಮ ಮನೆಗೆ ಬಂದಿದ್ದರು. ಆದ ನಾನು ಮೊಟ್ಟ ಮೊದಲ ಬಾರಿಗೆ ಅಪ್ಪುವನ್ನು ಭೇಟಿಯಾಗಿದ್ದು. ನಾವು ಸಮಾನ ವಯಸ್ಸಿನವರಾಗಿದ್ದರಿಂದ ಬೇಗ ಸ್ನೇಹಿತರಾದೆವು. ನಮ್ಮ ಮನೆಯ ಊಟಕ್ಕಿಂತ ನನ್ನ ಗೊಂಬೆಗಳಿಂದ ಅವರು ಆಕರ್ಷಿತರಾಗಿದ್ದರು.

ಸುದೀಪ್ ಮತ್ತು ಪುನೀತ್
ಸುದೀಪ್ ಮತ್ತು ಪುನೀತ್

ಓರ್ವ ಮಹಿಳೆ ನಮ್ಮ ಹಿಂದೆ ಊಟದ ತಟ್ಟೆ ಹಿಡಿದುಕೊಂಡು ಓಡಾಡುತ್ತಿದ್ದರು. ನಾವು ಊಟಕ್ಕಿಂತ ಹೆಚ್ಚಾಗಿ ಆಟದಲ್ಲಿ ಮುಳುಗಿ ಹೋಗಿದ್ದೆವು. ಆದರೆ, ನಮ್ಮ ಮನೆಯಲ್ಲಿ ನೆರೆಹೊರೆಯವರು ನಮ್ಮ ಸುತ್ತಲೂ ಜಮಾಯಿಸಿದರು. ಕಾರಣ, ಅಪ್ಪು ಕೇವಲ ಮಗುವಾಗಿರಲಿಲ್ಲ, ಅವರೊಬ್ಬ ಸ್ಟಾರ್‌ ಆಗಿದ್ದರು. ಅಭಿಜಾತ ಕಲಾವಿದರೊಬ್ಬರ ಮಗನಾಗಿದ್ದರು. ಅವರಲ್ಲಿನ ಉತ್ಸಾಹವು ನನಗೆ ಸ್ಪೂರ್ತಿಯಾಗಿತ್ತು. ಅಂದಿನ ಆ ಘಟನೆ ನನಗೆ ಈಗಲೂ ನೆನಪಿದೆ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ಓದಿ: ತಂದೆಗೆ ತಕ್ಕ ಮಗ.. ಅಪ್ಪನ ವ್ಯಕ್ತಿತ್ವ ರೂಢಿಸಿಕೊಂಡಿದ್ದ ‘ದೊಡ್ಮನೆ ಹುಡುಗ’.. ಸರಳ ವ್ಯಕ್ತಿತ್ವದ ‘ರಾಜಕುಮಾರ’..

ಈ ಘಟನೆಯ ಬಳಿಕ ನಾನು ಮತ್ತೆ ಅಪ್ಪು ಹಲವಾರು ಬಾರಿ ಭೇಟಿಯಾದೆವು. ಅಲ್ಲದೇ ಸಹೋದ್ಯೋಗಿಗಳಾದೆವು. ಅವರು ನನಗೆ ಕೇವಲ ಸ್ನೇಹಿತ ಮಾತ್ರವಲ್ಲ, ನನ್ನ ಪ್ರತಿಸ್ಪರ್ಧಿ ಸಹ ಹೌದು. ಅವರು ಅಸಾಧಾರಣ ನಟ, ನೃತ್ಯಪಟು, ಹೋರಾಟಗಾರ ಮತ್ತು ಉತ್ತಮ ವ್ಯಕ್ತಿ.

ನನಗೆ ಪುನೀತ್​ ನೀಡಿದ ಸ್ಪರ್ಧೆಯ ಬಗ್ಗೆ ಅತ್ಯಂತ ಗೌರವವಿದೆ. ನಾನು ಅತ್ಯುತ್ತಮವಾಗಿ ನಟಿಸಲು ಅದು ಸಹ ಒಂದು ಕಾರಣವಾಗಿದೆ. ಅವರು ನನ್ನ ಸಮಕಾಲೀನ ನಟ ಎಂಬುದು ನನಗೆ ಹೆಮ್ಮೆಯ ವಿಚಾರ.

ಚಿತ್ರರಂಗ ಇಂದು ಅಪೂರ್ಣವಾಗಿ ಕಾಣುತ್ತಿದೆ. ಸಮಯ ತುಂಬಾ ಕ್ರೂರಿ. ನಿನ್ನೆ ಪ್ರಕೃತಿ ಸಹ ದುಃಖಿಸಿ ಅಳುತ್ತಿರುವಂತೆ ಕಾಣುತ್ತಿದೆ. ಕಪ್ಪು ಮೋಡಗಳು ಕವಿದಿವೆ, ಕತ್ತಲು ಆವರಿಸಿದಂತಾಗಿದೆ. ಶೋಕದಲ್ಲಿ ಮುಳುಗಿದಂತೆ ತೋರುತ್ತಿದೆ.

ನಿಜಕ್ಕೂ ಬೇಸರದ ದಿನ. ಕನಸು ಮನಸಿನಲ್ಲೂ ಊಹಿಸಿದ ವಾಸ್ತವಕ್ಕೆ ನಾನು ಹತ್ತಿರವಾಗುತ್ತಿದ್ದೆ. ಅಪ್ಪು ಅವರನ್ನು ಇಟ್ಟಿರುವ ಜಾಗಕ್ಕೆ ಹೋಗುವಾಗ ನನ್ನ ಉಸಿರು ಭಾರವಾಯಿತು.

ಪುನೀತ್​ ಮಲಗಿದ್ದನ್ನು ನೋಡಿದಾಗ ಎಲ್ಲರೂ ಮನಸ್ಸಿನ ಮೇಲೆ ಪರ್ವತವೊಂದನ್ನು ಹೊತ್ತು ನಿಂತ ಅನುಭವ. ತಲೆಯಲ್ಲಿ ಹಲವು ಪ್ರಶ್ನೆಗಳು, ವಿಚಾರಗಳ ಗೊಂದಲ ಶುರುವಾಯಿತು. ಹೇಗೆ, ಏಕೆ ಎನ್ನುವ ಪ್ರಶ್ನೆಗಳು ಮೂಡಲು ಆರಂಭವಾದವು.

ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲು ಆಗಲಿಲ್ಲ. ಅವರು ನನಗೆ ಸ್ನೇಹಿತರಾಗಿದ್ದರು. ಸಹೋದ್ಯೋಗಿಯಾಗಿದ್ದರು. ಅವರು ಇರಬಾರದ ಜಾಗದಲ್ಲಿ ಇದ್ದರು. ನನಗೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲೇ ಇಲ್ಲ ಎಂದು ಸುದೀಪ್​ ದುಃಖ ಭರಿತ ಮನದ ಭಾವನೆಯನ್ನು ಅಕ್ಷರಗಳ ಮೂಲಕ ತೋಡಿಕೊಂಡಿದ್ದಾರೆ.

ಸುದೀಪ್, ಗಣೇಶ್ ಆಚಾರ್ಯ, ಪುನೀತ್
ಸುದೀಪ್, ಗಣೇಶ್ ಆಚಾರ್ಯ, ಪುನೀತ್

ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡುವುದು ಇನ್ನಷ್ಟು ನೋವು ತಂದಿತು. ಶಿವಣ್ಣ ನನ್ನ ಬಳಿ, "ಅವನು (ಪುನೀತ್) ನನಗಿಂತ 13 ವರ್ಷ ಚಿಕ್ಕವನು. ನಾನು ಆತನನ್ನು ಎತ್ತಿ ಆಡಿಸಿದ್ದೇನೆ. ಜೀವನದಲ್ಲಿ ತುಂಬಾ ನೋಡಿದ್ದೇನೆ. ಇನ್ನೂ ಏನೇನೂ ಇದೆಯೋ" ಎಂದರು. ಶಿವಣ್ಣ ಆಡಿದ ಮಾತುಗಳು ನನ್ನ ಮನದ ಗೋಡೆಗಳಲ್ಲಿ ಪ್ರತಿಧ್ವನಿಸುತ್ತಿವೆ.

ಅಪ್ಪು ಅಗಲಿಕೆ ಎಲ್ಲರಿಗೂ ಆಘಾತವಾಗಿದೆ, ನೋವು ತಂದಿದೆ. ಇದನ್ನು ಒಪ್ಪಿಕೊಳ್ಳಲು ಬಹಳಷ್ಟು ಸಮಯಬೇಕು. ಅದನ್ನು ನಾವು ಒಪ್ಪಿಕೊಂಡರೂ ಅವರು ಬಿಟ್ಟು ಹೋದ ಸ್ಥಾನ ಖಾಲಿಯಾಗೇ ಇರುತ್ತದೆ. ಆ ಜಾಗವನ್ನು ಯಾರು ಕೂಡ ತುಂಬಲು ಅಸಾಧ್ಯ. ಆ ಸ್ಥಳ ‘ಅಪ್ಪು’ ಎಂಬ ಮಹಾನ್​ ವ್ಯಕ್ತಿಗೆ ಮಾತ್ರ ಮೀಸಲಾಗಿದೆ. GO IN PEACE,, REST IN POWER MY FRIEND ಎಂದು ಸುದೀಪ್​ ಪ್ರೀತಿಯ ಗೆಳೆಯನ ಅಗಲಿಕೆಯ ನೋವನ್ನು ತೋಡಿಕೊಂಡಿದ್ದಾರೆ.

ಓದಿ: ಅಪ್ಪು ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಆಗಮಿಸಿದ ಮೋಹಕ ತಾರೆ ರಮ್ಯಾ..

Last Updated : Oct 30, 2021, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.