ಇತ್ತೀಚೆಗೆ ವಾರಕ್ಕೆ ಆರು, ಒಂಭತ್ತು ಸಿನಿಮಾಗಳು ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಸ್ಟಾರ್ ನಟರ ಚಿತ್ರಗಳು 25, 50, 75 ಹಾಗೂ 100 ದಿನ ಪ್ರದರ್ಶದ ಭಾಗ್ಯ ಕಾಣುವುದು ಕಷ್ಟ. ಅಂತಹುದರಲ್ಲಿ ಪುನೀತ್ ರಾಜಕುಮಾರ್ ನಟಿಸಿರುವ ‘ನಟಸಾರ್ವಭೌಮ’ 50ನೇ ದಿನಕ್ಕೆ ಕಾಲಿಟ್ಟಿದೆ.
ನಟಸಾರ್ವಭೌಮ, ಅಪ್ಪು ಜತೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಮೂರನೇ ಹಾಗೂ ನಿರ್ದೇಶಕ ಪವನ್ ಒಡೆಯರ್ ಅವರ ಎರಡನೇ ಕಾಂಬಿನೇಷನ್ ಚಿತ್ರ. 50ನೇ ದಿವಸಕ್ಕೆ ಹಲವಾರು ಮಲ್ಟಿಪ್ಲೆಕ್ಸ್ ಹಾಗೂ ಕೆಲವು ಸಿಂಗಲ್ ಸ್ಕ್ರೀನ್ಗಳಲ್ಲಿ ‘ನಾಟಸಾರ್ವಭೌಮ’ ಅಮೋಘ ಪ್ರದರ್ಶನ ಕಾಣುತ್ತಿದೆ.
ವೈದಿ ಛಾಯಾಗ್ರಹಣ, ಡಿ ಇಮಾನ್ ಸಂಗೀತ, ಕಾಯ್ಕಿಣಿ, ಯೋಗರಾಜ ಭಟ್, ಕವಿರಾಜ್ ಗೀತ ಸಾಹಿತ್ಯದ ಈ ಸಿನಿಮಾದಲ್ಲಿ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ನಾಯಕಿಯರಾಗಿ ರಚಿತಾ ರಾಮ್, ಅನುಪಮ ಪರಮೇಶ್ವರನ್, ರವಿಶಂಕರ್, ಚಿಕ್ಕಣ್ಣ, ಪ್ರಭಾಕರ್, ಅವಿನಾಶ್, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಅತಿಥಿ ಪಾತ್ರದಲ್ಲಿ ಡಾ! ಬಿ.ಸರೋಜ ದೇವಿ ಹಾಗೂ ಇತರರು ಅಭಿನಯಿಸಿದ್ದಾರೆ.
ಇನ್ನು ಶೀಘ್ರದಲ್ಲೇ ದರ್ಶನ್ ನಟನೆಯ ಯಜಮಾನ ಹಾಗೂ ಬೆಲ್ ಬಾಟಮ್ ಚಿತ್ರಗಳು 50ನೇ ದಿವಸಕ್ಕೆ ಬಂದು ತಲುಪಲಿವೆ.