ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶನದ ಜೊತೆ ನಟನಾಗಿ ಬೆಳ್ಳಿ ತೆರೆ ಮೇಲೆ ಮಿಂಚುತ್ತಿರುವ ರಿಷಬ್ ಶೆಟ್ಟಿ ಈ ವರ್ಷದ ಕೊನೆಯ ದಿನದೊಂದು ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ.
ಒಂದು ಮಗುವಿನ ತಂದೆಯಾಗಿರೋ ರಿಷಬ್ ಶೆಟ್ಟಿ ಮತ್ತೊಮ್ಮೆ ತಂದೆಯಾಗುತ್ತಿದ್ದಾರೆ. ಈ ವಿಷಯವನ್ನು ರಿಷಬ್ ಶೆಟ್ಟಿ ಕಡಲ ತೀರದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಗನ ಜೊತೆಗೆ ಫೋಟೋ ಶೂಟ್ ಮಾಡುವ ಮೂಲಕ ಈ ಗುಡ್ ನ್ಯೂಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
![actor rishab shetty good news before ending 2021](https://etvbharatimages.akamaized.net/etvbharat/prod-images/14062741_rishabb.jpg)
ಹೊಸ ವರ್ಷಕ್ಕೆ ಹೊಸ ಸಂತಸವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ. ರಣ್‌ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ ಎಂದು ರಿಷಬ್ ಶೆಟ್ಟಿ ಅವರು ಪ್ರಗತಿ ಶೆಟ್ಟಿ, ಮಗ ರಣ್ವಿತ್ ಶೆಟ್ಟಿ ಜೊತೆಗಿನ ಫೋಟೋ ಶೇರ್ ಮಾಡಿದ್ದಾರೆ.
ಇನ್ನು ರಿಷಬ್ ಶೆಟ್ಟಿ ಗಂಡು ಮಗುವಿನ ತಂದೆಯಾಗಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಪತ್ನಿ ಜತೆಗಿನ ಸೆಲ್ಫಿ ಹಾಕಿ ಯಸ್ ಇಟ್ಸ್ ಹೀರೋ ಎಂದು ಮಾಹಿತಿ ಹಂಚಿಕೊಂಡಿದ್ದರು.
![actor rishab shetty good news before ending 2021](https://etvbharatimages.akamaized.net/etvbharat/prod-images/14062741_rishab.jpg)
ಈ ವರ್ಷ ರಿಷಬ್ ಶೆಟ್ಟಿ ನಟನೆಯ ಹೀರೋ ಹಾಗೂ ಗರುಡ ಗಮನ ವೃಷಭ ವಾಹನ ಸಿನಿಮಾಗಳು ರಿಲೀಸ್ ಆಗಿದ್ದು, ಅಂದುಕೊಂಡ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ. ಸದ್ಯ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನು ಪ್ರಗತಿ ಶೆಟ್ಟಿ ಅವರು ರಿಷಬ್ ಶೆಟ್ಟಿ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದು, ಪತಿ ಕೆಲಸಕ್ಕೆ ಸಾಥ್ ನೀಡುತ್ತಿದ್ದಾರೆ.
![actor rishab shetty good news before ending 2021](https://etvbharatimages.akamaized.net/etvbharat/prod-images/14062741_rishabbb.jpg)
ಇದನ್ನೂ ಓದಿ: ಗೋವಾದಲ್ಲಿ ಹೊಸವರ್ಷ ಆಚರಿಸಲಿರುವ ರಾಕಿಂಗ್ ಜೋಡಿ