ETV Bharat / sitara

ಫೈಟರ್ ವಿವೇಕ್ ಕುಟುಂಬಕ್ಕೆ ಆರ್ಥಿಕ ನೆರವು ಘೋಷಿಸಿದ ಸ್ಯಾಂಡಲ್‌ವುಡ್ ನಟ ನಿಖಿಲ್‌ ಕುಮಾರಸ್ವಾಮಿ - Bangalore

ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ 'ಲವ್ ಯೂ ರಚ್ಚು' ಸಿನಿಮಾದ, ಫೈಟರ್​ ವಿವೇಕ್​, ಹೈ ಟೆಂಕ್ಷನ್ ವಿದ್ಯುತ್​ ತಂತಿ ಸ್ಪರ್ಶಿಸಿ ಮೃತ ಪಟ್ಟಿದ್ದಾರೆ. ನಟ ನಿಖಿಲ್‌ ಕುಮಾರಸ್ವಾಮಿ ಮೃತನ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದು, 50 ಸಾವಿರ ಪರಿಹಾರ ಘೋಷಿಸಿದ್ದಾರೆ.

Actor Nikhil Kumaraswamy financial help to Fight Vivek Family
ಫೈಟರ್ ವಿವೇಕ್ ಕುಟುಂಬಕ್ಕೆ ನೆರವಾದ ಸ್ಯಾಂಡಲ್‌ವುಡ್ ನಟ ನಿಖಿಲ್‌ ಕುಮಾರಸ್ವಾಮಿ
author img

By

Published : Aug 10, 2021, 1:39 AM IST

ಬೆಂಗಳೂರು: ಫೈಟರ್ ವಿವೇಕ್ ಕುಟುಂಬಕ್ಕೆ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಸಹಾಯ ಮಾಡಿದ್ದಾರೆ. ವಿವೇಕ್ ಕುಟುಂಬಕ್ಕೆ 50 ಸಾವಿರ ಪರಿಹಾರ ಘೋಷಣೆ ಮಾಡಿರುವ ನಿಖಿಲ್ ಕುಮಾರಸ್ವಾಮಿ, ತಮ್ಮ ಮ್ಯಾನೇಜರ್ ಮೂಲಕ ವಿವೇಕ್ ಕುಟುಂಬಕ್ಕೆ ಹಣ ನೀಡುವ ವ್ಯವಸ್ಥೆ ಮಾಡಿದ್ದಾರೆ.ಇನ್ನು ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದಲ್ಲಿ ಫೈಟಿಂಗ್ ಸನ್ನಿವೇಶದಲ್ಲಿ ವಿವೇಕ್ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿವೇಕ್ ಕುಟುಂಬಕ್ಕೆ ಸಹಾಯಕ್ಕೆ ಬಂದಿದ್ದಾರೆ.

ಇದನ್ನೂ ಓದಿ: 'ಮಾಸ್ತಿಗುಡಿ' ದುರಂತ ನೆನಪಿಸಿದ 'ಲವ್​ ಯೂ ರಚ್ಚು' ಇನ್ಸಿಡೆಂಟ್!

ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿನಯದ 'ಲವ್ ಯೂ ರಚ್ಚು' ಸಿನಿಮಾದ, ಫೈಟರ್​ ವಿವೇಕ್​, ಹೈ ಟೆಂಕ್ಷನ್ ವಿದ್ಯುತ್​ ತಂತಿಗೆ ಸ್ಪರ್ಶಿಸಿ ಮೃತ ಪಟ್ಟಿದ್ದಾರೆ. 28 ವರ್ಷದ ವಿವೇಕ್ ತಮಿಳುನಾಡಿನ ಮೂಲದವರು. ನಿನ್ನೆ ರಾಮನಗರ ತಾಲೂಕಿನ ಜೋಗನದೊಡ್ಡಿ ಬಳಿ ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅಜಯ್ ರಾವ್ ನಡುವೆ ಒಂದು ಆ್ಯಕ್ಷನ್ ಸಿಕ್ವೇನ್ಸ್ ನಡೆಯುವ ಸಂದರ್ಭದಲ್ಲಿ ಜೆಸಿಬಿಗೆ ರೋಪ್ ಕಟ್ಟಿ ಎಳೆಯುವಾಗ ಹೈ ಟೆಂಕ್ಷನ್ ವಿದ್ಯುತ್ ತಂತಿಗೆ ತಗುಲಿ ವಿವೇಕ್ ಸಾವನ್ನಪ್ಪಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.