ಕನ್ನಡ ಚಿತ್ರರಂಗದಲ್ಲಿ ‘ಸ್ಪರ್ಶ’ ಸಿನಿಮಾ ಮೂಲಕ ಕಿಚ್ಚ ಸುದೀಪ್ಗೆ ನಾಯಕಿಯಾಗಿ ಸ್ಪರ್ಶ ರೇಖಾ ಎಂದೇ ಖ್ಯಾತಿ ಪಡೆದಿರುವ ನಟಿ ಬಹಳ ವರ್ಷಗಳ ನಂತರ ಸಿನಿ ಲೋಕಕ್ಕೆ ವಾಪಸ್ಸಾಗಿದ್ದು ಗೊತ್ತೇ ಇದೆ. ಆದರೀಗ ನಟನೆಯಿಂದ ನಿರ್ಮಾಣಕ್ಕೆ ಕಾಲಿಟ್ಟ ಅವರ ಚೊಚ್ಚಲ ಸಿನಿಮಾ ‘ಡೆಮೋ ಪೀಸ್’ ತೆರೆಗೆ ಬರಲು ಸಜ್ಜಾಗಿದೆ.
ಈ ಚಿತ್ರದಲ್ಲಿ ನಾಯಕನಾಗಿ ಭರತ್ ನಟಿಸುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಹೊಸದಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇಂದು ಇವರ ಹುಟ್ಟುಹಬ್ಬ. ಹಾಗಾಗಿ ರೇಖಾ ಮೊದಲ ಹಂತದ ಪಬ್ಲಿಸಿಟಿಗಾಗಿ ಪೋಸ್ಟರ್ ಅನಾವರಣ ಮಾಡುತ್ತಿದ್ದಾರೆ.
![Demo piece movie poster](https://etvbharatimages.akamaized.net/etvbharat/prod-images/4363576_thumbn.jpg)
ಈ ಸಿನಿಮಾವನ್ನು ಚೊಚ್ಚಲ ಬಾರಿಗೆ ವಿವೇಕ್ ವಿ ನಿರ್ದೇಶಿಸುತ್ತಿದ್ದಾರೆ. ಭರತ್ಗೆ ನಾಯಕಿಯಾಗಿ ಸೋನಲ್ ಮೊಂಟೆರಿ ಅಭಿನಯಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್, ಶ್ರೀಕಾಂತ್ ಹೆಬ್ಳೀಕರ್, ಸ್ಪರ್ಶ ರೇಖಾ, ರೂಪೇಶ್, ಕಾರ್ತಿಕ್, ಲೋಹಿತ್, ರಾಕ್ಲೈನ್ ಸುಧಾಕರ್ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ.
ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಾಲ ಸರಸ್ವತಿ ಅವರ ಛಾಯಾಗ್ರಹಣ ಸಿನಿಮಾಗಿದೆ. ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ನಾಗರ್ಜುನ್ ಗೀತೆ ರಚಿಸಿದ್ದು, ರಾಜೇಶ್ ಕೃಷ್ಣ ಹಾಗೂ ಸಂಚಿತ್ ಹೆಗ್ಡೆ ಕಂಠಸಿರಿಯಿದೆ.